ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಗಮನಾರ್ಹ ಸುಂಕ ಹೆಚ್ಚಳವನ್ನು ಪ್ರಕಟಿಸಿದ್ದು, ಮೊಬೈಲ್ ಫೋನ್ ಬಿಲ್ಗಳು ಹೆಚ್ಚಾಗಲಿವೆ. ಜಿಯೋ ಗುರುವಾರ 12-25% ಹೆಚ್ಚಳ ಮಾಡುವುದಾಗಿ ಪ್ರಕಟಿಸಿತು. ನಂತರ ಶುಕ್ರವಾರ ಏರ್ಟೆಲ್ ಬೆಲೆ ಏರಿಕೆಯ ಘೋಷಣೆ ಮಾಡಿದೆ. ಭಾರ್ತಿ ಏರ್ಟೆಲ್ ಶೇ 10-21ರಷ್ಟು ಹೆಚ್ಚಿಸುವುದಾಗಿ ಹೇಳಿದೆ.
ಜುಲೈ 3ರಿಂದ ಜಾರಿಗೆ ಬರುವಂತೆ ಮೊಬೈಲ್ ಸೇವೆಗಳ ಶುಲ್ಕವನ್ನು ಶೇ 12ರಿಂದ ಶೇ 27ರಷ್ಟು ಏರಿಕೆ ಮಾಡಲಾಗುವುದು ಎಂದು ರಿಲಯನ್ಸ್ ಜಿಯೊ ಇನ್ಫೊಕಾಮ್ ಕಂಪನಿ ತಿಳಿಸಿದೆ.
ಎರಡೂವರೆ ವರ್ಷಗಳ ನಂತರ ಜಿಯೊ ಇನ್ಫೊಕಾಮ್ ಕಂಪನಿ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯೂ ಮುಗಿದಿದೆ. ‘5ಜಿ ಸೇವೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಹೂಡಿಕೆ ಮೂಲಕ ದೂರಸಂಪರ್ಕ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸುಸ್ಥಿರ ಬೆಳವಣಿಗೆಗೆ ಒತ್ತು ನೀಡಬೇಕಿದೆ. ಹಾಗಾಗಿ, ಶುಲ್ಕ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರಿಲಯನ್ಸ್ ಜಿಯೊ ಇನ್ಫೊಕಾಮ್ ಮುಖ್ಯಸ್ಥ ಆಕಾಶ ಅಂಬಾನಿ ತಿಳಿಸಿದ್ದಾರೆ.
ಜಿಯೋ ದರ ಹೆಚ್ಚಳದ ವಿವರಗಳು…
ಜುಲೈ 3 ರಿಂದ, ಜಿಯೋದ ಹೊಸ ದರಗಳು ಜಾರಿಗೆ ಬರಲಿದ್ದು, ಅದರ 47.2 ಕೋಟಿ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಕನಿಷ್ಠ ದರದ ಪ್ಲಾನ್ ಆಗಿದ್ದ 155 ರೂ. 28 ದಿನ ವ್ಯಾಲಿಡಿಟಿ 2 ಜಿಬಿ ಡಾಟಾ ಇದ್ದ ಪ್ಲಾನ್ ಅನ್ನು 189 ರೂ. ಗೆ ಏರಿಕೆ ಮಾಡಲಾಗಿದೆ. 209 ರೂ. ಪ್ರತಿ ದಿನ 1 ಜಿಬಿ ಡಾಟಾ 28 ದಿನದ ಪ್ಲಾನ್ 249 ರೂ.ಗೆ ಏರಿಕೆಯಾಗಿದೆ. ಜನಪ್ರಿಯ ಪ್ಲಾನ್ ಆಗಿದ್ದ 239 ರೂ. ಪ್ರತಿದಿನ 1.5 ಜಿಬಿ ಡಾಟಾ ಪ್ಲಾನ್ 299 ರೂ.ಗೆ ಏರಿಕೆಯಾಗಿದೆ. ಈ ಮೊದಲು 239 ರೂ. ಪ್ಲಾನ್ ಹಾಕಿಕೊಂಡರೆ ಅನಿಯಮಿತ 5ಜಿ ಡಾಟಾ ದೊರಕುತ್ತಿತ್ತು. ಇನ್ನು ಮುಂದೆ ಪ್ರತಿದಿನ 2 ಜಿಬಿ ಡಾಟಾ ಇರುವವರಿಗೆ ಮಾತ್ರ ಅನಿಯಮಿತ 5ಜಿ ದೊರಕುತ್ತದೆ. ಪ್ರಸ್ತುತ 299 ರೂ.ಗೆ ಪ್ರತಿದಿನ 2 ಜಿಬಿ ಡಾಟಾ ಇರುವ ಪ್ಲಾನ್ ದರ 349 ರೂ. ಆಗಲಿದೆ. ಇದೆ. 3 ತಿಂಗಳಿಗೆ (84 ದಿನ) 395 ರೂ. ಇದ್ದ (ಒಟ್ಟು ಡಾಟಾ 6 ಜಿಬಿ) ಪ್ಲಾನಿನ ದರ 479 ರೂ.ಗೆ ಏರಿಕೆಯಾಗಿದೆ.
ವಾರ್ಷಿಕ ಪ್ಯಾಕೇಜ್ 2,999 ರೂ.ಗಳಿಂದ 3,599 ರೂ.ಗಳಿಗೆ ಗರಿಷ್ಠ ಏರಿಕೆಯನ್ನು ಕಾಣಲಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ ರೂ 155 ಯೋಜನೆಗೆ 34 ರೂ. ಏರಿಕೆ ಚಿಕ್ಕ ಹೆಚ್ಚಳವಾಗಿದೆ. ಪೋಸ್ಟ್ ಪೇಡ್ ಪ್ಲಾನ್ ದರವೂ ಏರಿಕೆಯಾಗಿದೆ. ಮಾಸಿಕ 299 ರೂ. ಪ್ಲಾನ್ (30 ಜಿಬಿ ಡಾಟಾ) 349 ರೂ., ಹಾಗೂ 399 ರೂ. ಪ್ಲಾನ್ (75 ಜಿಬಿ ಡಾಟಾ) 449 ರೂ.ಗಳಿಗೆ ಹೆಚ್ಚಳವಾಗಿದೆ.
ಎರಡು ಹೊಸ ಅಪ್ಲಿಕೇಶನ್: ಜಿಯೊ ಸೇಫ್ ಮತ್ತು ಜಿಯೊ ಟ್ರಾನ್ಸ್ಲೇಟ್ ಎಂಬ ಎರಡು ಅಪ್ಲಿಕೇಷನ್ಗಳನ್ನು ಬಿಡುಗಡೆಗೊಳಿಸಿದೆ. ಜಿಯೊ ಸೇಫ್ನ ಮಾಸಿಕ ದರ ₹199 ಆಗಿದೆ. ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್ಫರ್ ಸೇವೆಯನ್ನು ಒದಗಿಸಲಿದೆ. ಜಿಯೊ ಟ್ರಾನ್ಸ್ಲೇಟ್ ಅಪ್ಲಿಕೇಷನ್ನಲ್ಲಿ ತಿಂಗಳಿಗೆ ₹99 ನೀಡಿದರೆ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಅಪ್ಲಿಕೇಷನ್, ಧ್ವನಿ, ಕರೆ, ಸಂದೇಶವನ್ನು ಭಾಷಾಂತರ ಮಾಡಬಹುದಾಗಿದೆ. ಜಿಯೊ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಅಪ್ಲಿಕೇಷನ್ಗಳು ಉಚಿತವಾಗಿ ದೊರೆಯಲಿವೆ.
ರಿಲಾಯನ್ಸ್ ಜಿಯೋ ವಿವಿಧ ಪ್ಲಾನ್ಗಳಿಗೆ ನಿನ್ನೆ(ಗುರುವಾರ) ದರ ಹೆಚ್ಚಿಸಿದ ಒಂದು ದಿನದ ನಂತರ ಇಂದು (ಶುಕ್ರವಾರ) ಭಾರ್ತಿ ಏರ್ಟೆಲ್ ಕೂಡ ರಿಚಾರ್ಜ್ ದರದ ಹೆಚ್ಚಳ ಪ್ರಕಟಿಸಿದೆ. ಭಾರ್ತಿ ಏರ್ಟೆಲ್ ಶೇ 10-21ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಏರ್ಟೆಲ್ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್ಗಳು
ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:
₹179ರಿಂದ ₹199ಕ್ಕೆ ಏರಿಕೆ (28 ದಿನ ವ್ಯಾಲಿಡಿಟಿ)
₹455ರಿಂದ ₹509ಕ್ಕೆ ಏರಿಕೆ (84 ದಿನ ವ್ಯಾಲಿಡಿಟಿ)
₹1,799ರಿಂದ ₹1,999ಕ್ಕೆ ಏರಿಕೆ (365 ದಿನ ವ್ಯಾಲಿಡಿಟಿ)
ಡಾಟಾ ಯೋಜನೆಗಳು…
1 ಜಿಬಿ- ₹265ರಿಂದ ₹ 299ಗೆ ಏರಿಕೆ (28 ದಿನ ವ್ಯಾಲಿಡಿಟಿ)
1.5 ಜಿಬಿ- ₹299ನಿಂದ ₹349ಗೆ ಏರಿಕೆ (28 ದಿನ ವ್ಯಾಲಿಡಿಟಿ)
2.5 ಜಿಬಿ- ₹359 ನಿಂದ ₹409ಗೆ ಏರಿಕೆ (28 ದಿನ ವ್ಯಾಲಿಡಿಟಿ)
3 ಜಿಬಿ-₹399 ನಿಂದ ₹449ಗೆ ಏರಿಕೆ (28 ದಿನ ವ್ಯಾಲಿಡಿಟಿ)
1.5ಜಿಬಿ- ₹479 ನಿಂದ ₹579ಗೆ ಏರಿಕೆ (56 ದಿನ ವ್ಯಾಲಿಡಿಟಿ)
2 ಜಿಬಿ- ₹549 ನಿಂದ ₹649ಗೆ ಏರಿಕೆ (56 ದಿನ ವ್ಯಾಲಿಡಿಟಿ)
1.5ಜಿಬಿ- ₹719 ನಿಂದ ₹859ಗೆ ಏರಿಕೆ (84 ದಿನ ವ್ಯಾಲಿಡಿಟಿ)
2 ಜಿಬಿ- ₹839 ನಿಂದ ₹979ಗೆ ಏರಿಕೆ (84 ದಿನ ವ್ಯಾಲಿಡಿಟಿ)
2 ಜಿಬಿ- ₹2,999 ನಿಂದ ₹3,599ಗೆ ಏರಿಕೆ (365 ದಿನ ವ್ಯಾಲಿಡಿಟಿ)
ಹೆಚ್ಚುವರಿ ಡಾಟಾ ದರ
1 ಜಿಬಿ ಹೆಚ್ಚುವರಿ ಡಾಟಾ ದರ ₹19 ನಿಂದ ₹22ಗೆ ಏರಿಕೆ (1 ದಿನದ ವ್ಯಾಲಿಡಿಟಿ)
2 ಜಿಬಿ ಹೆಚ್ಚುವರಿ ಡಾಟಾ ದರ ₹29 ನಿಂದ ₹33ಗೆ ಏರಿಕೆ (1 ದಿನದ ವ್ಯಾಲಿಡಿಟಿ)
4 ಜಿಬಿ ಹೆಚ್ಚುವರಿ ಡಾಟಾಗೆ ₹65 ನಿಂದ ₹77ಗೆ ಏರಿಕೆ (ಪ್ಲಾನ್ ಕಾಲಮಿತಿಯವರೆಗೂ)
ನಿಮ್ಮ ಕಾಮೆಂಟ್ ಬರೆಯಿರಿ