ಬೆಂಗಳೂರು: ಕೆಎಸ್‌ಆರ್‌ಟಿಸಿ ಜೋಗ ಟೂರ್ ಪ್ಯಾಕೇಜ್ ಹಾಗೂ ಸೋಮನಾಥಪುರ ಟೂರ್ ಪ್ಯಾಕೇಜ್ ಮತ್ತು ರೂಪಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು –ಜೋಗ ಜಲಪಾತ” ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ಯಾಕೇಜ್ ಟೂರ್ (KSRTC Package Tour) ಆಯೋಜಿಸಿದೆ.
ಅದೇರೀತಿ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ “ಬೆಂಗಳೂರು–ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಪ್ಯಾಕೇಜ್ ಟೂರ್ ಆಯೋಜಿಸಿದೆ.
ಜೋಗ ಟೂರ್ ಪ್ಯಾಕೇಜ್…
ಬೆಂಗಳೂರು-ಜೋಗ ಜಲಪಾತ ಮಾರ್ಗದ ಪ್ಯಾಕೇಜ್ ಪ್ರವಾಸದಡಿ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸಲಿದೆ. ಸಾಗರ, ವರದಹಳ್ಳಿ, ವರದಾಮೂಲ, ಇಕ್ಕೇರಿ, ಕೆಳದಿ, ಜೋಗಕ್ಕೆ ಭೇಟಿ ನೀಡಲಿದೆ. ಪ್ರತಿ ಶುಕ್ರವಾರ- ಶನಿವಾರ ಈ ಪ್ರವಾಸ ಇರಲಿದ್ದು, ಜುಲೈ 19 ರಂದು ರಾತ್ರಿ 10:30ಕ್ಕೆ ಬೆಂಗಳೂರಿನಿಂದ ಬಸ್ ಹೊರಡಲಿದ್ದು, ಶನಿವಾರ ಬೆಳಗ್ಗೆ 5:30ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ ಪಡೆದು, ಉಪಾಹಾರ ಮುಗಿಸಿ ವರದಹಳ್ಳಿಗೆ ಭೇಟಿ ನೀಡಲಾಗುತ್ತದೆ. ಅಲ್ಲಿಂದ ವರದಾಮೂಲ, ಇಕ್ಕೇರಿ, ಕೆಳದಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಾಗರಕ್ಕೆ ವಾಪಸ್ ಕರೆ ತರಲಾಗುತ್ತದೆ. ಸಾಗರದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಜೋಗಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಜಲಪಾತ ವೀಕ್ಷಣೆ ಬಳಿಕ ಸಂಜೆ 7 ಗಂಟೆಗೆ ಮತ್ತೆ ಸಾಗರಕ್ಕೆ ಕರೆತರಲಾಗುತ್ತದೆ. ಇಲ್ಲಿ ಸ್ವಲ್ಪ ಬಿಡುವು ಇರುತ್ತದೆ. ನಂತರ ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಬಸ್ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ. ವಯಸ್ಕರಿಗೆ ₹ 3,000 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹ 2,800 ದರ ನಿಗದಿ ಮಾಡಲಾಗಿದೆ.
ಸೋಮನಾಥಪುರ ಟೂರ್ ಪ್ಯಾಕೇಜ್….
ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಮಾರ್ಗದ ಪ್ಯಾಕೇಜ್ ಪ್ರವಾಸವು ಪ್ರತಿ ಶನಿವಾರ-ಭಾನುವಾರ ಇರಲಿದ್ದು, ಜುಲೈ 20ರಂದು ಜುಲೈ 20 ರಂದು ಶನಿವಾರ ಬೆಳಿಗ್ಗೆ 6:30ಕ್ಕೆ ಬೆಂಗಳೂರಿನಿಂದ ಬಸ್ ಹೊರಡಲಿದೆ. ಅಲ್ಲಿಂದ ಮದ್ದೂರಿನಲ್ಲಿ ಉಪಾಹಾರ ಮುಗಿಸಿ ಸೋಮನಾಥಪುರಕ್ಕೆ ಮೊದಲು ಭೇಟಿ ನೀಡಲಾಗುತ್ತದೆ. ಅಲ್ಲಿಂದ ತಲಕಾಡಿಗೆ ತೆರಳಿ ಪಂಚಲಿಂಗಗಳ ದರ್ಶನ ಪಡೆದು ಬಳಿಕ ಊಟದ ವಿರಾಮ ಇರಲಿದೆ. ಮಧ್ಯಾಹ್ನ 3 ಗಂಟೆಗೆ ಮಧ್ಯರಂಗಕ್ಕೆ ಭೇಟಿ ನೀಡಿ ರಂಗನಾಥಸ್ವಾಮಿಯ ದರ್ಶನ ಪಡೆದು, ಬಳಿಕ ಭರಚುಕ್ಕಿ ಮತ್ತು ಗಗನಚುಕ್ಕಿಗಳ ವೀಕ್ಷಣೆ ಮಾಡಲಾಗುತ್ತದೆ. ಅನಂತರ ಗಗನಚುಕ್ಕಿಯಿಂದ ಸಂಜೆ 6.15ಕ್ಕೆ ಬೆಂಗಳೂರಿಗೆ ಬಸ್ ಹೊರಡಲಿದ್ದು, ರಾತ್ರಿ 9 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.
ವಯಸ್ಕರಿಗೆ ₹ 500 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹ 350 ದರ ನಿಗದಿ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ