ಅಮಾನತುಗೊಂಡ 14 ಉತ್ಪನ್ನಗಳ ಮಾರಾಟ ಸ್ಥಗಿತ ; ಅಂಗಡಿಗಳಿಂದ ಹಿಂಪಡೆಯಲು ಸೂಚನೆ : ಸುಪ್ರೀಂ ಕೋರ್ಟ್‌ ಗೆ ತಿಳಿಸಿದ ಪತಂಜಲಿ

ನವದೆಹಲಿ: ನವದೆಹಲಿ: ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರವು ಏಪ್ರಿಲ್‌ನಲ್ಲಿ ಉತ್ಪಾದನಾ ಪರವಾನಗಿ ಅಮಾನತುಗೊಳಿಸಿದ್ದರಿಂದ 14 ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್‌ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ 5,606 ಫ್ರಾಂಚೈಸ್ ಸ್ಟೋರ್‌ಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಪತಂಜಲಿ ಸಂಸ್ಥೆ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. ಅದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿದೆ.
ಅಲ್ಲದೆ, ಈ 14 ಉತ್ಪನ್ನಗಳ ಜಾಹೀರಾತುಗಳನ್ನು ಎಲ್ಲ ಮಾಧ್ಯಮ ವೇದಿಕೆಗಳಿಂದಲೂ ಹಿಂಪಡೆಯಲು ಸೂಚನೆ ನೀಡಲಾಗಿದೆ ಎಂದು ಅದು ಹೇಳಿದೆ.
ಬಾಬಾ ರಾಮದೇವ  ಮಾಲೀಕತ್ವದ ಪತಂಜಲಿ ಕಂಪನಿಯು ಉತ್ತರಾಖಾಂಡದಲ್ಲಿದ್ದು, ಆ ಕಂಪನಿಯ 14 ಉತ್ಪನ್ನಗಳ ಜಾಹೀರಾತಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಉತ್ತರಾಖಾಂಡ ಸರ್ಕಾರ, ಆ ಉತ್ಪನ್ನಗಳ ತಯಾರಿಕೆಗಾಗಿ ನೀಡಲಾಗಿದ್ದ ಲೈಸನ್ಸ್ ಗಳನ್ನು ರದ್ದು ಮಾಡಿತ್ತು. ಆ ಹಿನ್ನೆಲೆಯಲ್ಲಿ, ಆ ಉತ್ಪನ್ನಗಳನ್ನು ದೇಶದ ಮಾರುಕಟ್ಟೆಯಿಂದ ಹಿಂಪಡೆಯಬೇಕೆಂದು ಸುಪ್ರೀಂ ಕೋರ್ಟ್ ಕೂಡ ತಾಕೀತು ಮಾಡಿತ್ತು. ಆ ಹಿನ್ನೆಲೆಯಲ್ಲಿ, 14 ಉತ್ಪನ್ನಗಳನ್ನು ದೇಶದ 5,606 ಫ್ರಾಂಚೈಸಿಗಳಿಂದ ಹಿಂಪಡೆಯಲಾಗುತ್ತಿದೆ ಎಂದು ಖುದ್ದು ಪತಂಜಲಿ ಸಂಸ್ಥೆಯೇ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   ಸೈಫ್ ಅಲಿ ಖಾನಗೆ ಚಾಕು ಇರಿತ : ಮಧ್ಯಪ್ರದೇಶದಲ್ಲಿ ಶಂಕಿತನೊಬ್ಬನ ಬಂಧನ

ಏನಿದು ಪ್ರಕರಣ?
ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿಯಿಂದ ಹಾಗೂ ಆ ಕಂಪನಿಯ ಸಹ ಸಂಸ್ಥೆಯಾದ ದಿವ್ಯಾ ಫಾರ್ಮಸಿ ಸಂಸ್ಥೆಯು ತಮ್ಮ 14 ಉತ್ಪನ್ನಗಳ ಜಾಹೀರಾತುಗಳಲ್ಲಿ, ಅಲೋಪತಿ (ಆಂಗ್ಲ ವೈದ್ಯಕೀಯ ಪದ್ಧತಿ) ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಂಥ ವಿಚಾರಗಳನ್ನು ಮಂಡಿಸುತ್ತಿವೆ. ಆ ಮೂಲಕ, ಅಲೋಪತಿ ವೈದ್ಯಕೀಯ ಪದ್ಧತಿಯ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುವಂಥ ಕೆಲಸವನ್ನು ಪತಂಜಲಿ ಕಂಪನಿ ಮಾಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಅಷ್ಟೇ ಅಲ್ಲದೆ, ಕೊರೊನಾ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸಿದ್ದ ಲಸಿಕಾ ಸಂಶೋಧನಾ ಪ್ರಯತ್ನವನ್ನು ಹಾಗೂ ಕೊರೊನಾ ನಿಗ್ರಹಕ್ಕಾಗಿ ಅಲೋಪತಿ ವಿಧಾನದಲ್ಲಿ ಕೈಗೊಳ್ಳಲಾಗಿದ್ದ ಕ್ರಮಗಳನ್ನು ಜಾಹೀರಾತುಗಳಲ್ಲಿ ಟೀಕಿಸಲಾಗಿತ್ತು. ಆ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಪತಂಜಲಿ ಕಂಪನಿಯು ಮಾಡಿತ್ತು ಎಂದು ಐಎಂಎ, ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿತ್ತು.

ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಜನರಿಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಬಾಬಾ ರಾಮದೇವ ಬಾಬಾ ಹಾಗೂ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕರಾದ ಆಚಾರ್ಯ ಬಾಲಕೃಷ್ಣ ಅವರಿಗೆ ಸಾರ್ವತ್ರಿಕವಾಗಿ ಜಾಹೀರಾತುಗಳನ್ನು ನೀಡಿಯೇ ಕ್ಷಮೆ ಕೋರಬೇಕು ಎಂದು ಹೇಳಿತ್ತು.
ಆದರೆ, ಬಾಬಾ ರಾಮದೇವ ಸುಪ್ರೀಂ ಕೋರ್ಟ್‌ ಸೂಚಿಸಿದಂತೆ ಕ್ಷಮೆ ಕೋರಿರಲಿಲ್ಲ. ಇದರಿಂದ ನ್ಯಾಯಾಂಗ ನಿಂದನೆಯ ಮತ್ತೊಂದು ಪ್ರಕರಣ ದಾಖಲಾಯಿತು. ಕಾರಣವಾಯಿತು. ಇದರಿಂದ ತೀವ್ರ ಅಸಮಾಧಾನಗೊಂಡ ಸುಪ್ರೀಂ ಕೋರ್ಟ್‌ 14 ಉತ್ಪನ್ನಗಳ ಜಾಹೀರಾತುಗಳಲ್ಲಿ ಜನರನ್ನು ದಾರಿ ತಪ್ಪಿಸಿರುವುದಕ್ಕೆ ಪ್ರತಿಯಾಗಿ ಯಾವ ಅಳತೆಯ ಜಾಹೀರಾತುಗಳಲ್ಲಿ ದಾರಿ ತಪ್ಪಿಸಲಾಗಿತ್ತೋ, ಅಷ್ಟೇ ಅಳತೆಯ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಕ್ಷಮೆ ಕೋರಬೇಕು ಎಂದು ಸೂಚಿಸಿತು. ಅದರಿಂದ ಪತಂಜಲಿ ಕಂಪನಿಯು ತನ್ನ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಕ್ಷಮೆಯ ಜಾಹೀರಾತುಗಳನ್ನು ನೀಡಿತು.

ಪ್ರಮುಖ ಸುದ್ದಿ :-   ಅದೃಷ್ಟ ಅಂದ್ರೆ ಇದಪ್ಪ...| ಬಹ್ರೇನ್‌ ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದ ಕೇರಳದ ವ್ಯಕ್ತಿ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement