T20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ನೀಡಿದ 125 ಕೋಟಿ ರೂ. ಬಹುಮಾನದ ಹಂಚಿಕೆ ಹೇಗೆ ? ಯಾರಿಗೆ ಎಷ್ಟು ಸಿಗಲಿದೆ? ವಿವರ ಇಲ್ಲಿದೆ

 ನವದೆಹಲಿ: ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ 15 ಸದಸ್ಯರ ಭಾತರದ ತಂಡವು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆದ T20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಕಪ್‌ ಗೆದ್ದ ನಂತರ ಬಿಸಿಸಿಐ ಅವರಿಗೆ 125 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿತು.
ಒಟ್ಟು 42 ಜನರ ತಂಡದ ಭಾರತ ತಂಡದ ಸದಸ್ಯರು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ ನಲ್ಲಿ ನಡೆದ ವಿಶ್ವಕಪ್‌ ಕ್ರಿಕೆಟ್ ಈವೆಂಟ್‌ಗೆ ಪ್ರಯಾಣಿಸಿದ್ದಾರೆ. ಇದರಲ್ಲಿ 15 ತಂಡದ ಆಟಗಾರರು, ಸಹಾಯಕ ಸಿಬ್ಬಂದಿ, ಮೀಸಲು ಆಟಗಾರರು, ಪಿಸಿಯೊ ಥೆರಪಿಸ್ಟ್‌ ಇತರರು ಸೇರಿದ್ದಾರೆ. ಬಹುಮಾನದ ಮೊತ್ತ 125 ಕೋಟಿ ರೂ. ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇವಲ ಆಟಗಾರರಿಗೆ ಮಾತ್ರ ನೀಡುತ್ತಿಲ್ಲ. ಟೀಂ ಇಂಡಿಯಾದ 42 ಸದಸ್ಯರಿಗೂ ಇದನ್ನು ಹಂಚಲಾಗುತ್ತದೆ. ಆದಾಗ್ಯೂ, ಬಹುಮಾನದ ಹಣದ ಪಾಲು ಅವರವರ ಸ್ಥಾನಕ್ಕೆ ತಕ್ಕಂತೆ ಬದಲಾಗುತ್ತದೆ.

ಟಿ20 ವಿಶ್ವಕಪ್ ವಿಜೇತ ಭಾರತದ ತಂಡ ಬಿಸಿಸಿಐನ 125 ರೂಪಾಯಿ ನಗದು ಬಹುಮಾನ ಹೇಗೆ ಹಂಚುತ್ತದೆ…?
ಇವರಿಗೆ 5 ಕೋಟಿ ರೂ ಹಂಚಿಕೆ : 15 ಆಟಗಾರರ ಭಾರತೀಯ ಟಿ20 ವಿಶ್ವಕಪ್ ತಂಡ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತದೆ.
ಭಾರತದ T20 ವಿಶ್ವಕಪ್ 2024 ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಿವಂ ದುಬೆ, ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅವರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

2.5 ಕೋಟಿ ರೂ. ಹಂಚಿಕೆ : ವಿಕ್ರಮ ರಾಥೋಡ್‌ (ಬ್ಯಾಟಿಂಗ್ ಕೋಚ್), ಪಾರಸ್ ಮಾಂಬ್ರೆ (ಬೌಲಿಂಗ್ ಕೋಚ್) ಮತ್ತು ಟಿ. ದಿಲೀಪ್ (ಫೀಲ್ಡಿಂಗ್ ಕೋಚ್) ಅವರಿಗೆ ತಲಾ 2.5 ಕೋಟಿ ರೂ. ನೀಡಲಾಗುತ್ತದೆ.
2 ಕೋಟಿ ರೂ.ಹಂಚಿಕೆ : ಕಮಲೇಶ ಜೈನ್ , ಯೋಗೇಶ ಪರ್ಮಾರ್ ಮತ್ತು ತುಳಸಿ ರಾಮ ಯುವರಾಜ (ಪಿಸಿಯೊ ಥೆರಪಿಸ್ಟ್ಸ್); ರಾಘವೇಂದ್ರ ಡಿವಿಗಿ, ನುವಾನ್ ಉದೆನೆಕೆ ಮತ್ತು ದಯಾನಂದ ಗರಾನಿ (ಥ್ರೋಡೌನ್ ತಜ್ಞರು), ರಾಜೀವಕುಮಾರ ಮತ್ತು ಅರುಣ ಕಾನಡೆ (ಮಸಾಜುಗಾರರು) ಮತ್ತು ಸೋಹಂ ದೇಸಾಯಿ (ಶಕ್ತಿ ಮತ್ತು ಕಂಡೀಷನಿಂಗ್ ಕೋಚ್) ಇವರಿಗೆ ತಲಾ 2 ಕೋಟಿ ರೂ. ನೀಡಲಾಗುತ್ತದೆ.
1 ಕೋಟಿ ರೂ. ಹಂಚಿಕೆ : ಅಜಿತ ಅಗರ್ಕರ್ (ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ) , ಶಿವಸುಂದರ ದಾಸ್, ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಅಂಕೋಲಾ (ಆಯ್ಕೆಗಾರರು); ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ (ಮೀಸಲು ಆಟಗಾರರು) ಇವರಿಗೆ ತಲಾ 1 ಕೋಟಿ ರೂ. ನೀಡಲಾಗುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement