ವೀಡಿಯೊ..| ದೆಹಲಿ ಮೆಟ್ರೊ ರೈಲಿನಲ್ಲಿ ದೇವೇಗೌಡ ಪ್ರಯಾಣ ; ಇಂದು ನನ್ನ ಇಚ್ಛೆ ಈಡೇರಿದೆ ಎಂದ ಮಾಜಿ ಪ್ರಧಾನಿ

ನವದೆಹಲಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಭಾನುವಾರ (ಆಗಸ್ಟ್‌ 4) ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದರು.
91 ವರ್ಷದ ದೇವೇ ಗೌಡ ಅವರ ಜೊತೆ ದೆಹಲಿ ಮೆಟ್ರೋದ ಹಲವು ಹಿರಿಯ ಅಧಿಕಾರಿಗಳು ಇದ್ದರು. ರೈಲಿನಲ್ಲಿದ್ದ ದೇವೇಗೌಡರು ಪ್ರಯಾಣಿಕರು ಮತ್ತು ಅಧಿಕಾರಿಗಳೊಂದಿಗೆ ಚಿಟ್-ಚಾಟ್ ಮಾಡಿದರು. ದೆಹಲಿಯ ನಾಯಕ ಲೋಕ ಕಲ್ಯಾಣ ಮಾರ್ಗದ ನಿಲ್ದಾಣದಲ್ಲಿ ಮೆಟ್ರೋ ಹತ್ತಿ ರಾಷ್ಟ್ರ ರಾಜಧಾನಿಯನ್ನು ಸುತ್ತಿದರು. ಆಹ್ಲಾದಕರ ಪ್ರಯಾಣಕ್ಕಾಗಿ ಮೆಟ್ರೋ ಸಿಬ್ಬಂದಿ ಮತ್ತು ಅದರ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ದೇವೇಗೌಡರು, ‘ಇಂದು ನಾನು ದೆಹಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಸಂತಸಗೊಂಡಿದ್ದೇನೆ. ನನ್ನ ಸಹೋದರರು ಹಾಗೂ ಸಹೋದರಿಯರಿಗೆ ಈ ಸೌಲಭ್ಯವು ಹೇಗೆ ಸಹಾಯವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸೇವೆ ಒದಗಿಸುತ್ತಿರುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

“ನಾನು ಲೋಕ ಕಲ್ಯಾಣ ಮಾರ್ಗ ನಿಲ್ದಾಣದಲ್ಲಿ ರೈಲು ಹತ್ತಿ ಉತ್ತಮ ದೂರವನ್ನು ಸುತ್ತಿದೆ. ಇದು ಒಂದು ಆಹ್ಲಾದಕರ ಅನುಭವ ಪಡೆದಿದ್ದೇನೆ. ಮೂಲಸೌಕರ್ಯ ನಿರ್ದೇಶಕ ಮನೋಜ್ ಸಿಂಘಾಲ್ ಮತ್ತು ಇತರ ದೆಹಲಿ ಮೆಟ್ರೋ ಸಿಬ್ಬಂದಿ ನನಗೆ ತುಂಬಾ ಸಹಕರಿಸಿದರು. ಅವರಿಗೆ ಮತ್ತು ನನ್ನ ಭದ್ರತಾ ಸಿಬ್ಬಂದಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದು ದೇವೇಗೌಡರು ತಿಳಿಸಿದ್ದಾರೆ.
ವರ್ಷಗಳಿಂದ ಡೆಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಇಂದು ನೆರವೇರಿತು. ನಾನು 1996 ರಲ್ಲಿ ಪ್ರಧಾನ ಮಂತ್ರಿಯಾಗಿ ನನ್ನ ಕ್ಯಾಬಿನೆಟ್ ಮತ್ತು ಹೊರಗಿನ ಪ್ರತಿರೋಧದ ನಡುವೆ ಯೋಜನೆಗೆ ಆರ್ಥಿಕ ಅನುಮೋದನೆ ನೀಡಿದ್ದೆ. ಅನುಮೋದನೆ ನೀಡಲು ದೇವರು ನನಗೆ ಧೈರ್ಯ ಕೊಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಜನರಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

‘1996ರ ಜೂನ್ 1ರಿಂದ 1997ರ ಮಾರ್ಚ್‌ 24ರ ವರೆಗೆ ನಾನು ದೇಶದ ಪ್ರಧಾನಿಯಾಗಿದ್ದೆ. ಆಗಿನ ದೆಹಲಿ ಲೆಫ್ಟಿನೆಂಟ್ ಗವರ್ನರ್, ದೆಹಲಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ದೆಹಲಿ ಮೆಟ್ರೊ ಯೋಜನೆಗೆ ಚಾಲನೆ ನೀಡಲಾಯಿತು. ಈಗ ಪ್ರತಿನಿತ್ಯ 65 ಲಕ್ಷ ಜನರು ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೆರವಿನಿಂದ ದೆಹಲಿ ಮೆಟ್ರೊ ಮಾರ್ಗವು ಮತ್ತಷ್ಟು ವಿಸ್ತರಣೆಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ದೇವೇಗೌಡರು ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement