27 ವರ್ಷಗಳಲ್ಲಿ ಇದೇ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಸರಣಿ ಸೋತ ಭಾರತ

ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 110 ರನ್ ಅಂತರದ ಹೀನಾಯ ಸೋಲು ಕಾಣುವ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ 2-0ರ ಅಂತರದಲ್ಲಿ ಸೋತಿದೆ. 27 ವರ್ಷಗಳಲ್ಲಿ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋಲಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಮೊದಲು ಬ್ಯಾಟ್‌ ಮಾಡಿದ ಶ್ರೋಲಂಕಾ ತಂಡದ ಅವಿಷ್ಕ ಫೆರ್ನಾಂಡೊ (96) ಹಾಗೂ ಕುಸಾಲ್ ಮೆಂಡಿಸ್ (59) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 248 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಟಾಸ್ ಗೆದ್ದ ಶ್ರೀಲಂಕಾದ ನಾಯಕ ಚರಿತ ಅಸಲಂಕ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಪಥುಮ್ ನಿಸ್ಸಾಂಕ ಹಾಗೂ ಅವಿಷ್ಕ ಫೆರ್ನಾಂಡೊ ಉತ್ತಮ ಆರಂಭ ನೀಡಿದರು.
ಅವಿಷ್ಕ 102 ಎಸೆತಗಳಲ್ಲಿ 96 ರನ್ (9 ಬೌಂಡರಿ, 2 ಸಿಕ್ಸರ್) ಗಳಿಸಿದರು. ನಾಯಕ ಚರಿತ ಅಸಲಂಕ (10), ಸದೀರ ಸಮರವಿಕ್ರಮ (0), ಜನಿತ್ ಲಿಯನಗೆ (8), ದನಿತ್ ವೆಲ್ಲಾಳಗೆ (2) ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಕಮಿಂಡು ಮೆಂಡಿಸ್ ಅಜೇಯ 23 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.ಭಾರತದ ಪರ ಚೊಚ್ಚಲ ಪಂದ್ಯ ಆಡಿದ ರಿಯಾನ್ ಪರಾಗ್ ಮೂರು ವಿಕೆಟ್ ಗಳಿಸಿ ಮಿಂಚಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 40 ಯೋಧರು, 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವು ; ಡಿಜಿಎಂಒ ರಾಜೀವ ಘಾಯ್‌

ಸರಣಿಯ ಮೊದಲ ಪಂದ್ಯ ‘ಟೈ’ ಆಗಿತ್ತು. 249 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 26.1 ಓವರ್‌ಗಳಲ್ಲಿ ರನ್‌ಗಳಿಗೆ 138 ‌ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶ್ರೀಲಂಕಾದ ಸ್ಪಿನ್ ಸವಾಲನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್‌ಗಳು ವೈಫಲ್ಯರಾದರು. ನಾಯಕ ರೋಹಿತ್ ಶರ್ಮಾ ಗರಿಷ್ಠ 35 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ (30), ವಿರಾಟ್ ಕೊಹ್ಲಿ (20), ಶುಭಮನ್ ಗಿಲ್ (6), ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಅಕ್ಷರ್ ಪಟೇಲ್ (2), ರಿಯಾನ್ ಪರಾಗ್ (15), ಶಿವಂ ದುಬೆ (9) ಕಳಪೆ ಪ್ರದರ್ಶನ ನೀಡಿದರು.
ಶ್ರೀಲಂಕಾದ ಪರ ದುನಿತ್ ವೆಲ್ಲಾಳ ಅವರು 27 ರನ್‌ಗೆ ಐದು ವಿಕೆಟ್ ಪಡೆದು ಭಾರತದ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
1997ರಲ್ಲಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ಕೈಲಿ, ಭಾರತ ಕೊನೆಯ ಬಾರಿ ಸರಣಿಯನ್ನು 0-3 ರಿಂದ ಸೋತಿತ್ತು.

 

 

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement