ನಾಳೆಯಿಂದ ವಿಶ್ವದ ಮೂರನೇ ಮಹಾಯುದ್ಧ ಆರಂಭವಾಗಲಿದೆ ಎಂದು ಭವಿಷ್ಯ ನುಡಿದ ʼಭಾರತದ ನಾಸ್ಟ್ರಾಡಾಮಸ್ʼ ಕುಶಾಲಕುಮಾರ

“ಭಾರತದ ನಾಸ್ಟ್ರಾಡಾಮಸ್” ಎಂದು ಕರೆಯಲ್ಪಡುವ ಖ್ಯಾತ ಜ್ಯೋತಿಷಿ ಕುಶಾಲಕುಮಾರ ಅವರು ಮೂರನೇ ಮಹಾಯುದ್ಧವು ಆಗಸ್ಟ್ 4 ಅಥವಾ ಆಗಸ್ಟ್ 5 ರಂದು ಪ್ರಾರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಇಸ್ರೇಲ್-ಹಮಾಸ್ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ಕುಶಾಲಕುಮಾರ ಅವರು, ಭೌಗೋಳಿಕ ಹಾಗೂ ರಾಜಕೀಯ ಘಟನೆಗಳ ಸಂಯೋಜನೆಯು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ವಿಶ್ವದ ಮೂರನೇ ಮಹಾಯುದ್ಧ-3 ರ ಪ್ರಾರಂಭದ ದಿನಾಂಕದ ಬಗ್ಗೆ ಕುಶಾಲಕುಮಾರ ಹಿಂದೆ ಅನೇಕ ಭವಿಷ್ಯ ಹೇಳಿದ್ದಾರೆ, ಆದರೆ ಈವರೆಗೆ, ಅವುಗಳು ನಿಜವಾಗಲಿಲ್ಲ. ಈ ಮೊದಲು, ಮೂರನೇ ಮಹಾಯುದ್ಧವು ಜೂನ್ 18, 2024 ರಂದು ಪ್ರಾರಂಭವಾಗುತ್ತದೆ ಎಂದು ಘೋಷಿಸಿದ್ದರು. ಆದರೆ ಆ ದಿನಾಂಕದಂದು ಏನೂ ನಡೆಯಲಿಲ್ಲ. ನಂತರ ಅವರು ವಿಶ್ವದ ಮೂರನೇ ಮಹಾಯುದ್ಧ- 3ರ ಬಗ್ಗೆ ಹೊಸ ದಿನಾಂಕ ಘೋಷಿಸಿದರು, ವಿಶ್ವದ ಮೂರನೇ ಮಹಾಯುದ್ಧ- 3 ಜುಲೈ 26 ಅಥವಾ ಜುಲೈ 28 ರಂದು ಪ್ರಾರಂಭವಾಗಲಿದೆ ಎಂದು ಊಹಿಸಿದರು, ಆದರೆ ಅದು ಸರಿಯಾಗಲಿಲ್ಲ. ಮತ್ತೊಮ್ಮೆ, ಈ ಬಾರಿ ಮತ್ತೆ ವಿಶ್ವಸಮರದ ಬಗ್ಗೆ ಹೇಳಿದ್ದಾರೆ. ಅದು ಸರಿಯಾಗುತ್ತಾರೆಯೇ ಎಂದು ನೋಡಬೇಕಾಗಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಜ್ಯೋತಿಷಿ ಕುಶಾಲಕುಮಾರ ಬಗ್ಗೆ ಕೆಲವು ಸಂಗತಿಗಳು…
ಲಿಂಕ್ಡ್‌ಇನ್ ಪ್ರಕಾರ ಕುಶಾಲಕುಮಾರ ಅವರು ಹರಿಯಾಣದ ಪಂಚಕುಲದ ವೇದ ಜ್ಯೋತಿಷ್ಯ ಬರಹಗಾರರಾಗಿದ್ದಾರೆ.
ಕ್ಯಾಲಿಫೋರ್ನಿಯಾದ ‘ದಿ ಮೌಂಟೇನ್ ಅಸ್ಟ್ರಾಲಜಿ’ (ಟಿಎಂಎ) ಮತ್ತು ನ್ಯೂಯಾರ್ಕ್‌ನ ‘ಹೋರೊಸ್ಕೋಪ್’ ನಂತಹ ವಿಶ್ವದ ಪ್ರಮುಖ ಜ್ಯೋತಿಷ್ಯ ನಿಯತಕಾಲಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಅವರು ವೈದಿಕ ಜ್ಯೋತಿಷ್ಯಕ್ಕೆ ಒತ್ತು ನೀಡುವ ಮೂಲಕ ಆರ್ಥಿಕತೆ, ಹವಾಮಾನ, ವ್ಯಾಪಾರ, ತಂತ್ರಗಳು, ಸಂಘರ್ಷಗಳು ಮತ್ತು ಜಾಗತಿಕ ವ್ಯವಹಾರಗಳಂತಹ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಜನ್ಮ ಸಮಯದ ವಿವರಗಳನ್ನು ಆಧರಿಸಿ ವ್ಯಕ್ತಿಗಳಿಗೆ ವೈಯಕ್ತೀಕರಿಸಿದ ಜ್ಯೋತಿಷ್ಯ ಮಾರ್ಗದರ್ಶನವನ್ನು ಸಹ ನೀಡುತ್ತಾರೆ.
ಡಿಸೆಂಬರ್ 2017 ರಲ್ಲಿ ವಿಸ್ಡಮ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ “2018 ರಲ್ಲಿ ಅಮೆರಿಕಕ್ಕೆ ಜ್ಯೋತಿಷ್ಯ ಸಂಭವನೀಯ ಎಚ್ಚರಿಕೆಗಳು” ಎಂಬ ಲೇಖನದಿಂದ ಅವರು ನಿಖರವಾದ ಮುನ್ಸೂಚನೆಗಳನ್ನು ಮಾಡುವ ದಾಖಲೆಯನ್ನು ಹೊಂದಿದ್ದಾರೆ.
ಕುಶಾಲಕುಮಾರ ಅವರು ವೇದಿಕ್‌ ಜ್ಞಾನ ಮತ್ತು ಭಾರತೀಯ ಋಷಿಗಳ ಸಂಶೋಧನೆಗಳ ಬಗ್ಗೆ ಬರೆಯುತ್ತಾರೆ, ಜೊತೆಗೆ ಪ್ರಪಂಚದಾದ್ಯಂತದ ವಿವಿಧ ಧರ್ಮಗಳಲ್ಲಿ ಅಭ್ಯಾಸ ಮಾಡುವ ಆಧ್ಯಾತ್ಮಿಕತೆಯ ಬಗ್ಗೆ ಆಳವಾದ ಮತ್ತು ಮೌಲ್ಯಯುತವಾದ ಸಂದೇಶಗಳನ್ನು ರವಾನಿಸುತ್ತಾರೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement