ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಅವರು ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು.
ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರ ಮೂರನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಪ್ರಚಾರದ ಸಮಾವೇಶದಲ್ಲಿ ಭಾಷಣ ಮಾಡುವಾಗ ಅವರಿಗೆ ತಲೆಸುತ್ತು ಬಂದು ಬಹುತೇಕ ಮೂರ್ಛೆ ಹೋಗುವ ಸ್ಥಿತಿಗೆ ತಲುಪಿದರು. ಅವರ ಭದ್ರತಾ ಸಿಬ್ಬಂದಿ ಮತ್ತು ಇತರ ಕಾಂಗ್ರೆಸ್ ನಾಯಕರು ತಕ್ಷಣ ಅವರನ್ನು ಡಯಾಸ್‌ನಿಂದ ಕರೆತಂದು ಅವರನ್ನು ಕೂಡ್ರಿಸಿದರು. ಖರ್ಗೆ ಅಸ್ವಸ್ಥಗೊಂಡ ಕಾರಣ ಚುನಾವಣಾ ಪ್ರಚಾರವನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಲಾಯಿತು ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಚುನಾವಣೆಗೆ ಮುನ್ನ ಕಥುವಾದ ಜಸ್ರೋಟಾದಲ್ಲಿ ಭಾಷಣ ಮಲ್ಲಿಕಾರ್ಜುನ ಖರ್ಗೆ ಅಸ್ವಸ್ಥಗೊಂಡರು. ಆದರೆ, ನೀರು ಕುಡಿದು ಅಲ್ಪವಿಶ್ರಾಂತಿಯ ನಂತರ ಖರ್ಗೆಯವರು ತಮ್ಮ ಭಾಷಣ ಮುಂದುವರಿಸಿದರು. ಆದರೆ ಬೇಗನೆ ಮುಗಿಸಿದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸ್ಪರ್ಧಿಸುತ್ತಿದೆ.
‘ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಬದುಕಿರ್ತೇನೆ…
ನಂತರ, ಖರ್ಗೆ ಅವರು ತಮ್ಮ ಭಾಷಣದಲ್ಲಿ, ನಾನು ಶೀಘ್ರದಲ್ಲೇ ಸಾಯುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಸಕ್ರಿಯವಾಗಿರುತ್ತೇನೆ ಎಂದು ಹೇಳಿದರು. “ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ, ನಾನು ಇಷ್ಟು ಬೇಗ ಸಾಯುವುದಿಲ್ಲ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ನಾನು ಬದುಕುತ್ತೇನೆ” ಎಂದು ಅವರು ಹೇಳಿದರು.
“ಈ ಜನರು (ಕೇಂದ್ರ ಸರ್ಕಾರ) ಎಂದಿಗೂ ಚುನಾವಣೆಯನ್ನು ನಡೆಸಲು ಬಯಸುವುದಿಲ್ಲ, ಅವರು ಬಯಸಿದರೆ ಅವರು ಅದನ್ನು ಒಂದೆರಡು ವರ್ಷಗಳಲ್ಲೇ ಮಾಡುತ್ತಿದ್ದರು. ಅವರು ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣೆಗೆ ತಯಾರಿ ಆರಂಭಿಸಿದರು … ಅವರು ಚುನಾವಣೆಗಳನ್ನು ಬಯಸಿದ್ದರು. ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್-ನಿಯಂತ್ರಿತ ಸರ್ಕಾರವನ್ನು ನಿರ್ವಹಿಸಲು ಅವರು ಬಯಸಿದ್ದರು… ಕಳೆದ 10 ವರ್ಷಗಳಲ್ಲಿ ಭಾರತದ ಯುವಕರಿಗೆ ಪ್ರಧಾನಿ ಮೋದಿ ಏನನ್ನೂ ನೀಡಲಿಲ್ಲ, 10 ವರ್ಷಗಳಲ್ಲಿ ನಿಮ್ಮ ಏಳಿಗೆಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬುತ್ತೀರಾ? ಬಿಜೆಪಿ ನಾಯಕರು ನಿಮ್ಮ ಮುಂದೆ ಬರುತ್ತಾರೆ, ಅವರು ಸಮೃದ್ಧಿ ತಂದಿದ್ದಾರೆಯೇ ಅಥವಾ ಇಲ್ಲವೇ ಎಂದು ಅವರನ್ನು ಕೇಳಿ ಎಂದು ಖರ್ಗೆ ಹೇಳಿದರು.
ಈ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನವು ಸೆಪ್ಟೆಂಬರ್ 18 ರಂದು ನಡೆಯಿತು ಮತ್ತು ಎರಡನೇ ಹಂತವು ಸೆಪ್ಟೆಂಬರ್ 25 ರಂದು ನಡೆಯಿತು. ಅಕ್ಟೋಬರ್ 1 ರಂದು ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 40 ಕ್ಷೇತ್ರಗಳ ಪೈಕಿ 24 ಜಮ್ಮು ವಿಭಾಗದ ವ್ಯಾಪ್ತಿಗೆ ಬರುತ್ತವೆ.
ನಿಮ್ಮ ಕಾಮೆಂಟ್ ಬರೆಯಿರಿ