ಕಠ್ಮಂಡುವಿನಲ್ಲಿ ವಿಮಾನ ಪತನ, 18 ಸಾವು : ವಿಮಾನ ಪತನದ ಕ್ಷಣದ ವೀಡಿಯೊ ವೈರಲ್‌

ನೇಪಾಳದ ಕಠ್ಮಂಡುವಿನ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಟಿಐಎ) ಟೇಕ್ ಆಫ್ ಆಗುತ್ತಿರುವಾಗ ಸೌರ್ಯ ಏರ್‌ಲೈನ್ಸ್ ವಿಮಾನ 9N-AME (CRJ 200) ಪತನಗೊಂಡು 18 ಜನರು ಸಾವಿಗೀಡಾಗಿದ್ದಾರೆ. ವಿಮಾನದ ಪೈಲಟ್ 37 ವರ್ಷದ ಮನೀಶ್ ಶಕ್ಯ ಮಾತ್ರ ಅಪಘಾತದಲ್ಲಿ ಬದುಕುಳಿದಿದ್ದು, ಸಹ ಪೈಲಟ್ ಸುಶಾಂತ ಕಟುವಾಲ್ ಮೃತರಲ್ಲಿ ಸೇರಿದ್ದಾರೆ.
ಅವಶೇಷಗಳಡಿ ಸಿಲುಕಿದ್ದ ಶಕ್ಯ ಅವರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಸಿನಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಟಿಐಎಯ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ದಿ ಹಿಮಾಲಯನ್‌ಗೆ ತಿಳಿಸಿದ್ದಾರೆ. ಪೋಖರಾ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ನಿರ್ವಹಣೆಗಾಗಿ ವಿಮಾನದಲ್ಲಿ ಅವರನ್ನು ಕರೆದುಕೊಂಡು ಹೋಗಲಾಗುತ್ತಿತ್ತು.

ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ವಿಮಾನವು ರನ್‌ವೇಯ ದಕ್ಷಿಣದ ತುದಿಯಿಂದ ಟೇಕ್ ಆಫ್ ಆಗುತ್ತಿದ್ದಾಗ, ರೆಕ್ಕೆಯ ತುದಿಯು ನೆಲಕ್ಕೆ ಅಪ್ಪಳಿಸಿ ಇದ್ದಕ್ಕಿದ್ದಂತೆ ಪಲ್ಟಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡ ವಿಮಾನವು ನಂತರ ರನ್‌ವೇಯ ಪೂರ್ವ ಭಾಗದಲ್ಲಿರುವ ಕಮರಿನಲ್ಲಿ ಬಿದ್ದಿದೆ.
ಈ ವಿಮಾನಯಾನ ಸಂಸ್ಥೆಯನ್ನು 2019 ರಲ್ಲಿ ಭಾರತದ ಕುಬೇರ ಗ್ರೂಪ್ 630 ಮಿಲಿಯನ್ ನೇಪಾಳಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿತ್ತು. 2021 ರಲ್ಲಿ, ಏರ್‌ಲೈನ್ಸ್ ತನ್ನನ್ನು ಕುಬೇರ್ ಏರ್‌ಲೈನ್ಸ್ ಎಂದು ಮರು ಬ್ರಾಂಡ್ ಮಾಡುತ್ತದೆ ಎಂದು ವರದಿಗಳಿದ್ದವು, ಆದರೆ ಅದನ್ನು ತಡೆಹಿಡಿಯಲಾಯಿತು.

ಸಂಸ್ಥೆಯು ತನ್ನ ಸಾಲವನ್ನು ಪಾವತಿಸಲು ವಿಫಲವಾದ ನಂತರ, ಕಠ್ಮಂಡು ವಿಮಾನ ನಿಲ್ದಾಣವು ಶೌರ್ಯ ಏರ್‌ಲೈನ್ಸ್‌ ಸಂಸ್ಥೆಯು ಎಲ್ಲಾ ವಿಮಾನಗಳನ್ನು ಡಿಸೆಂಬರ್ 6, 2018 ರಂದು ಸ್ಥಗಿತಗೊಳಿಸಿತು. ವಿಮಾನ ನಿಲ್ದಾಣಕ್ಕೆ ನೀಡಬೇಕಾದ $355,000 ಸಾಲದ ಒಂದು ಭಾಗವನ್ನು ಪಾವತಿಸಿದ ನಂತರ 2020 ರಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿಸಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.

ಪ್ರಮುಖ ಸುದ್ದಿ :-   10 ವರ್ಷಗಳಿಗೂ ಹೆಚ್ಚು ಕಾಲ ವೈದ್ಯರಿಗೇ ತಿಳಿಯದ ನಿಗೂಢ ಕಾಯಿಲೆಯ ಮೂಲ ಕಾರಣ ಪತ್ತೆಹಚ್ಚಿದ ಚಾಟ್‌ ಜಿಪಿಟಿ...!

YouTube: please specify correct url

ಯೇತಿ ಏರ್‌ಲೈನ್ಸ್ ವಿಮಾನ ಕಳೆದ ವರ್ಷ ಪತನವಾಗಿತ್ತು
ಕಳೆದ ವರ್ಷ, ಜನವರಿಯಲ್ಲಿ ಯೇತಿ ಏರ್‌ಲೈನ್ಸ್‌ನ ವಿಮಾನವು ನೇಪಾಳದ ಪೋಖರಾದಲ್ಲಿ ಪತನಗೊಂಡಿತ್ತು. ಐವರು ಭಾರತೀಯರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 72 ಜನರು ಸಾವಿಗೀಡಾಗಿದ್ದರು. ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಜನವರಿ 15 ರಂದು ಲ್ಯಾಂಡಿಗ್‌ ಆಗುವ ಕೆಲವೇ ನಿಮಿಷಗಳ ಮೊದಲು ಸೆಟಿ ನದಿಯ ದಡದಲ್ಲಿ ಪತನಗೊಂಡಿತ್ತು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement