ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಜಿಲ್ಲ ತತ್ತರಗೊಂಡಿದೆ. ಭಾರಿ ಮಳೆಯ ಕಾರಣದಿಂದ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದ ಬಳಿ ಭೂ ಕುಸಿತವಾಗಿದೆ.
ಶಿರಸಿ- ಕುಮಟಾ ಮಧ್ಯ ರಸ್ತೆ ಸಂಚಾರ ಕೆಲಕಾಲ ಬಂದ್ ಆಗಿದೆ. ರಾಗಿ ಹೊಸಳ್ಳಿ ಬಳಿ ಸಹ ಭೂ ಕುಸಿತವಾಗಿದ್ದು, ರಸ್ತೆಯಲ್ಲಿ ಅಪಾರ ಪ್ರಮಾಣದ ಮಣ್ಣು ತೆರವು ಕಾರ್ಯಚರಣೆ ಭರದಿಂದ ಸಾಗಿದ್ದು, ಸ್ವಲ್ಪಸಮಯದ ನಂತರ ವಾಹನ ಸಂಚಾರ ಆರಂಭವಾಗಬಹುದು.
ಭಾರಿ ಮಳೆಯಿಂದ ಇಂದು ಮಂಗಳವಾರ ಬೆಳಗಿನ ಜಾವ 2ರ ಸುಮಾರಿಗೆ ಶಿರಸಿ – ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೊಸಳ್ಳಿ ಮಧ್ಯೆ ಗುಡ್ಡ ಕುಸಿದು ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಹೀಗಾಗಿ ಬಂದ್ ಆಗಿದ್ದು ಜೆಸಿ.ಬಿ ಬಳಸಿ ಮಣ್ಣನ್ನು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಮಣ್ಣು ತೆರವಾಗಿ ವಾಹನ ಸಂಚಾರ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ