ದೆಹಲಿ- ಮುಂಬಯಿ ಎಕ್ಸ್‌ ಪ್ರೆಸ್‌ ವೇನಲ್ಲಿ ಗುಂಡಿಗಳಾಗಲು ʼಇಲಿʼಗಳು ಕಾರಣ ಎಂದ ನೌಕರ…! ಕೆಲಸದಿಂದ ವಜಾ ಮಾಡಿದ ಕಂಪನಿ

ನವದೆಹಲಿ: ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ (Delhi-Mumbai Expressway) ಗುಂಡಿಗಳಾಗಲು ಇಲಿಗಳು (rat) ಕಾರಣ ಎಂದು ಹೇಳಿದ ನೌಕರನನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಯೋಜನೆಯ ಬಗ್ಗೆ ತಾಂತ್ರಿಕ ತಿಳುವಳಿಕೆ ಇಲ್ಲದ ಕಿರಿಯ ಉದ್ಯೋಗಿಯೊಬ್ಬರು ಈ ಹೇಳಿಕೆ ನೀಡಿದ್ದು, ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಕಂಪನಿ ಹೇಳಿದೆ.
ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇ ಯೋಜನೆ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ ಎಂದು ಹೇಳಿಕೊಂಡಿದ್ದ ಕಿರಿಯ ಉದ್ಯೋಗಿ ರಾಜಸ್ಥಾನದ ದೌಸಾ ಜಿಲ್ಲೆಯ ರಸ್ತೆಯ ಭಾಗದಲ್ಲಿ ಇಲಿಯ ಗೂಡುಗಳಿವೆ, ಇದರಿಂದಾಗಿ ರಸ್ತೆಯಲ್ಲಿ ಹೊಂಡಗಳಾಗಿವೆ ಎಂದು ಹೇಳಿದ್ದರು. ತನ್ನನ್ನು ನಿರ್ವಹಣಾ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡ ಉದ್ಯೋಗಿ ವಾಸ್ತವವಾಗಿ ಕೆಸಿಸಿ ಬಿಲ್ಡ್‌ಕಾನ್‌ನ ಜೂನಿಯರ್ ಸಿಬ್ಬಂದಿ. ಇಲಿಗಳು ಅಥವಾ ಸಣ್ಣ ಪ್ರಾಣಿಗಳು ಗುಂಡಿ ತೋಡಿರುವುದರಿಂದ ನೀರು ನುಗ್ಗಿ ರಸ್ತೆ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅವರ ಕಾಮೆಂಟ್‌ಗಳನ್ನು ಅನುಸರಿಸಿ, ಕಂಪನಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಬರೆದ ಪತ್ರದಲ್ಲಿ ಉದ್ಯೋಗಿಗೆ ಯೋಜನೆಯ ತಾಂತ್ರಿಕ ಜ್ಞಾನದ ಕೊರತೆಯಿದೆ ಮತ್ತು ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ನೀರು ಸೋರಿಕೆಯಿಂದಾಗಿ ದೌಸಾದಲ್ಲಿನ ಎಕ್ಸ್‌ಪ್ರೆಸ್‌ವೇ ಕುಸಿದಿದೆ ಎಂದು ಯೋಜನಾ ನಿರ್ದೇಶಕ ಬಲ್ವೀರ್ ಯಾದವ್ ಹೇಳಿದ್ದಾರೆ. ಗುತ್ತಿಗೆದಾರರು ವಿಷಯದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅವರು ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಗುಂಡಿಯನ್ನು ಸರಿಪಡಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

ನಿರ್ವಹಣಾ ವ್ಯವಸ್ಥಾಪಕ ಎಂದು ಹೇಳಿಕೊಂಡ ಉದ್ಯೋಗಿ ಕೆಸಿಸಿ ಬಿಲ್ಡ್‌ಕಾನ್‌ನ ಕಿರಿಯ ಸಿಬ್ಬಂದಿಯಾಗಿರುವುದಾಗಿ ಸಂಸ್ಥೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಬರೆದ ಪತ್ರದಲ್ಲಿ ತಿಳಿಸಿದೆ. ಯೋಜನೆಯ ಬಗ್ಗೆ ಯಾವುದೇ ತಾಂತ್ರಿಕ ಅರಿವು ಹೊಂದಿರದ ಕಿರಿಯ ಉದ್ಯೋಗಿ ಈ ಹೇಳಿಕೆ ನೀಡಿದ್ದಾರೆ. ಆತನನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇ 1,386 ಕಿಲೋ ಮೀಟರ್‌ ಇದ್ದು, ಇದು ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಈ ಎಕ್ಸ್‌ಪ್ರೆಸ್‌ವೇ ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಳ ಮೂಲಕ ಹಾದು ಹೋಗುತ್ತದೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ನಟ ಸಲ್ಮಾನ್ ಖಾನ್‌ ಭದ್ರತೆ ಹೆಚ್ಚಳ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement