ಭಾರತ vs ಬಾಂಗ್ಲಾದೇಶ | ಅತ್ಯಂತ ವೇಗವಾಗಿ 27,000 ರನ್ ಗಳಿಸಿದ ಆಟಗಾರರಾದ ವಿರಾಟ್ ಕೊಹ್ಲಿ ; ಈ ಸಾಧನೆ ಮಾಡಿದ ಆಟಗಾರರ ಪಟ್ಟಿ…

ಕಾನ್ಪುರ : ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 4 ನೇ ದಿನದ ಆಟದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 27,000 ರನ್‌ಗಳ ಗಡಿ ದಾಟಿದ ಬ್ಯಾಟರ್‌ ಆಗಿ ದಾಖಲೆ ನಿರ್ಮಿಸಿದ್ದಾರೆ.
ಅಲ್ಲದೆ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 27,000 ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 6 ಮತ್ತು 17 ರನ್ ಗಳಿಸಿದ ಕೊಹ್ಲಿ, ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ 35 ರನ್ ಗಳಿಸಿದಾಗ ಈ ಸಾಧನೆ ಮಾಡಿದವರ ಪಟ್ಟಿಗೆ ಸೇರಿದ್ದಾರೆ.
ಕೊಹ್ಲಿ ಅತಿ ವೇಗದ ಬ್ಯಾಟಿಂಗ್ ಮತ್ತು ಒಟ್ಟಾರೆಯಾಗಿ 27,000 ಅಂತಾರಾಷ್ಟ್ರೀಯ ರನ್‌ಗಳ ಮೈಲಿಗಲ್ಲನ್ನು ತಲುಪಿದ ನಾಲ್ಕನೇ ಆಟಗಾರರಾದರುಕೊಹ್ಲಿ ತಮ್ಮ 594ನೇ ಅಂತರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಮೈಲುಗಲ್ಲನ್ನು ತಲುಪಿದರೆ, ಸಚಿನ್ ತೆಂಡೂಲ್ಕರ್ 623 ಇನ್ನಿಂಗ್ಸ್‌ಗಳಲ್ಲಿ ತಲುಪಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕಾರ (648) ಮತ್ತು ರಿಕಿ ಪಾಂಟಿಂಗ್ (650) ಇನ್ನಿಂಗ್ಸ್‌ಗಳಲ್ಲಿ ತಲುಪಿದ್ದಾರೆ.
27,000 ರನ್‌ಗಳನ್ನು (ಎಲ್ಲ ಮಾದರಿ ಸೇರಿ) ಅತಿವೇಗವಾಗಿ ತಲುಪಿದ ಆಟಗಾರರು
594 ಇನ್ನಿಂಗ್ಸ್ – ವಿರಾಟ ಕೊಹ್ಲಿ
623 ಇನ್ನಿಂಗ್ಸ್ – ಸಚಿನ್ ತೆಂಡೂಲ್ಕರ್
648 ಇನ್ನಿಂಗ್ಸ್ – ಕುಮಾರ ಸಂಗಕ್ಕಾರ
650 ಇನ್ನಿಂಗ್ಸ್ – ರಿಕಿ ಪಾಂಟಿಂಗ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಎಲ್ಲ ಮಾದರಿ ಸೇರಿ) ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
34,357 ರನ್ – ಸಚಿನ್ ತೆಂಡೂಲ್ಕರ್ (ಭಾರತ) 782 ಇನ್ನಿಂಗ್ಸ್
28,016 ರನ್ – ಕುಮಾರ ಸಂಗಕ್ಕಾರ (ಶ್ರೀಲಂಕಾ) 666 ಇನ್ನಿಂಗ್ಸ್
27,483 ರನ್ – ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 668 ಇನ್ನಿಂಗ್ಸ್
27,012 ರನ್ – ವಿರಾಟ್ ಕೊಹ್ಲಿ (ಭಾರತ) 594 ಇನ್ನಿಂಗ್ಸ್*
25,957 ರನ್ – ಮಹೇಲಾ ಜಯವರ್ಧನೆ (ಶ್ರೀಲಂಕಾ) 725 ಇನ್ನಿಂಗ್ಸ್
ಆದಾಗ್ಯೂ, ವಿರಾಟ್‌ ಕೊಹ್ಲಿ 47 ರನ್‌ಗಳಿಸಿ ಶಕೀಬ್ ಅಲ್ ಹಸನ್ ಅವರಿಗೆ ಔಟಾದರು.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement