ನವದೆಹಲಿ: ಭಾರತದ ಅತ್ಯುತ್ತಮ ವೈಟ್ ಬಾಲ್ ಆರಂಭಿಕ ಬ್ಯಾಟರ್ ಗಳಲ್ಲಿ ಒಬ್ಬರಾದ ಶಿಖರ್ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
38 ವರ್ಷದ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುತ್ತಿದ್ದರೂ ಲೀಗ್ ಕ್ರಿಕೆಟ್ನಲ್ಲಿ – ಪ್ರಮುಖವಾಗಿ ಐಪಿಎಲ್ನಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ.
2022 ರ ಡಿಸೆಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನದ ಪಂದ್ಯದಲ್ಲಿ ಭಾರತಕ್ಕಾಗಿ ಕೊನೆಯದಾಗಿ ಆಡಿದ್ದ ಧವನ್ ತಮ್ಮ ವೃತ್ತಿ ಜೀವನದಲ್ಲಿ 24 ಶತಕಗಳು, 44 ಅರ್ಧಶತಕಗಳು ಮತ್ತು 269 ಪಂದ್ಯಗಳಿಂದ 10,867 ರನ್ ಗಳಿಸಿದ್ದಾರೆ.
ಧವನ್ 2004 U-19 ವಿಶ್ವಕಪ್ನಲ್ಲಿ ಗಮನ ಸೆಳೆದಿದ್ದರು, ಅಲ್ಲಿ ಅವರು ಮೂರು ಶತಕಗಳನ್ನು ಗಳಿಸಿದ್ದರು ಮತ್ತು 505 ರನ್ಗಳನ್ನು ಗಳಿಸಿದರು. ಧವನ್ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
ಅವರು 2015 ರ ವಿಶ್ವಕಪ್ನಲ್ಲಿ ಎಂಟು ಪಂದ್ಯಗಳಿಂದ 51.5 ರ ಸರಾಸರಿಯಲ್ಲಿ 412 ರನ್ಗಳೊಂದಿಗೆ ಭಾರತದ ಅತಿ ಹೆಚ್ಚು ಸ್ಕೋರರ್ ಆದರು. ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅವರ ಶತಕ – 137 ರ ರೋಲಿಂಗ್ ನಾಕ್ ಅವರ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದೆಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಧವನ್ 2017ರ ಚಾಂಪಿಯನ್ಸ್ ಟ್ರೋಫಿಯಲ್ಲೂ 338 ರನ್ಗಳನ್ನು ಸಿಡಿಸುವ ಮೂಲಕ ಯಾರೂ ತಡೆಯದ ಹಾದಿಯಲ್ಲಿ ಸಾಗಿದರು. ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಧವನ್ ರೋಹಿತ್ ಜೊತೆಯಲ್ಲಿ ಏಕದಿನದ ಪಂದ್ಯಗಳಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯೆಂದು ಹೆಸರಾದರು.
ರೋಹಿತ್ ಮತ್ತು ಧವನ್ ಅವರ ಆರಂಭಿಕ ಜೋಡಿ 115 ಇನ್ನಿಂಗ್ಸ್ಗಳಿಂದ 5148 ರನ್ಗಳು ಕಲೆ ಹಾಕಿತು. ಅವರ ರನ್ ಸರಾರಿ 45.55 ಹಾಗೂ 18 ಶತಕಗಳೊಂದಿಗೆ ಸಾರ್ವಕಾಲಿಕ ನಾಲ್ಕನೇ ಅತ್ಯಧಿಕ ರನ್ಗಳಿಸಿದ ಆರಂಭಿಕ ಜೋಡಿಯಾಗಿದೆ.
ಧವನ್ ಭಾರತದ ಪರವಾಗಿ 34 ಟೆಸ್ಟ್, 167 ODI ಮತ್ತು 68 T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಏಕದಿನದ ಪಂದ್ಯಗಳಲ್ಲಿ ಅವರು 44.11 ಸರಾಸರಿಯಲ್ಲಿ 6793 ರನ್ಗಳನ್ನು ಗಳಿಸಿದರು. ಟೆಸ್ಟ್ಗಳಲ್ಲಿ 40.61 ಸರಾಸರಿಯಲ್ಲಿ 2315 ಟೆಸ್ಟ್ ರನ್ಗಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ