ತ್ರಿವರ್ಣ ಧ್ವಜಕ್ಕೆ ಅಪಮಾನ…ರಾಷ್ಟ್ರ ಧ್ವಜದ ಮೇಲೆ ಇಸ್ಪೀಟ್ ಆಡಿದ ಭೂಪರು…!

ಸ್ವಾತಂತ್ರ್ಯ ದಿನಾಚರಣೆಯಂದು ದೇಶದಾದ್ಯಂತ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಯಿತು. ಜನರು ಕೂಡ ತ್ರಿವರ್ಣ ಧ್ವಜಕ್ಕೆ ಬಹಳ ಹೆಮ್ಮೆಯಿಂದ ವಂದಿಸಿದರು. ಇಂತಹ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರನ್ನೂ ನಾಚುವಂತೆ ಮಾಡಿದೆ.
ವೀಡಿಯೊದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದವರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಸೇರಿದ್ದಾರೆ ಎಂದು ವರದಿಯಾಗಿದೆ.
ವೈರಲ್ ವೀಡಿಯೊ ಈ ವರ್ಷದ ಜನವರಿ 26 ರಂದು ಗಣರಾಜ್ಯೋತ್ಸವದ ಸಮಯದಲ್ಲಿ ನಡೆದದ್ದು ಎಂದು ಹೇಳಲಾಗಿದೆ. ಈ ವೀಡಿಯೊ ಈಗ ವೈರಲ್‌ ಆಗಿದೆ. ವೀಡಿಯೊದಲ್ಲಿ, ನಾಲ್ವರು ತ್ರಿವರ್ಣ ಧ್ವಜವನ್ನು ಹರಡಿಕೊಂಡು ಅದರ ಮೇಲೆ ಇಸ್ಪೀಟ್‌ ಆಡುತ್ತಿರುವುದು ಕಂಡುಬಂದಿದೆ.

ಅವರೆಲ್ಲರೂ ಶೂ ಮತ್ತು ಚಪ್ಪಲಿ ಧರಿಸಿ ರಾಷ್ಟ್ರಧ್ವಜದ ಮೇಲೆ ಕುಳಿತಿರುವುದು ವೀಡಿಯೊ ಕಂಡುಬಂದಿದೆ. ಸ್ವಾತಂತ್ರ್ಯ ದಿನದಂದು ಯಾರೋ ಇದನ್ನು ವೈರಲ್ ಮಾಡಿದ್ದಾರೆ. ವೀಡಿಯೊ ವೈರಲ್‌ ಆದ ನಂತರ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈರಲ್ ವೀಡಿಯೊ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಲಕ್ಷ್ಮಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿ ಪ್ರದೇಶದ್ದು ಎಂದು ಹೇಳಲಾಗಿದೆ. ಈ ವೀಡಿಯೊ ವೈರಲ್‌ ಆದ ನಂತರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ನಾಲ್ಕು ಜನರು ನೆಲದ ಮೇಲೆ ರಾಷ್ಟ್ರಧ್ವಜವನ್ನು ಹರಡಿ ಕಾರ್ಡ್‌ಗಳನ್ನು ಆಡುತ್ತಿದ್ದಾರೆ. ಧ್ವಜದ ಮೇಲೆ ಕುಳಿತಿರುವ ಜನರು ಶೂ ಮತ್ತು ಚಪ್ಪಲಿಗಳನ್ನು ಧರಿಸಿದ್ದಾರೆ.

ಮಾಹಿತಿಯ ಪ್ರಕಾರ, ರಾಷ್ಟ್ರಧ್ವಜವನ್ನು ಹರಡುವಾಗ ಇಸ್ಪೀಟೆಲೆ ಆಡುವವರಲ್ಲಿ ಲಕ್ಷ್ಮೀನಗರದ ಬಾಲಕಿಯರ ಶಾಲೆಯಲ್ಲಿ ಮೂಲ ಶಿಕ್ಷಣ ಇಲಾಖೆಯ ಸಹಾಯಕ ಶಿಕ್ಷಕರೊಬ್ಬರು ಇದ್ದಾರೆ. ಮತ್ತೊಬ್ಬ ವ್ಯಕ್ತಿ ಅಲ್ಲಿನ ವಿದ್ಯುತ್ ಇಲಾಖೆಯ ಎಸ್ ಡಿಒ ಚಾಲಕ ಹಾಗೂ ಉಳಿದ ಇಬ್ಬರು ಸ್ಥಳೀಯರು ಎಂದು ಹೇಳಲಾಗಿದೆ. ಈ ನಾಲ್ವರ ವಿರುದ್ಧ ಜಮುನಾಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement