ವೀಡಿಯೊ..| ಟ್ರಂಪ್‌ ಮೇಲೆ ಗುಂಡಿನ ದಾಳಿ ; ಆರೋಪಿಯ ʼಸ್ಕೂಲ್ ಶೂಟಿಂಗ್ ಕ್ಲಬ್ʼ ಸೇರುವ ಪ್ರಯತ್ನ ವಿಫಲ..ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ 20 ವರ್ಷದ ವ್ಯಕ್ತಿ ತನ್ನ ಪ್ರೌಢಶಾಲೆಯ ರೈಫಲ್ ತಂಡ ಸೇರಲು ಪ್ರಯತ್ನಿಸಿದ್ದ, ಆದರೆ ʼತೀರ ಕೆಟ್ಟದಾದʼ ಶಾಟ್ ಹೊಡೆದಿದ್ದಕ್ಕೆ ಎಂದು ಆತನನ್ನು ತಿರಸ್ಕರಿಸಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ, ಈತ ವಿಶ್ವದ ಅತಿದೊಡ್ಡ ಹಣ ವ್ಯವಸ್ಥಾಪನಾ ಕಂಪನಿ ʼಬ್ಲ್ಯಾಕ್‌ರಾಕ್ ಇಂಕ್‌ʼನ 2022ರ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದ ಎಂದು ಕಂಪನಿ ತಿಳಿಸಿದೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬಾತ ಶನಿವಾರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ 78 ವರ್ಷದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ಟ್ರಂಪ್ ಮೇಲೆ‌ ಗುಂಡಿನ ದಾಳಿ ಮಾಡಿದ ವೇಳೆ ಸಿಕ್ರೆಟ್‌ ಸರ್ವೀಸ್‌ ಸಿಬ್ಬಂದಿ ಗುಂಡಿನಿಂದ ಕೊಲ್ಲಲ್ಪಟ್ಟ.
ಆತ ಟ್ರಂಪ್ ಮಾತನಾಡುತ್ತಿದ್ದ ವೇದಿಕೆಯಿಂದ 140 ಮೀಟರ್‌ಗಳಷ್ಟು ದೂರದ ಮೇಲ್ಛಾವಣಿಯ ಮೇಲಿನಿಂದ ತನ್ನ ತಂದೆ ಖರೀದಿಸಿದ AR-15-ಶೈಲಿಯ ಸೆಮಿಯಾಟೊಮ್ಯಾಟಿಕ್ ರೈಫಲ್‌ನಿಂದ ಗುಂಡು ಹಾರಿಸಲು ಪ್ರಾರಂಭಿಸಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಟ್ರಂಪ್ ಅವರ ಬಲ ಕಿವಿಗೆ ತಗುಲಿತು ಹಾಗೂ 50 ವರ್ಷದ ವ್ಯಕ್ತಿ ಸಾವಿಗೀಡಾದರು/ ಮತ್ತು ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡರು.

  ಶೂಟಿಂಗ್ ಕ್ಲಬ್‌ನ ಸದಸ್ಯನಾಗಲು ವಿಫಲ ಯತ್ನ
ಆಘಾತಕಾರಿ ಗುಂಡಿನ ದಾಳಿ ಸಂಭವಿಸಿದ ಸ್ಥಳದಿಂದ ಸುಮಾರು ಒಂದು ಗಂಟೆ ದೂರದಲ್ಲಿರುವ ಬೆಥೆಲ್ ಪಾರ್ಕ್‌ನ ನಿವಾಸಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ಕ್ಲೈರ್ಟನ್ ಸ್ಪೋರ್ಟ್ಸ್‌ಮೆನ್ ಕ್ಲಬ್ ಎಂಬ ಸ್ಥಳೀಯ ಶೂಟಿಂಗ್ ಕ್ಲಬ್‌ನ ಸದಸ್ಯನಾಗಿದ್ದ.
ಆತ ಪ್ರೌಢಶಾಲೆಯಲ್ಲಿ ರೈಫಲ್ ತಂಡ ಸೇರಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಆತ ಹಾರಿಸಿದ ಗುಂಡು ಗುರಿ ತಲುಪದ ಕಾರಣ ಆತನನ್ನು ತಿರಸ್ಕರಿಸಲಾಗಿತ್ತು ಎಂದು ದಿ ಪೋಸ್ಟ್ ವರದಿ ಮಾಡಿದೆ.
ಆತ ಒಮ್ಮೆ 20 ಅಡಿಗಳಷ್ಟು ಹತ್ತಿರದ ಟಾರ್ಗೆಟ್‌ ಹೊಡೆಯುವಲ್ಲಿ ವಿಫಲನಾಗಿದ್ದ ಎಂದು ಮಾಜಿ ವಿದ್ಯಾರ್ಥಿ ಜೇಮ್ಸನ್ ಮರ್ಫಿ ದಿ ಪೋಸ್ಟ್‌ಗೆ ತಿಳಿಸಿದರು. “ಆತ ಪ್ರಯತ್ನಿಸಿದ … ಮತ್ತು ಅಂತಹ ಕೆಟ್ಟ ಶಾಟ್ ನಿಂದಾಗಿ ತಂಡಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಮೊದಲ ದಿನದ ನಂತರ ಆತ ತನ್ನ ಪ್ರಯತ್ನ ಕೈಬಿಟ್ಟ ಎಂದು ಅವರು ಹೇಳಿದರು. “ಕ್ರೂಕ್ಸ್‌ಗೆ ಶೂಟ್ ಮಾಡಲು ಸಾಧ್ಯವಾಗಲಿಲ್ಲ. ಆತನದ್ದು ಭಯಾನಕ ಹೊಡೆತವಾಗಿತ್ತು ಎಂದು ಇನ್ನೊಬ್ಬ ಸಹಪಾಠಿ ದಿ ಪೋಸ್ಟ್‌ಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

ಥಾಮಸ್ ಮ್ಯಾಥ್ಯೂ ಕ್ರೂಕ್ಸ್ “ಶಾಂತ” ವ್ಯಕ್ತಿ
ಆತ ಬುದ್ಧಿವಂತ ಆದರೆ “ಶಾಂತ” ಸಹಪಾಠಿ ಎಂಬ ಖ್ಯಾತಿಯೊಂದಿಗೆ 2022 ರಲ್ಲಿ ಪ್ರೌಢಶಾಲೆಯಿಂದ ಪದವಿ ಪಡೆದಿದ್ದ. 2022 ರಲ್ಲಿ ಬೆಥೆಲ್ ಪಾರ್ಕ್ ಹೈಸ್ಕೂಲ್‌ನಲ್ಲಿ ಶಾಲಾ ಸಲಹೆಗಾರರಾಗಿದ್ದು, ತಮ್ಮ ಕೆಲಸದಿಂದ ನಿವೃತ್ತರಾದ ಜಿಮ್ ನ್ಯಾಪ್ ಅವರ ಪ್ರಕಾರ, ಕ್ರೂಕ್ಸ್ ಯಾವಾಗಲೂ ” ಶಾಂತ ಕೆಲವು ಸ್ನೇಹಿತರನ್ನು ಹೊಂದಿದ್ದರೂ ಸಹ ತನ್ನಷ್ಟಕ್ಕೇ ತಾನು ಇರುವವನಾಗಿದ್ದ ಎಂದು ಹೇಳಿದ್ದಾರೆ. ಈ ವೇಳೆ ಆತ ನರ್ಸಿಂಗ್ ಹೋಮ್‌ನಲ್ಲಿ ಆಹಾರ ಸಹಾಯಕರಾಗಿ ಕೆಲಸ ಮಾಡುತ್ತಿದ್ದನಂತೆ.

ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ…
ಥಾಮಸ್ ಮ್ಯಾಥ್ಯೂ ಕ್ರೂಕ್ಸ್, ವಿಶ್ವದ ಅತಿದೊಡ್ಡ ಹಣ ವ್ಯವಸ್ಥಾಪನಾ ಕಂಪನಿ ಬ್ಲ್ಯಾಕ್‌ರಾಕ್ ಇಂಕ್‌ನ 2022 ರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ.
ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್ ಹೈಸ್ಕೂಲ್‌ನಲ್ಲಿ ಚಿತ್ರೀಕರಿಸಲಾದ ಜಾಹೀರಾತಿನಲ್ಲಿ ಕ್ರೂಕ್ಸ್ ಮತ್ತು ಇತರ ಹಲವಾರು ವಿದ್ಯಾರ್ಥಿಗಳನ್ನು ಜಾಹೀರಾತಿನ ಹಿನ್ನೆಲೆಯಲ್ಲಿ ತೋರಿಸಲಾಗಿದೆ ಎಂದು ಹೂಡಿಕೆ ದೈತ್ಯ ಹೇಳಿಕೆಯಲ್ಲಿ ತಿಳಿಸಿದೆ. ಕ್ರೂಕ್ಸ್ 2022 ರಲ್ಲಿ ಶಾಲೆಯಿಂದ ಪದವಿ ಪಡೆದಿದ್ದ.
ಜಾಹೀರಾತು ವೀಡಿಯೊ ತನಿಖಾ ಅಧಿಕಾರಿಗಳಿಗೆ ಲಭ್ಯವಿದೆ ಎಂದು ಬ್ಲ್ಯಾಕ್‌ರಾಕ್ ಹೇಳಿದೆ. ಆದಾಗ್ಯೂ, ಜಾಹೀರಾತನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement