ಪ್ಯಾರಿಸ್ ಒಲಿಂಪಿಕ್ಸ್‌ | ಸಿಎಎಸ್‌ ಮುಂದೆ ವಿನೇಶ್ ಫೋಗಟ್ ಪರ ಖ್ಯಾತ ವಕೀಲ ಹರೀಶ ಸಾಳ್ವೆ ವಾದ ; ಅವರ ಹಿಂದಿನ ಗೆಲುವಿನ ಕಿರುನೋಟ…

ನವದೆಹಲಿ: ಶತಕೋಟಿ ಭಾರತೀಯರ ಭರವಸೆ ಈಗ ವಕೀಲ ಹರೀಶ್ ಸಾಳ್ವೆ ಅವರ ಹೆಗಲ ಮೇಲೆ ನಿಂತಿದೆ. ಅವರು ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ ಅನರ್ಹತೆಯ ಪ್ರಕರಣದಲ್ಲಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (CAS) ಕುಸ್ತಿಪಟು ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪ್ರತಿನಿಧಿಸಲಿದ್ದಾರೆ.
50-ಕೆಜಿ ಕುಸ್ತಿ ವಿಭಾಗದಲ್ಲಿ ಅಗ್ರ ಸ್ಪರ್ಧಿಯಾಗಿದ್ದ ವಿನೇಶ್‌ ಫೋಗಟ್, ಫೈನಲ್‌ ಪಂದ್ಯದ ಕೆಲವೇ ಗಂಟೆಗಳ ಮೊದಲು ತೂಕದ ಸಮಸ್ಯೆಯಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡರು. ಮಾರ್ಕ್ಯೂ ಈವೆಂಟ್‌ನಲ್ಲಿ ಫೋಗಟ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಮನವಿ ಮಾಡಿದೆ.
ಕ್ರೀಡೆಯ ಮಧ್ಯಸ್ಥಿಕೆ ನ್ಯಾಯಾಲಯ ಅಥವಾ ಸಿಎಎಸ್‌ (CAS) ಎಂಬುದು 1984 ರಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಕ್ರೀಡೆಯಲ್ಲಿನ ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸುತ್ತದೆ.

ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು ಈ ಪ್ರಕರಣದಲ್ಲಿ ವಿನೇಶ್‌ ಫೋಗಟ್ ಅವರನ್ನು ಪ್ರತಿನಿಧಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ವತಿಯಿಂದ ವಕಾಲತ್ತು ವಹಿಸಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.
ಸಾಳ್ವೆ ಅವರು 1999 ರಿಂದ 2002ರ ವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿದ್ದರು. ಅವರು ಭಾರತದ ಉನ್ನತ ವಕೀಲರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ, ಸಾಂವಿಧಾನಿಕ, ವಾಣಿಜ್ಯ ಮತ್ತು ಮಧ್ಯಸ್ಥಿಕೆ ಕಾನೂನಿನಲ್ಲಿ ಅವರ ಅಸಾಧಾರಣ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ಹರೀಶ್ ಸಾಳ್ವೆ ಅವರ ಕಾನೂನು ಹೋರಾಟದ ಕೆಲವು ಗಮನಾರ್ಹ ಪ್ರಕರಣಗಳು ಇಲ್ಲಿವೆ:
ಕುಲಭೂಷಣ ಜಾಧವ್ ಪ್ರಕರಣ (2017): ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಕುಲಭೂಷಣ ಜಾಧವ್ ಪ್ರಕರಣದಲ್ಲಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಭಾರತವನ್ನು ಪ್ರತಿನಿಧಿಸಿದರು ಸಮರ್ಥವಾಗಿ ವಾದ ಮಂಡಿಸಿದ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಅವರ ಮರಣದಂಡನೆಗೆ ತಡೆ ನೀಡಿತು.
ರತನ್ ಟಾಟಾ ವಿರುದ್ಧ ಸೈರಸ್ ಮಿಸ್ತ್ರಿ (2016): ಸಾಳ್ವೆ ಅವರು ಸೈರಸ್ ಮಿಸ್ತ್ರಿ ವಿರುದ್ಧ ಕಾನೂನು ಹೋರಾಟದಲ್ಲಿ ರತನ್ ಟಾಟಾ ಅವರನ್ನು ಪ್ರತಿನಿಧಿಸಿದ್ದರು. ಇದರಲ್ಲಿ ಟಾಟಾ ಅವರಿಗೆ ಗೆಲುವಾಯಿತು.
ವೊಡಾಫೋನ್ ತೆರಿಗೆ ವಿವಾದ (2012): ಸಾಳ್ವೆ ಅವರು ಉನ್ನತ ಮಟ್ಟದ ತೆರಿಗೆ ವಿವಾದದಲ್ಲಿ ವೊಡಾಫೋನ್ ಅನ್ನು ಪ್ರತಿನಿಧಿಸಿದರು, ಪ್ರಕರಣದಲ್ಲಿ ಕಂಪನಿಗೆ ಜಯ ದೊರಕಿಸಿಕೊಟ್ಟರು.
2ಜಿ ಸ್ಪೆಕ್ಟ್ರಮ್ ಹಗರಣ (2012): ಸಾಳ್ವೆ ಅವರು 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪರವಾಗಿ ಹಾಜರಾಗಿದ್ದರು.
ಸಹಾರಾ ಗ್ರೂಪ್ ವಿರುದ್ಧ ಸೆಬಿ (2012): ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯೊಂದಿಗಿನ ವಿವಾದದಲ್ಲಿ ವಕೀಲರು ಸಹಾರಾ ಗ್ರೂಪ್ ಅನ್ನು ಪ್ರತಿನಿಧಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement