ವಿಧಾನಸಭೆ ಚುನಾವಣೆ : ಹರ್ಯಾಣದಲ್ಲಿ ಕಾಂಗ್ರೆಸ್ಸಿಗೆ ಜೈ, ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಎಂದ ಬಹುತೇಕ ಎಕ್ಸಿಟ್‌ ಪೋಲ್‌ಗಳು…

ನವದೆಹಲಿ : ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಶನಿವಾರ ಮುಕ್ತಾಯವಾಗಿದ್ದು, ಕಾಂಗ್ರೆಸ್‌ ಪಕ್ಷವು ಮುಂದಿನ ಸರ್ಕಾರವನ್ನು ರಚಿಸುವ ಸಾಧ್ಯತೆಯಿದೆ ಎಂದು ಮತಗಟ್ಟೆ ಸಮೀಕ್ಷೆ (exit polls)ಗಳು ಅಂದಾಜಿಸಿವೆ.
ಹೀಗಾದರೆ ಬಿಜೆಪಿಯ 10 ವರ್ಷಗಳ ಅಧಿಕಾರದ ಓಟಕ್ಕೆ ತಡೆ ಬೀಳಲಿದೆ. ಒಟ್ಟು ಏಳು ಎಕ್ಸಿಟ್ ಪೋಲ್‌ಗಳು ಹರಿಯಾಣದ 90 ಸ್ಥಾನಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿವೆ. ಸರಳ ಬಹುಮತಕ್ಕೆ 46 ಸ್ಥಾನಗಳು ಬೇಕಿವೆ.
ಜಮ್ಮು ಮತ್ತು ಮತ್ತು ಮತ್ತು ಕಾಶ್ಮೀರದಲ್ಲಿಯೂ ನ್ಯಾಷನಲ್ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ ಉಳಿದ ಪಕ್ಷಗಳಿಗಿಂತ ಮುನ್ನಡೆ ಸಾಧಿಸಬಹುದು ಎಂದು ಮತಗಟ್ಟೆ ಸಮೀಕ್ಷೆ ಹೇಳಿದೆ. ಆದರೆ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯತ್ತ ಬೊಟ್ಟು ಮಾಡಿದೆ. ಕೆಲವು ಸಮೀಕ್ಷೆಗಳು ನ್ಯಾಶನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ ಸರಳ ಬಹುಮತ ಪಡೆಯಬಹುದು ಎಂದು ಹೇಳಿದೆ.
90 ಸ್ಥಾನಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು 4೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು. ಆದರೆ ಬಹುಮತಕ್ಕಿಂತ ಕಡಿಮೆಯಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ತಲಾ 27 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿವೆ. ಆದಾಗ್ಯೂ, ಎಕ್ಸಿಟ್ ಪೋಲ್‌ಗಳು ಅನೇಕ ಸಲ ತಪ್ಪಾಗಿವೆ.

ವಿವಿಧ ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತವೆ..?
ಹರಿಯಾಣ : ಒಟ್ಟು ಸ್ಥಾನಗಳು 90, ಸರಳ ಬಹುಮತ: 46 ಸ್ಥಾನಗಳು
ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ:
ಕಾಂಗ್ರೆಸ್+: 44-54, ಬಿಜೆಪಿ: 19-29 ಜೆಜೆಪಿ+: 0-1, ಐಎನ್‌ಎಲ್‌ಡಿ+: 1-5, ಎಎಪಿ: 0-1, ಇತರೆ: 4-9
ಧ್ರುವ್ ರಿಸರ್ಚ್
ಕಾಂಗ್ರೆಸ್+: 50-64, ಬಿಜೆಪಿ: 22-32, ಜೆಜೆಪಿ+: 0, ಐಎನ್‌ಎಲ್‌ಡಿ+: 0, ಎಎಪಿ: 0, ಇತರೆ: 2-8
ಪೀಪಲ್ಸ್ ಪಲ್ಸ್
ಕಾಂಗ್ರೆಸ್+: 49-61, ಬಿಜೆಪಿ: 20-32, ಜೆಜೆಪಿ+: 0-1, ಐಎನ್‌ಎಲ್‌ಡಿ+: 2-3, ಎಎಪಿ: 0, ಇತರೆ: 3-5
ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್
ಕಾಂಗ್ರೆಸ್+: 55-62, ಬಿಜೆಪಿ: 18-24, ಜೆಜೆಪಿ+: 0-3, ಐಎನ್‌ಎಲ್‌ಡಿ+: 3-6, ಇತರೆ: 2-5

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

ಜಮ್ಮು ಮತ್ತು ಕಾಶ್ಮೀರ-ಒಟ್ಟು ಸ್ಥಾನ 90, ಸರಳ ಬಹುಮತ: 46
ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ
ಬಿಜೆಪಿ – 25, ಕಾಂಗ್ರೆಸ್ – 12, ನ್ಯಾಷನಲ್ ಕಾನ್ಫರೆನ್ಸ್ -15, ಪಿಡಿಪಿ- 28, ಇತರೆ – 7 ಸ್ಥಾನಗಳು.
ಇಂಡಿಯಾ ಟುಡೇ ಸಿ-ವೋಟರ್
ಕಾಂಗ್ರೆಸ್ ಮೈತ್ರಿಕೂಟ : 40-48, ಬಿಜೆಪಿ 27-32, ಪಿಡಿಪಿ : 6-12, ಇತರೆ: 6-11
ದೈನಿಕ್ ಬಾಸ್ಕರ್
ಕಾಂಗ್ರೆಸ್+ಎನ್‌ಸಿ: 35-40, ಬಿಜೆಪಿ: 20-25, ಪಿಡಿಪಿ: 4-7. ಇತರೆ: 12-18
ಪೀಪಲ್ಸ್ ಪಲ್ಸ್
ಕಾಂಗ್ರೆಸ್+ಎನ್‌ಸಿ: 46-50, ಬಿಜೆಪಿ: 23-27, ಪಿಡಿಪಿ: 7-11, ಇತರೆ: 4-6
ಗುಲಿಸ್ತಾನ್‌ ನ್ಯೂಸ್‌
ಕಾಂಗ್ರೆಸ್+ಎನ್‌ಸಿ : 31-36, ಬಿಜೆಪಿ : 28-30, ಪಿಡಿಪಿ: 5-7, ಇತರರು : 10-17

ಹರಿಯಾಣದಲ್ಲಿ 10 ವರ್ಷದ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ?
ಹರಿಯಾಣ ವಿಧಾನಸಭೆಗೆ ಶನಿವಾರ (ಅಕ್ಟೋಬರ್ 5ರಂದು) ಏಕಕಾಲದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆಯೇ ಅಥವಾ 10 ವರ್ಷದ ಅಂತರದ ಬಳಿಕ ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಲಿದೆಯೇ ಎಂಬುದು ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದೆ. ಇತರ ಪಕ್ಷಗಳಾದ ಎಎಪಿ ಮತ್ತು ಐಎನ್‌ಎಲ್‌ಡಿ-ಬಿಎಸ್‌ಪಿ ಹಾಗೂ ಜೆಜೆಪಿ-ಎಎಸ್‌ಪಿ ಸುಮಾರು 20 ಕ್ಷೇತ್ರಗಳ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಇದೆ. ಇದು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ.
2019ರ ಚುನಾವಣೆಯಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆದ್ದು, ಜೆಜೆಪಿ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಈ ಬಾರಿ ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮುರಿದುಕೊಂಡಿವೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

 ಕೆರಳಿಸಿಜಮ್ಮು-ಕಾಶ್ಮೀರದ ಕುತೂಹಲ …
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದು ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ನಡೆಯುತ್ತಿರುವ ಈ ಚುನಾವಣೆಯು ಹೆಚ್ಚಿನ ಮಹತ್ವ ಪಡೆದಿದೆ.
ಒಟ್ಟು ಮೂರು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ 43 ಸ್ಥಾನಗಳೊಂದಿಗೆ ಕೊನೆಗೊಳ್ಳಲಿವೆ ಎಂದು ಸೂಚಿಸುತ್ತದೆ. ಬಿಜೆಪಿಯ ಯೋಜಿತ ಸ್ಕೋರ್ 26 ಸಣ್ಣ ಪಕ್ಷಗಳು ಅಥವಾ ಸ್ವತಂತ್ರರೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳಲು ಬಹುಮತದ ಮಾರ್ಕ್‌ನಿಂದ ಸಾಕಷ್ಟು ದೂರವಿರಬಹುದು.
ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಹೀಗಾಗಿ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಆದರೆ ಕಾಶ್ಮೀರ ಕಣಿವೆಯಲ್ಲಿ ಯಾವಾಗಲೂ ಮತಕ್ಕಾಗಿ ಸ್ಪರ್ಧಿಸುತ್ತಿದ್ದ ಅಂದಿನ ಎನ್‌ಸಿ ಮತ್ತು ಪಿಡಿಪಿ ನಡುವಿನ ಐತಿಹಾಸಿಕ ಪೈಪೋಟಿ ಇಲ್ಲಿ ಅಡಚಣೆಯಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement