ವಿಮಾನ ನಿಲ್ದಾಣಕ್ಕೆ ನೀಡಿದ ಭೂಮಿಗೆ ಸಿಗದ ಪರಿಹಾರ: ಎಸಿ ಕಚೇರಿ ಪೀಠೋಪಕರಣ ಒಯ್ದ ರೈತರು

ಬೆಳಗಾವಿ : ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ ನ್ಯಾಯಾಲಯದ ಆದೇಶದಂತೆ ಬೆಳಗಾವಿ ಉಪ ವಿಭಾಗಾಧಿಕಾರಿಗಳ (ಎಸಿ) ಕಚೇರಿಯ ಪೀಠೋಪರಣ, ಪ್ರಿಂಟರ್, ಕಂಪ್ಯೂಟರ್ ಗಳನ್ನು ರೈತರು ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಜಪ್ತಿ ಮಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ವಿಸ್ತರಣೆಗೆ ಅಲ್ಲಿನ ಪರಿಸರದ ರೈತರು ಜಮೀನು ಕೊಟ್ಟಿದ್ದರು. 2008 ರಲ್ಲಿ 270 ಎಕರೆ ಜಮೀನಿಗೆ ಕೇವಲ 2 ಲಕ್ಷ ಪರಿಹಾರ ನೀಡಲು ಆಡಳಿತ ಮುಂದಾಗಿತ್ತು. ರೈತರು ಈ ಹಣ ಸಾಕಾಗದು ಎಂದು 2011ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ ₹40,000 ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಆದರೆ ಸಕಾಲಕ್ಕೆ ಆಡಳಿತ ಪರಿಹಾರ ನೀಡಲಿಲ್ಲ. ಸಕಾಲಕ್ಕೆ ಪರಿಹಾರ ಸಿಗದ ಕಾರಣ ರೈತರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ರೈತರಿಗೆ ತಕ್ಷಣವೇ ನ್ಯಾಯಯುತ ಪರಿಹಾರ ನೀಡುವಂತೆ 2021ರಲ್ಲಿ ನ್ಯಾಯಾಲಯ ಪುನಃ ಆದೇಶಿಸಿತ್ತು. ಪರಿಹಾರ ನೀಡದಿದ್ದರೆ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿನ ವಸ್ತು ಜಪ್ತಿ ಮಾಡುವಂತೆ ರೈತರಿಗೆ ಸೂಚಿಸಿತ್ತು. ಹೀಗಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ : ಜುಲೈ 13ಕ್ಕೆ ಕರ್ಮಫಲ ಕಾದಂಬರಿ ಲೋಕಾರ್ಪಣೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement