ಬೆಂಗಳೂರು : ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡ ಆವೃತ್ತಿಯ ನಿರೂಪಕ ನಟ ಕಿಚ್ಚ ಸುದೀಪ ಅವರ ತಾಯಿ ಅವರು ಇಂದು ಭಾನುವಾರ ನಿಧನರಾಗಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಸುದೀಪ ತಾಯಿ ಸರೋಜಾ ಅವರನ್ನು ಅನಾರೋಗ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಮೃತ ಸರೋಜಾ ಅವರು, ನಟ ಸುದೀಪ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.
ಮೃತ ದೇಹವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಜೆಪಿ ನಗರದ ಸುದೀಪ್ ಅವರ ಮನೆಗೆ ತರಲಾಗುತ್ತದೆ. ಅಲ್ಲಿಯೇ ಸಿನಿ ಕಲಾವಿದರಿಗೆ, ರಾಜಕೀಯ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುದೀಪ ಅವರ ತಾಯಿ ಮಂಗಳೂರು ಮೂಲದವರು ಎಂದು ಸಿನೆಮಾ ಕಾರ್ಯಕ್ರಮವೊಂದರಲ್ಲಿ ಸುದೀಪ ಹೇಳಿದ್ದರು. ಸರೋಜಾ ಅವರ ನಿಧನಕ್ಕೆ ಚಿತ್ರರಂಗದ ಕಲಾವಿದರು, ನಟ, ನಟಿಯರು ಸರೋಜಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ