ಕಿತ್ತೂರು ಉತ್ಸವ ಚಾಲನೆ ವೇಳೆ ಸಿಎಂ ಸಿದ್ದರಾಮಯ್ಯ ಬಟ್ಟೆಗೆ ತಾಗಿದ ಬೆಂಕಿ

ಬೆಂಗಳೂರು: ಕಿತ್ತೂರು ಉತ್ಸವಕ್ಕೆ (Kittur Utsav 2024) ಚಾಲನೆ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜುಬ್ಬಾದ ಕೈಗೆ ಸಣ್ಣ ಪ್ರಮಾಣದಲ್ಲಿ ಬೆಂಕಿಯ ಕಿಡಿ ತಾಗಿದೆ. ತಕ್ಷಣವೇ ಅವರ ಭದ್ರತಾ ಸಿಬ್ಬಂದಿ ಕೂಡಲೇ ಅದನ್ನು ನಂದಿಸಿದ್ದರಿಂದ ಅವಘಡ ತಪ್ಪಿದೆ.
ಬುಧವಾರ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿರುವ ‘ಕಿತ್ತೂರು ವಿಜಯೋತ್ಸವದ ವಿಜಯ ಜ್ಯೋತಿ’ಗೆ ಚಾಲನೆ ನೀಡಿದ ವೇಳೆ ಘಟನೆ ನಡೆದಿದೆ. ಜ್ಯೋತಿ ಬೆಳಗಿಸಿ, ಉತ್ಸವದ ರಥಕ್ಕೆ ಚಾಲನೆ ನೀಡುವ ವೇಳೆ ಜೋರಾಗಿ ಉರಿಯುತ್ತಿದ್ದ ಜ್ಯೋತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಲ್ಯಕ್ಕೆ ತಗುಲಿದೆ. ಕೂಡಲೆ ಗನ್​ ಮ್ಯಾನ್​ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಕೆ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ, ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಮೊದಲಾದವರಿದ್ದರು.
ಇದಾದ ಬಳಿಕ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಎಲ್ಲಾ ನ್ಯಾಯಾಲಯಗಳಿಗಿಂತ ಮೇಲೆ ಅತ್ಯುನ್ನತವಾದ ಆತ್ಮಸಾಕ್ಷಿಯ ನ್ಯಾಯಾಲಯವಿದೆ ಎಂದರು.
ಯಾರೇ ಹೊಗಳಲಿ, ತೆಗಳಲಿ, ಟೀಕೆ ಮಾಡಲಿ, ಉಳಿದವರು ಗುರುತಿಸಲಿ ಬಿಡಲಿ ನಾವು ಪ್ರತಿಯೊಬ್ಬರೂ ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.

ಪ್ರಮುಖ ಸುದ್ದಿ :-   ವೀಡಿಯೊ...| ವೃದ್ಧೆ ಮೇಲೆ ದಾಳಿ ನಡೆಸಿ ಎಳೆದಾಡಿದ ನಾಯಿಗಳ ಗುಂಪು ; ವೃದ್ಧೆಗೆ 40 ಹೊಲಿಗೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement