ಪ್ರವಾಸಿಗರಿಗೆ ಮಾಹಿತಿ: ಭಾರೀ ಮಳೆ, ಯಲ್ಲಾಪುರ ಸಾತೊಡ್ಡಿ ಜಲಪಾತ ವೀಕ್ಷಣೆಗೆ ನಿಷೇಧ

ಯಲ್ಲಾಪುರ : ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಈಗ ಪ್ರವೇಶ ನಿಷೇಧಿಸಲಾಗಿದೆ.
ಭಾರೀ ಮಳೆಯಿಂದಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಪ್ರವಾಸಿಗರಿಗೆ ಗುರುವಾರದಿಂದ ಮುಂದಿನ ಆದೇಶದವರೆಗೆ ಜಲಪಾತ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಈ ಕುರಿತು ಪ್ರವೇಶ ನಿರ್ಬಂಧದ ನಾಮಫಲಕ ಹಾಕಲಾಗಿದೆ.
ಸಹಜವಾಗಿಯೇ ಒಂದಷ್ಟು ಅವಘಡಗಳು ಸಂಭವಿಸುತ್ತಿವೆ.ಈ ನೀರಿನ ಹರಿವು ಹಾಗೂ ಸೆಳೆತ ಜಾಸ್ತಿ ಇರುವಾಗ ಮತ್ತೂ ಅವಘಡಗಳಿಗೆ ಕಾರಣವಾಗಬಾರದು ಹಾಗೂ ಪ್ರವಾಸಿಗರು ನೀರಿಗಿಳಿದು ಅಪಾಯವನ್ನು ತಂದುಕೊಳ್ಳಬಾರದು ಎಂಬ ಕಾರಣದಿಂದ ಈ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement