ಜೈಲಿನಿಂದ ಹೊರಬಂದ ನಂತರ ಬೆಂಬಲಿಗರೊಂದಿಗೆ ಮೆಗಾ ರ್‍ಯಾಲಿ ನಡೆಸಿದ ಗ್ಯಾಂಗ್‌ಸ್ಟರ್‌ : ಮತ್ತೆ ಬಂಧಿಸಿದ ಪೊಲೀಸರು

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ ಕುಖ್ಯಾತ ಗ್ಯಾಂಗ್‌ಸ್ಟರ್‌ ನನ್ನು ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಬೆತೆಲ್ ನಗರದಿಂದ ಅಂಬೇಡ್ಕರ ಚೌಕದ ವರೆಗೆ ಬೆಂಬಲಗರೊಂದಿಗೆ ಮೆಗಾ ರ್ಯಾಲಿ ನಡೆಸಿದ ವೀಡಿಯೊ ವೈರಲ್ ಆದ ನಂತರ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಜುಲೈ 23 ರಂದು, ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಣಕರ್ ಜೈಲಿನಿಂದ ಬಿಡುಗಡೆಯಾದ ನಂತರ ಾತನ ಬೆಂಬಲಿಗರು ಸಂಭ್ರಮಾಚರಣೆಯ ರ್ಯಾಲಿ ಆಯೋಜಿಸಿದ್ದರು. ಈ ಕಾರ್ಯಕ್ರಮವು ಬೆಥೆಲ್ ನಗರದಿಂದ ಅಂಬೇಡ್ಕರ ಚೌಕದ ವರೆಗೆ ಕಾರುಗಳು ಮತ್ತು ಸುಮಾರು 15 ದ್ವಿಚಕ್ರ ವಾಹನಗಳ ಸಮೇತ ನಡೆಯಿತು. ಕಾರಿನ ಸನ್‌ರೂಫ್‌ನಿಂದ ಪಾಟಣಕರ್ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ತೋರಿಸುವ ರ್ಯಾಲಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ನಂತರ ಇದು ಪೊಲೀಸರ ಕ್ರಮಕ್ಕೆ ಕಾರಣವಾಯಿತು. ಅನಧಿಕೃತ ರ್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ಕೂಗುತ್ತ, ಹಾರ್ನ್‌ಗಳನ್ನು ಮೊಳಗಿಸುತ್ತ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದಕ್ಕಾಗಿ ಅಧಿಕಾರಿಗಳು ಪಾಟಣಕರ್ ಮತ್ತು ಆತನ ಆರು ಸಹಾಯಕರನ್ನು ಬಂಧಿಸಿದರು.
ರ್ಯಾಲಿಯಲ್ಲಿ ಕಂಡ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ನಾಸಿಕ್ ಪೊಲೀಸರು ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅವರ ಕಾರು ಮತ್ತು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಪಾಟಂಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (2) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಮಹಾರಾಷ್ಟ್ರದ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಪಾಟಣಕರ್ ನನ್ನು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಜಾಮೀನು ಪಡೆದಿದ್ದ ಆರೋಪಿ ನಾಸಿಕ್ ರೋಡ್ ಸೆಂಟ್ರಲ್ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾಗಿದ್ದ. ವರದಿಗಳ ಪ್ರಕಾರ, ಪಾಟಂಕರ್ ಅವರು ಹಿಂದಿನ ಪ್ರಕರಣಗಳಿಂದ ಕೊಲೆಯತ್ನ, ಕಳ್ಳತನ ಮತ್ತು ಹಿಂಸಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement