ಬೆಂಗಳೂರು : ರೈಡ್ ಹೇಲಿಂಗ್ ಆ್ಯಪ್ ಮೂಲಕ ಬುಕ್ ಮಾಡಿದ್ದನ್ನು ಕ್ಯಾನ್ಸಲ್ ಮಾಡಿದ್ದಕ್ಕೆ ಓಲಾ ಆಟೋ ಚಾಲಕನೊಬ್ಬ ತನಗೆ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮಹಿಳೆಯೊರು ಹೇಳಿಕೊಂಡಿದ್ದು, ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಾಗ್ವಾದದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಆಟೋ ಚಾಲಕ ಮತ್ತು ಮಹಿಳೆ ಜಗಳವಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಈ ಸಮಯದಲ್ಲಿ ಆಟೋ ಚಾಲಕ ಮಹಿಳೆಯ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ.
ಆಕ್ರೋಶಗೊಂಡ ಕ್ಯಾಬ್ ಚಾಲಕ ಮಹಿಳೆಯೊಂದಿಗೆ ಒರಟಾಗಿ ವಾದಿಸಿದ್ದಾನೆ. ಏಕೆ ಕೂಗುತ್ತಿದ್ದೀಯಾ ಎಂದು ಮಹಿಳೆ ಪ್ರಶ್ನಿಸಿದಾಗ, ಆತ “ತೇರಾ ಬಾಪ್ ದೇತಾ ಹೈ ಕ್ಯಾ ಗ್ಯಾಸ್ ಕೆ ಪೈಸೆ? (ನಿಮ್ಮ ತಂದೆ ನನಗೆ ಗ್ಯಾಸ್‌ಗಾಗಿ ಹಣ ಕೊಡುತ್ತಾರೆಯೇ?)” ಎಂದು ಒರಟಾಗಿ ಉತ್ತರಿಸಿದ್ದಾನೆ. ನಂತರ ಮಹಿಳೆ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದಾರೆ, ಅದಕ್ಕೆ ಚಾಲಕನು ನೀವು ಹಾಗೆ ಮಾಡಬಹುದೆಂದು ಹೇಳಿದ್ದಾನೆ.
ನಂತರ ಮಹಿಳೆ ತನಗೆ ಏಕೆ ಕಪಾಳಮೋಕ್ಷ ಮಾಡಿದ್ದೀಯಾ ಎಂದು ಕೇಳುತ್ತಾಳೆ, ಅದಕ್ಕೆ ಕೋಪಗೊಂಡ ಚಾಲಕ ಆಕೆಯ ಫೋನ್ ಕಸಿದುಕೊಳ್ಳಲು, ಪ್ರಯತ್ನಿಸುತ್ತಾನೆ. ಹಾಗೂ ಪೋಲೀಸ್ ಸ್ಟೇಷನ್‌ಗೆ ಹೋಗಲು ತನ್ನ ಆಟೋದಲ್ಲಿ ಬನ್ನಿ ಎಂದು ಒರಟಾಗಿ ವರ್ತಿಸಿದ್ದಾನೆ, ನಂತರ ಆಟೊ ಚಾಲಕ ತೆರಳುವುದರೊಂದಿಗೆ ವೀಡಿಯೊ ಮುಕ್ತಾಯವಾಗುತ್ತದೆ.
ಪೀಕ್ ಅವರ್‌ನ ಕಾರಣ ಓಲಾದಲ್ಲಿ ತಾನು ಮತ್ತು ತನ್ನ ಸ್ನೇಹಿತೆ ಆರಂಭದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದೇವೆ ಮತ್ತು ತಾನು ಬುಕ್ ಮಾಡಿದ ಆಟೋ ಮೊದಲು ಬಂದಾಗ ತನ್ನ ಸ್ನೇಹಿತೆ ಬುಕ್ ಮಾಡಿದ ಒಂದು ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ ಎಂದು ಮಹಿಳೆ ಹೇಳಿದ್ದಾರೆ. ನಂತರ ಬುಕ್ಕಿಂಗ್ ರದ್ದಾದ ಆಟೋ ಚಾಲಕ ಚಾಲಕ ಈ ಮಹಿಳೆ ಪ್ರಾಣಿಸುತ್ತಿದ್ದ ಆಟೋವನ್ನು ಹಿಂಬಾಲಿಸಿ ಮಹಿಳೆಯನ್ನು ನಿಂದಿಸಿದ್ದಾನೆ.
“ಆಟೋ ನನ್ನ ತಂದೆಯದ್ದೇ ಎಂದು ಪ್ರಶ್ನಿಸಿ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುತ್ತಾ ಚಾಲಕನು ನಮ್ಮ ಮೇಲೆ ಮಾತಿನ ಮೂಲಕ ಹಲ್ಲೆ ನಡೆಸಿದ್ದಾನೆ. ನಾನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ, ಇದು ಅವರನ್ನು ಮತ್ತಷ್ಟು ಕೆರಳಿಸಿತು. ನಾನು ಇದನ್ನು ಪೊಲೀಸರಿಗೆ ವರದಿ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ, ಆತ ನನಗೆ ಸವಾಲು ಹಾಕಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಚಾಲಕ ತನ್ನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ ಮತ್ತು ವಿರೋಧಿಸಿದಾಗ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಘಟನೆಯು “ಸಾಕಷ್ಟು ಆತಂಕಕಾರಿಯಾಗಿದೆ” ಮತ್ತು ತನಿಖೆ ನಡೆಸಲಾಗುವುದು ಎಂದು ಓಲಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಅವರಂತಹ ಕೆಲವು ಜನರಿಂದ ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ