ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರ್‌ಜಿ ಕರ್ ಆಸ್ಪತ್ರೆ ಪ್ರಾಂಶುಪಾಲೆ, ಉಪ ಪ್ರಾಂಶುಪಾಲರು ಹುದ್ದೆಯಿಂದ ವಜಾ

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರದ ಪ್ರಮುಖ ಬೆಳವಣಿಗೆಯಲ್ಲಿ, ಬುಧವಾರ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಆರ್‌.ಜಿ. ಕರ್ ಆಸ್ಪತ್ರೆಯ ನೂತನ ಪ್ರಾಂಶುಪಾಲರಾದ ಸುಹೃತಾ ಪಾಲ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ಹೆಚ್ಚುವರಿಯಾಗಿ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ, ಎಂಎಸ್‌ವಿಪಿ ಬುಲ್‌ಬುಲ್ ಮುಖೋಪಾಧ್ಯಾಯ ಮತ್ತು ಎದೆಯ ಔಷಧ ವಿಭಾಗದ ಮುಖ್ಯಸ್ಥ ಅರುಣಭ್ ದತ್ತಾ ಚೌಧುರಿ ಅವರನ್ನೂ ತಮ್ಮ ಹುದ್ದೆಗಳಿಂದವಜಾಗೊಳಿಸಲಾಗಿದೆ. ಕಾಲೇಜಿನ ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೇಡಿಕೆಯಂತೆ ಬಂಗಾಳದ ಆರೋಗ್ಯ ಕಾರ್ಯದರ್ಶಿ ನಾರಾಯಣ ಸ್ವರೂಪ ನಿಗಮ್ ಅವರು ಈ ಕ್ರಮ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ನಿಯೋಗವು ಸ್ವಾಸ್ಥ್ಯ ಭವನದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸರ್ಕಾರದ ಈ ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಸಿಜಿಒ ಕಾಂಪ್ಲೆಕ್ಸ್‌ನಿಂದ (ಸಿಬಿಐ ಕಚೇರಿ) ಸ್ವಾಸ್ಥ್ಯ ಭವನದವರೆಗೆ ಪಾದಯಾತ್ರೆ ನಡೆಸಿ ಹೊಸ ಪ್ರಾಂಶುಪಾಲರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನಾನಿರತ ವೈದ್ಯರು ಈ ಬೇಡಿಕೆಯನ್ನು ಸಮರ್ಥಿಸಿಕೊಂಡರು. ನಮ್ಮ ಕಾಲೇಜಿಗೆ ಹೊಸದಾಗಿ ನೇಮಕಗೊಂಡ ಪ್ರಾಂಶುಪಾಲ ಡಾ ಸುರ್ಹಿತಾ ಪಾಲ್ ನಾಪತ್ತೆಯಾಗಿದ್ದಾರೆ. ಅವರು ನಮ್ಮ ರಕ್ಷಕರಾಗಿರಬೇಕು ಆದರೆ ಆಸ್ಪತ್ರೆಯನ್ನು ಧ್ವಂಸ ಮಾಡಿದ ರಾತ್ರಿಯಿಂದ ಅವರು ಕ್ಯಾಂಪಸ್‌ಗೆ ಬಂದಿಲ್ಲ ಎಂದು ಕಿರಿಯ ವೈದ್ಯರು ಹೇಳಿದ್ದಾರೆ.
ಟ್ರೇನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದೋಪ ಘೋಷ್‌ ಅವರ ಬದಲಿಗೆ ಆಗಸ್ಟ್ 12 ರಂದು ಆರೋಗ್ಯ ಸಚಿವಾಲಯದ ಅಧಿಕಾರಿಯಾದ ಸುಹೃತಾ ಪಾಲ್ ಅವರನ್ನು ಆ ಹುದ್ದೆಗೆ ಸರ್ಕಾರ ನೇಮಿಸಿತ್ತು.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ನಡೆಯುತ್ತಿರುವ ಕಿರಿಯ ವೈದ್ಯರ ಆಂದೋಲನಕ್ಕೆ ಬೆಂಬಲಾರ್ಥವಾಗಿ ಸಮಾಜದ ವಿವಿಧ ಸ್ತರಗಳ ಪ್ರತಿಭಟನಾಕಾರರು ಬುಧವಾರ ಕೋಲ್ಕತ್ತಾ ಮತ್ತು ಅದರಾಚೆಗಿನ ಬೀದಿಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ಯಾವುದೇ ಹೊಸ ಬಂಧನಗಳು ವರದಿಯಾಗಿಲ್ಲವಾದರೂ, ಆರ್‌ಜಿ ಕರ್ ಆಸ್ಪತ್ರೆಯ ಉನ್ನತ ಅಧಿಕಾರಿಗಳ ವಿಚಾರಣೆಯನ್ನು ಸಿಬಿಐ ಮುಂದುವರಿಸಿದೆ. ಈ ಮಧ್ಯೆ ಆಸ್ಪತ್ರೆಯ ಮಾಜಿ ಆಡಳಿತಾಧಿಕಾರಿಯು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರ ಆಪಾದಿತ ಹಣಕಾಸಿನ ಅಕ್ರಮಗಳ ಬಗ್ಗೆ ಇ.ಡಿ. ತನಿಖೆ ನಡೆಸುವಂತೆ ಕೋರಿ ರಾಜ್ಯದ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement