ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಆಯ್ಕೆ

ನವದೆಹಲಿ : 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎಂದು ಕಾಂಗ್ರೆಸ್ ಮಂಗಳವಾರ ಪ್ರಕಟಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಹುಲ್ ಗಾಂಧಿ ಐದು ಅವಧಿಗೆ ಸಂಸದರಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಮಂಗಳವಾರ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್, ದೊಡ್ಡ ವಿಪಕ್ಷವಾಗಿ, ದಶಕದ ನಂತರ ವಿಪಕ್ಷದ ನಾಯಕ ಸ್ಥಾನವನ್ನು (LoP) ಪಡೆದುಕೊಂಡಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ, ಲೋಕಸಭೆಯಲ್ಲಿ ವಿಪಕ್ಷದ ಸ್ಥಾನವನ್ನು ಪಡೆಯಲು ಅಗತ್ಯವಾದ ಶೇಕಡಾ 10 ರಷ್ಟು ಸದಸ್ಯರ ಮಿತಿಯನ್ನು ಅದು ದಾಟಿರಲಿಲ್ಲ. ಈ ಬಾರಿ ಅದು ವಿಪಕ್ಷದ ಸ್ಥಾನ ಪಡೆಯಲು ಬೇಕಾದ ಅಗತ್ಯ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಪಡೆದಿದೆ.

ವಿಪಕ್ಷದ ನಾಯಕನ ನೇಮಕದ ಕುರಿತು ಸೋನಿಯಾ ಗಾಂಧಿ ಹಂಗಾಮಿ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, “ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಲ್ಲಿ ವಿಪಕ್ಷದ ನಾಯಕನನ್ನಾಗಿ ನೇಮಿಸಲಾಗಿದೆ, ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರಿಗೆ ಪತ್ರ ಬರೆದು ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸುವ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
10 ವರ್ಷಗಳ ನಂತರ ಲೋಕಸಭೆಗೆ ವಿಪಕ್ಷ ನಾಯಕನ ಸ್ಥಾನ  
18 ನೇ ಲೋಕಸಭೆಯು ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನನ್ನು (LoP) ಹೊಂದಿರುತ್ತದೆ. 99 ಸಂಸದರನ್ನು ಹೊಂದಿರುವ ಲೋಕಸಭೆಯಲ್ಲಿ ಅತಿ ದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್‌ನ ನಾಯಕ ಈ ಬಾರಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ.
ಹಿಂದಿನ ಎರಡು ಲೋಕಸಭೆಗಳಲ್ಲಿ, ಕಾಂಗ್ರೆಸ್, ಅತಿದೊಡ್ಡ ವಿರೋಧ ಪಕ್ಷವಾದರೂ ಸದನದ ಒಟ್ಟು ಬಲದ ಹತ್ತನೇ ಒಂದು ಭಾಗದಷ್ಟು ಅಗತ್ಯವಿರುವ ಲೋಕಸಭಾ ಸದಸ್ಯರ ಸಂಖ್ಯೆಯನ್ನು ಪಡೆಯದ ಕಾರಣ ಈ ಹುದ್ದೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. 16ನೇ ಲೋಕಸಭೆಯಲ್ಲಿ ಕಾಂಗ್ರೆಸ್ 44 ಸಂಸದರನ್ನು ಹೊಂದಿತ್ತು, 17ನೇ ಲೋಕಸಭೆಯಲ್ಲಿ 54 ಸಂಸದರನ್ನು ಹೊಂದಿತ್ತು.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement