ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ ಪಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಮಕ್ಕಳನ್ನು ಎಲ್‌ಕೆಜಿ (LKG), ಯುಕೆಜಿ (UKG) ಹಾಗೂ ಒಂದನೇ ತರಗತಿಗೆ ದಾಖಲಿಸಲು ರಾಜ್ಯ ಸರ್ಕಾರವು ಈಗಾಗಲೇ ಕನಿಷ್ಠ ವಯೋಮಿತಿ ನಿಗದಿಪಡಿಸಿದ್ದ ರಾಜ್ಯ ಸರ್ಕಾರ ಈಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ.
ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4 ವರ್ಷ ಕನಿಷ್ಠ ವಯೋಮಿತಿಯಾದರೆ, ಗರಿಷ್ಠ ವಯೋಮಿತಿ 6 ವರ್ಷ ಯುಕೆಜಿಗೆ  5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿ. ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ ವಯೋಮಿತಿ 8 ವರ್ಷ ಇರಬೇಕಾಗುತ್ತದೆ. ಎಲ್‌ಕೆಜಿಗೆ 2023-24, ಯುಕೆಜಿಗೆ 2024-25 ಹಾಗೂ ಒಂದನೇ ತರಗತಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ಹೊಸ ಆದೇಶವು ಅನ್ವಯವಾಗಲಿದೆ. ಡ್ರಾಪ್‌ಔಟ್‌ ಆಗುವ ಮಕ್ಕಳ ಸಂಖ್ಯೆ ಇಳಿಕೆ ಮಾಡುವ ಉದ್ದೇಶದಿಂದ ಸರ್ಕಾರವು ಹೊಸ ಆದೇಶ ಹೊರಡಿಸಿದೆ. (ಇಲ್ಲಿ1st standard Admission maximum age  ಪಿಡಿಎಫ್‌  ನಲ್ಲಿ  ಆದೇಶ ನೋಡಬಹುದು)

ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಹೀಗಾಗಿ ಈ ಶೈಕ್ಷಣಿಕ ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ಆಗಿರಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆಯ ನಂತರ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿಯನ್ನು ಅಧ್ಯಾತ್ಮ ಭೂಮಿಯನ್ನಾಗಿ ಪರಿವರ್ತಿಸಿದ ಅದ್ವೆೈತ ಸಾಮ್ರಾಟ-ವೇದಾಂತ ಸಾರ್ವಭೌಮ ಶ್ರೀ ಸಿದ್ಧಾರೂಢರು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement