ಮಂಗಳೂರು: ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಸಂಭವಿಸಿದ ಭೂಕುಸಿತ ಹಿನ್ನೆಲೆಯಲ್ಲಿ ಆಗಸ್ಟ್ 4 ರವರೆಗೆ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಹಾಗೂ ಆಗಮಿಸುವ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಆಗಸ್ಟ್ 4ರವರೆಗೆ 14 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಜುಲೈ 29 ರಿಂದ ಆಗಸ್ಟ್ 3 ರವರೆಗೆ, ಕಣ್ಣೂರು – ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಿಂದ ಆಗಸ್ಟ್ 4 ರವರೆಗೆ, ಮಂಗಳೂರು ಸೆಂಟ್ರಲ್ – ವಿಜಯಪುರ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಿಂದ ಆಗಸ್ಟ್ 4 ರವರೆಗೆ,
ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಜುಲೈ 29 ರಿಂದ ಆಗಸ್ಟ್ 3 ರವರೆಗೆ, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲ್‌ನ್ನು ಜುಲೈ 29 ರಿಂದ ಆಗಸ್ಟ್ 3 ರವರೆಗೆ, ಮುರ್ಡೇಶ್ವರ – ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಿಂದ ಆಗಸ್ಟ್ 4 ರವರೆಗೆ, ಬೆಂಗಳೂರು – ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲನ್ನು ಜುಲೈ 29 ರಿಂದ ಆಗಸ್ಟ್ 3 ರವರೆಗೆ, ಕಾರವಾರ -ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಿಂದ ಆಗಸ್ಟ್ 4 ರವರೆಗೆ ರದ್ದುಪಡಿಸಲಾಗಿದೆ.
ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಜುಲೈ 30 ಮತ್ತು ಆಗಸ್ಟ್ 1ರಂದು, ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಜುಲೈ 31 ಮತ್ತು ಆಗಸ್ಟ್ 2ರಂದು, ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 3 ರಂದು, ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 4 ರಂದು, ಯಶವಂತಪುರ ಜಂಕ್ಷನ್ -ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಜುಲೈ 29, 31 ಹಾಗೂ ಆಗಸ್ಟ್ 2 ರಂದು, ಕಾರವಾರ – ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30, ಆಗಸ್ಟ್ 1 ಹಾಗೂ ಆಗಸ್ಟ್ 3 ರಂದು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ