
ಬೆಂಗಳೂರು: ಬೆಂಗಳೂರು ನಗರದ ಮಾಲ್ ಒಂದರಲ್ಲಿ ರೈತನಿಗೆ ಅವಮಾನ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.
ಹಾವೇರಿ ಮೂಲದ ನಾಗರಾಜ ಎಂಬವರು ಮಂಗಳವಾರ (ಜುಲೈ 16) ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಗೆ ತಂದೆ ಕರೆದುಕೊಂಡು ಹೋಗಿದ್ದರು. ನಾಗರಾಜ ಸಿನೆಮಾ ತೋರಿಸಲು ತಂದೆ- ಕರೆದುಕೊಂಡು ಬಂದಿದ್ದರಂತೆ. ಆದರೆ, ನಾಗರಾಜ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ಅವರನ್ನು ಮಾಲ್ ಒಳಗೆ ಬಿಡಲು ನಿರಾಕರಿಸಿದ್ದಾನೆ. ಒಳಗೆ ಬಿಡುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಆತ ಒಳಗೆ ಬಿಡಲಿಲ್ಲ ಎಂದು ಮಗ ನಾಗರಾಜ ದೂರಿದ್ದಾರೆ. ಪಂಚೆ ಹಾಕಿದವರನ್ನು ಮಾಲ್ ಒಳಗೆ ಬಿಡುವುದಿಲ್ಲ ಎಂದು ಹೇಳಿ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಇದೀಗ ಈ ವಿಡಿಯೋ ವೈರಲ್ ಆಗಿದೆ.ಈ ಘಟನೆಯ ಮಾಲ್ ಸಿಬ್ಬಂದಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಟ್ಟೆ ಸ್ವಚ್ಛ ಇಲ್ಲ ಎಂಬ ಕಾರಣ ನೀಡಿ ರೈತನನ್ನ ಬೆಂಗಳೂರು ನಮ್ಮ ಮೆಟ್ರೋ ಮೆಟ್ರೋ ಒಳಗೆ ಬಿಡದೆ ಅವಮಾನಿಸಿದ ಘಟನೆ ಇತ್ತೀಚಿಗೆ ನಡೆದಿತ್ತು. ಮೆಟ್ರೋ ಸಿಬ್ಬಂದಿಯ ವೀಡಿಯೊ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಿಬ್ಬಂದಿಯನ್ನು ನಮ್ಮ ಮೆಟ್ರೋ ಅಮಾನತು ಮಾಡಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಜಿಟಿ ಮಾಲ್ ನಲ್ಲಿಯೂ ಸಹ ರೈತನನ್ನು ಒಳಗೆ ಬಿಡದೇ ಅವಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.



ನಿಮ್ಮ ಕಾಮೆಂಟ್ ಬರೆಯಿರಿ