ಸೂಪರ್ ಸ್ಟಾರ್ ರಜನಿಕಾಂತ ಆಸ್ಪತ್ರೆಗೆ ದಾಖಲು

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 73 ವರ್ಷದ ನಟನ ಸ್ಥಿತಿ “ಸ್ಥಿರವಾಗಿದೆ ಎಂದು ವರದಿಯಾಗಿದೆ.
ನಟ ರಜನಿಕಾಂತ ಸೋಮವಾರ ರಾತ್ರಿ ಹೊಟ್ಟೆ ನೋವಿನಿಂದ ಬಳಲಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ ಆಸ್ಪತ್ರೆ ಅಥವಾ ಕುಟುಂಬದವರಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಮಂಗಳವಾರ ಹೃದಯ ಸಂಬಂಧಿ ವೈದ್ಯಕೀಯ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನಟ ರಜನಿಕಾಂತ ಅವರ ಎರಡು ಚಿತ್ರಗಳು ತೆರೆಗೆ ಬರಲಿದೆ. ನಿರ್ದೇಶಕ ಜ್ಞಾನವೇಲು ರಾಜಾ ಅವರ ವೆಟ್ಟೈಯಾನ್, ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ ಮತ್ತು ಲೋಕೇಶ ಕನಕರಾಜ್ ಅವರ ಕೂಲಿ ಸಹ ಶೀಘ್ರವೇ ತೆರೆಗೆ ಬರಲಿದೆ. ರಜನಿಕಾಂತ ಅವರು ಕೆಲ ದಿನಗಳ ಹಿಂದೆಯಷ್ಟೇ ಅವರು ಚೆನ್ನೈಗೆ ಮರಳಿದ್ದರು.
ಒಂದು ದಶಕದ ಹಿಂದೆ, ಸೂಪರ್‌ಸ್ಟಾರ್ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಇತ್ತೀಚೆಗೆ, ಅವರು ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ರಾಜಕೀಯಕ್ಕೆ ಧುಮುಕುವುದರಿಂದ ದೂರ ಉಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement