ಚಂಡೀಗಢ : ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ಅವರ ಮಾವ ಹಾಗೂ ಪಂಜಾಬ್ ಪೊಲೀಸ್‌ನ ನಿವೃತ್ತ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಶನಿವಾರ ಗುಂಡಿಕ್ಕಿ ಕೊಂದ ಘಟನೆ ಶನಿವಾರ ಚಂಡೀಗಢ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಕೌಟುಂಬಿಕ ವಿವಾದದ ಪ್ರಕರಣದ ವಿಚಾರಣೆಗಾಗಿ ಹರಪ್ರೀತ್ ಸಿಂಗ್ ಹಾಗೂ ಅವರ ಕುಟುಂಬ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿದ್ದಾಗ ಮಾಜಿ ಪೊಲೀಸ್ ಅಧಿಕಾರಿ ಮಲ್ವಿಂದರ್ ಸಿಂಗ್ ತನ್ನ ಅಳಿಯ ಹರಪ್ರೀತ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದರು.
ಹರಪ್ರೀತ್ ಅವರು ನವದೆಹಲಿಯ ಕೃಷಿ ಸಚಿವಾಲಯದಲ್ಲಿ ಖಾತೆಗಳ ನಿಯಂತ್ರಕರಾಗಿದ್ದಾರೆ. ಚಂಡೀಗಢ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಪ್ರಕಾರ, ಎರಡು ಕುಟುಂಬಗಳ ನಡುವೆ 2023 ರಿಂದ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ಇಂದು, ಶನಿವಾರ ಮಧ್ಯಸ್ಥಿಕೆ ಕೇಂದ್ರದಲ್ಲಿ ನಾಲ್ಕನೇ ಸಭೆಯಾಗಿತ್ತು.
ಹರಪ್ರೀತ್ ಸಿಂಗ್ ತನ್ನ ತಂದೆ ಮತ್ತು ತಾಯಿಯೊಂದಿಗೆ [ಮಧ್ಯಸ್ಥಿಕೆ ಸಭೆಗೆ] ಹಾಜರಿದ್ದರು. ಇನ್ನೊಂದು ಪಕ್ಷವನ್ನು ಪಂಜಾಬ್‌ನ ನಿವೃತ್ತ ಎಐಜಿ ಮಲ್ವಿಂದರ್ ಸಿಂಗ್ ಪ್ರತಿನಿಧಿಸಿದ್ದರು. ಮಧ್ಯಸ್ಥಿಕೆ ಕೇಂದ್ರದ ಬಳಿ ಹರಪ್ರೀತ್ ಸಿಂಗ್ ಮೇಲೆ ಮಲ್ವಿಂದರ್ ಸಿಂಗ್ ಗುಂಡು ಹಾರಿಸಿದರು ” ಚಂಡೀಗಢ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಲ್ವಿಂದರ್ ಸಿಂಗ್ ಸಿಡಿಸಿದ ಐದು ಗುಂಡುಗಳ ಪೈಕಿ ಎರಡು ಗುಂಡುಗಳು ಹರಪ್ರೀತ್ ಸಿಂಗ್ ಅವರಿಗೆ ತಗುಲಿ ನೆಲಕ್ಕೆ ಕುಸಿದುಬಿದ್ದರು ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡ ಹರಪ್ರೀತ್ ಅವರನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅವರು ಬರುವಾಗಲೇ ಆತ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಒಂದು ಪಿಸ್ತೂಲ್, ನಾಲ್ಕು ಹಾರಿಸಿದ ಗುಂಡುಗಳು ಮತ್ತು ಮೂರು ಬಳಕೆಯಾಗದ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮಲ್ವಿಂದರ್ ಸಿಂಗ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಅಪರಾಧಗಳ ಆರೋಪ ಹೊರಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ