ಖಾನಾಪುರ : ವ್ಯಕ್ತಿಯ ಶವವನ್ನು 6 ಕಿಮೀ ವರೆಗೆ ಹೊತ್ತೊಯ್ದ ಗ್ರಾಮಸ್ಥರು….

ಖಾನಾಪುರ : ವ್ಯಕ್ತಿಯ ಶವವನ್ನು 6 ಕಿಮೀ ವರೆಗೆ ಹೊತ್ತೊಯ್ದ ಗ್ರಾಮಸ್ಥರು….
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕು ಕೃಷ್ಣಾಪುರ ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದ ಕಾರಣ ಮೃತ ವ್ಯಕ್ತಿಯ ಶವವನ್ನು 6 ಕಿ.ಮೀ ವರೆಗೆ ಹೊತ್ತುಕೊಂಡೇ ಹೋದ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.
ನಿರಂತರ ಮಳೆಯಿಂದ ರಸ್ತೆ ಸಂಪರ್ಕ ಇಲ್ಲದೆ 6 ಕಿಲೋಮೀಟರ್ ವರೆಗೆ ಶವವನ್ನು ಹೊತ್ತುಕೊಂಡು ಒಯ್ದಿದ್ದಾರೆ.
ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿರುವ ಕೃಷ್ಣಾಪುರ ಗ್ರಾಮದ ಸದಾನಂದ ನಾಯಕ ಜ್ವರದಿಂದ ಬಳಲುತ್ತಿದ್ದರು. ಕುಟುಂಬಸ್ಥರು ಚಿಕಿತ್ಸೆಗೆ ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಗೋವಾದಿಂದ ಅವರ ಮೃತದೇಹವನ್ನು ಕುಟುಂಬಸ್ಥರು ಹೊತ್ತುಕೊಂಡು ಬಂದರು. ಆಗ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆಂದು ಶವವನ್ನು ಸುಮಾರು ಆರು ಕಿಲೋಮೀಟರ್ ವರೆಗೆ ಹೊತ್ತುಕೊಂಡೆ ಬಂದಿದ್ದಾರೆ. ಬಂಡೂರಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆಯ ತೂಗು ಸೇತುವೆ ಮೇಲೆ ಶವ ಹೊತ್ತುಕೊಂಡು ಸಾಗಿರುವ ವೀಡಿಯೊ ವೈರಲ್ ಆಗಿದೆ.
ಖಾನಾಪುರದ ಕಾಡಂಚಿನ ಗ್ರಾಮಗಳಲ್ಲಿ ಸದಾ ಇಂಥ ಪರಿಸ್ಥಿತಿ ಇದೆ. ಇತ್ತೀಚಿಗಷ್ಟೇ ಮಹಿಳೆ ಅನಾರೋಗ್ಯದಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು

ಪ್ರಮುಖ ಸುದ್ದಿ :-   ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement