ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆಕೆಯನ್ನು ಕಾಪಾಡಿದ ಬೀದಿ ನಾಯಿ…!

ಮುಂಬೈ : ಮುಂಬೈನ ವಸಾಯಿಯ ತುಂಗರೇಶ್ವರ ಗಲ್ಲಿಯಲ್ಲಿ ವ್ಯಕ್ತಿಯೊಬ್ಬ 32 ವರ್ಷದ ಅಕೌಂಟೆಂಟ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಬೀದಿ ನಾಯಿಯೊಂದು ಮಹಿಳೆಯ ರಕ್ಷಣೆಗೆ ಬಂದಿದ್ದು, ಬೀದಿ ನಾಯಿ ಬೊಗಳಿ ವ್ಯಕ್ತಿಯನ್ನು ಹೆದರಿಸಿ ಓಡಿಸಿ ಮಹಿಳೆಯನ್ನು ಪಾರು ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ ಎಂದು ವರದಿಯಾಗಿದೆ.
ಆಪಾದಿತ ದಾಳಿಕೋರ ಸುಮಾರು ಏಳು ಅಡಿ ಎತ್ತರದ ಸಂದೀಪ ಖೋತ್ (35) ಎಂದು ಗುರುತಿಸಲಾಗಿದ್ದು, ರಾತ್ರಿ ವೇಳೆ ಹಿಂದಿನಿಂದ ಮಹಿಳೆಯ ಬಳಿಗೆ ಬಂದು, ಆಕೆಯನ್ನು ನೆಲಕ್ಕೆ ತಳ್ಳಿ, ಅವಳ ಬಾಯಿಯನ್ನು ಮುಚ್ಚಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಅತ್ಯಾಚಾರದ ಯತ್ನದ ವೇಳೆ ಬೀದಿ ನಾಯಿಯೊಂದು ಆಗಮಿಸಿ ಆರೋಪಿಯತ್ತ ಬೊಗಳಿ ದಾಳಿಕೋರನನ್ನು ಹೆದರಿಸಿತು. ನಾಯಿಗೆ ಹೆದರಿದ ಆತ ಹಿಡಿತವನ್ನು ಸಡಿಲಗೊಳಿಸಿದ. ಸಿಕ್ಕ ಅವಕಾಶವನ್ನು ಬಳಸಿಕೊಂಡ ಮಹಿಳೆ ದುಷ್ಕರ್ಮಿಯನ್ನು ದೂರ ತಳ್ಳಿ ಮುಖ್ಯ ರಸ್ತೆಯತ್ತ ಓಡಿ ಅಪಾಯದಿಂದ ಪಾರಾಗಿದ್ದಾಳೆ, ಆದರೂ ಆರೋಪಿ ಮಹಿಳೆಯ ಐಫೋನ್‌ನೊಂದಿಗೆ ಪರಾರಿಯಾಗಿದ್ದಾನೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮಹಿಳೆ, “ನಾನು ತುಂಗರೇಶ್ವರ ಲೇನ್ ಮೂಲಕ ನಡೆದು ಝೈಗೋಟ್ ಐವಿಎಫ್ ಕೇಂದ್ರವನ್ನು ತಲುಪಿದಾಗ, 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದ. ಏಕಾಏಕಿ ನನ್ನ ಮುಂದೆ ಬಂದು ಅತ್ಯಾಚಾರ ಮಾಡುವುದಾಗಿ ಹೇಳಿದ್ದಾನೆ. ನಂತರ ತಾನು ಕಿರುಚುವುದನ್ನು ತಡೆಯಲು ನನ್ನ ಬಾಯಿಯ ಮೇಲೆ ಕೈ ಹಾಕಲು ಪ್ರಯತ್ನಿಸಿದ ಮತ್ತು ನನ್ನನ್ನು ನೆಲಕ್ಕೆ ಕಡವಿದ ಎಂದು ಹೇಳಿದ್ದಾರೆ.
ದೂರುದಾರರ ಹೇಳಿಕೆಯ ಪ್ರಕಾರ, ಆಗ ಇದಕ್ಕಿದ್ದಂತೆ ಬೀದಿ ನಾಯಿಯೊಂದು ಕಾಣಿಸಿಕೊಂಡು ಆತನೆಡೆಗೆ ಬೊಗಳಲು ಪ್ರಾರಂಭಿಸಿತು. ಆಗ ಆತ ತನ್ನ ಹಿಡಿತವನ್ನು ಕಳೆದುಕೊಂಡ. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ನಾನು ಆ ವ್ಯಕ್ತಿಯನ್ನು ಒದ್ದೆ, ಅದರ ನಂತರ ಆತ ತನ್ನ ಸಮತೋಲನವನ್ನು ಕಳೆದುಕೊಂಡ. ನಂತರ ಅವರು ನನ್ನ ಐಫೋನ್ ಅನ್ನು ಕಸಿದುಕೊಂಡು ಮತ್ತೆ ನನ್ನನ್ನು ಹಿಡಿಯಲು ಪ್ರಯತ್ನಿಸಿದ. ಆದರೆ ನಾನು ಅವನನ್ನು ತಳ್ಳಿ ಓಡಿದೆ ಎಂದು ಮಹಿಳೆ ಹೇಳಿದ್ದಾರೆ. ಈ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement