ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯ ಲೋಕ್ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ “ಹೊಸ ಸದಸ್ಯರನ್ನು” ಸ್ವಾಗತಿಸಿದ್ದಾರೆ.
ಮುದ್ದಾದ ಕರುವಿನೊಂದಿಗೆ ಸಮಯ ಕಳೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನೆಗೆ ಆಗಮಿಸಿರುವ ಹೊಸ ಅತಿಥಿಯನ್ನು ಪರಿಚಯಿಸಿದ್ದಾರೆ.
ಪ್ರಧಾನಿ ನಿವಾಸದಲ್ಲಿರುವ ಹಸು ಕರುವಿಗೆ ಜನ್ಮ ನೀಡಿದ್ದು ಅದರ ಹಣೆಯ ಮೇಲೆ ವಿಶಿಷ್ಟವಾದ ಬೆಳಕಿನ ಆಕಾರದ ಗುರುತು ಇದೆ.ಈ ವೈಶಿಷ್ಟ್ಯದಿಂದ ಪ್ರೇರಿತರಾದ ಪ್ರಧಾನಿ ಮೋದಿ ಕರುವಿಗೆ ‘ದೀಪಜ್ಯೋತಿ’ ಎಂದು ನಾಮಕರಣ ಮಾಡಿದ್ದಾರೆ. “ಪ್ರಧಾನಿ ನಿವಾಸದಲ್ಲಿ ಪ್ರೀತಿಯ ಹಸು ಕರುವಿಗೆ ಜನ್ಮ ನೀಡಿದ್ದನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳಕರವಾಗಿ ನಮ್ಮ ಮನೆಗೆ ಹೊಸ ಸದಸ್ಯರೊಬ್ಬರು ಆಗಮಿಸಿದ್ದಾರೆ. ನಮ್ಮ ನಿವಾಸದಲ್ಲಿರುವ ಪ್ರೀತಿಯ ಹಸುವೊಂದು ಕರುವಿಗೆ ಜನ್ಮ ನೀಡಿದೆ. ಕರುವಿನ ಹಣೆಯ ಮೇಲೆ ಬೆಳಕಿನ ಗುರುತಿರುವುದರಿಂದ ‘ದೀಪಜ್ಯೋತಿ’ ಎಂದು ನಾಮಕರಣ ಮಾಡಲಾಗಿದೆ’ ಎಂದು ‘ಎಕ್ಸ್’ನಲ್ಲಿ ಅವರು ತಿಳಿಸಿದ್ದಾರೆ.
X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಅವರು ತಮ್ಮ ನಿವಾಸದ ದೇವರ ಮನೆಯಲ್ಲಿ ಕರುವಿನ ಜೊತೆ ಕುಳಿತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಪ್ರಧಾನಿ ಮೋದಿ ಅವರು ನವಜಾತ ಕರುವಿಗೆ ವಾತ್ಸಲ್ಯವನ್ನು ತೋರಿಸುತ್ತಾ, ಅದನ್ನು ಮುದ್ದಿಸುತ್ತಾ ಆಟವಾಡುತ್ತಾ, ಕರುವನ್ನು ಎತ್ತಿಕೊಂಡು ತಮ್ಮ ನಿವಾಸದ ತೋಟದಲ್ಲಿ ತಿರುಗಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಕರುವಿನ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಮುಖವಾಗಿ, ಈ ವರ್ಷದ ಜನವರಿಯಲ್ಲಿ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ,ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಪುಂಗನೂರು ಹಸುಗಳಿಗೆ ಆಹಾರವನ್ನು ನೀಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಪುಂಗನೂರು ತಳಿಯು ದಕ್ಷಿಣ ಭಾರತಕ್ಕೆ, ವಿಶೇಷವಾಗಿ ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ತಳಿಯಾಗಿದೆ. ಈ ತಳಿಯು ಪ್ರಪಂಚದ ಅತ್ಯಂತ ಚಿಕ್ಕ ಹಂಪ್ಡ್ ಜಾನುವಾರು ತಳಿಗಳಲ್ಲಿ ಒಂದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ