ಗೂಗಲ್ ಟ್ರಾನ್ಸ್‌ಲೇಟ್‌ ನಲ್ಲಿ ತುಳು ಭಾಷೆ ಸೇರ್ಪಡೆ

ಬೆಂಗಳೂರು: ಗೂಗಲ್ ಟ್ರಾನ್ಸ್​​ಲೇಟ್‌​​ನಲ್ಲಿ 110 ಭಾಷೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಇದರಲ್ಲಿ ಕರ್ನಾಟಕದ ತುಳು ಭಾಷೆಗೂ ಮಾನ್ಯತೆ ದೊರೆತಿದೆ.
ಈ ಹಿಂದೆ ದೇಶ- ವಿದೇಶದ 133 ಭಾಷೆಗಳಿಗೆ ಮಾತ್ರ ಗೂಗಲ್ ಅವಕಾಶ ಮಾಡಿಕೊಟ್ಟಿತ್ತು. ಈಗ ಹೊಸದಾಗಿ 110 ಭಾಷೆಗಳು ಸೇರ್ಪಡೆಗೊಂಡಿವೆ.
ಈಗ ಕನ್ನಡ, ಇಂಗ್ಲಿಷ್ ಹಾಗೂ ಬೇರೆ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದು. ಅಲ್ಲದೆ, ಜೊತೆಗೆ ತುಳು ಶಬ್ದಗಳ ಇಂಗ್ಲಿಷ್‌ ಅರ್ಥವನ್ನೂ ಇಲ್ಲಿ ತಿಳಿದುಕೊಳ್ಳಲು ಅವಕಾಶವಾಗಲಿದೆ. ಗೂಗಲ್ ಟ್ರಾನ್ಸ್​ಲೇಟ್‌​​ನಲ್ಲಿ ತುಳು ಲಿಪಿಯ ಬದಲು ಕನ್ನಡ ಲಿಪಿಯಲ್ಲಿ ತುಳು ಭಾಷೆಗೆ ಅದು ಭಾಷಾಂತರ ಮಾಡುತ್ತಿದೆ. ಜಗತ್ತಿನ ಯಾವುದೇ ಭಾಷೆಯಿಂದ ತುಳು ಭಾಷೆಗೆ ನೇರ ಭಾಷಾಂತರ ಮಾಡಲು ಸಾಧ್ಯವಾಗಲಿದೆ.
ಗೂಗಲ್ ತನ್ನ ಟ್ರಾನ್ಸ್​ಲೇಟ್ ಆ್ಯಪ್ ​ಅಪ್ಡೇಟ್ ಮಾಡಿದರೆ ತುಳು ಭಾಷೆ ಸೇರ್ಪಡೆಯಾಗಿರುವುದು ಗೊತ್ತಾಗುತ್ತದೆ. ಆರ್ಟಿಫಿಶೀಯಲ್ ಇಂಟೆಲಿಜೆನ್ಸಿ (ಎಐ) ಈ ಹೊಸ ಭಾಷೆಯ ಅನುವಾದಕ್ಕೆ ನೆರವಾಗಿದೆ. ಮುಖ್ಯವಾಗಿ ಎಐಯಿಂದ ಈ ಭಾಷೆಗಳನ್ನು ಸುಲಭದಲ್ಲಿ ಅನುವಾದ ಮಾಡಿಕೊಳ್ಳಬಹುದು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement