ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೇಕ ದೆಬ್ರಾಯ್ ನಿಧನ

ನವದೆಹಲಿ: ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ ದೆಬ್ರಾಯ್‌ ಅವರು ಶುಕ್ರವಾರ (ನವೆಂಬರ್‌ 1) ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ದೆಬ್ರಾಯ್‌ ಅವರು ಈ ಹಿಂದೆ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (ಜಿಪಿಇ) ವಿಶ್ವ ವಿದ್ಯಾಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
“ಕರುಳಿನ ತೊಂದರೆಯಿಂದ ಇಂದು ಬೆಳಿಗ್ಗೆ 7 ಗಂಟೆಗೆ ಬಿಬೇಕ್ ದೆಬ್ರಾಯ್ ನಿಧನರಾದರು” ಎಂದು ದೆಹಲಿಯ ಏಮ್ಸ್ ತಿಳಿಸಿದೆ. ದೆಬ್ರಾಯ್ ಅವರು ನರೇಂದ್ರಪುರದ ರಾಮಕೃಷ್ಣ ಮಿಷನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಕೋಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜು, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು.

ಅವರು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕೆಲಸ ಮಾಡಿದ್ದರು. ನಂತರ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್, ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್, ಕಾನೂನು ಸುಧಾರಣೆಗಳ ಕುರಿತು ಹಣಕಾಸು ಸಚಿವಾಲಯ/UNDP ಯೋಜನೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ದೆಬ್ರಾಯ್ ಜೂನ್ 5, 2019 ರವರೆಗೆ ನೀತಿ (NITI) ಆಯೋಗದ ಸದಸ್ಯರಾಗಿದ್ದರು. ಅವರು ಹಣಕಾಸು ಸಚಿವಾಲಯದ ‘ಅಮೃತ್ ಕಾಲ್‌ಗಾಗಿ ಮೂಲಸೌಕರ್ಯ ವರ್ಗೀಕರಣ ಮತ್ತು ಹಣಕಾಸು ಚೌಕಟ್ಟಿನ ತಜ್ಞರ ಸಮಿತಿ’ಯ ಅಧ್ಯಕ್ಷರೂ ಆಗಿದ್ದಾರೆ. ಅವರು ಹಲವಾರು ಪುಸ್ತಕಗಳು ಮತ್ತು ಜನಪ್ರಿಯ ಲೇಖನಗಳನ್ನು ಬರೆದಿದ್ದಾರೆ/ಸಂಪಾದಿಸಿದ್ದಾರೆ. ಹಲವಾರು ಪತ್ರಿಕೆಗಳಿಗೆ ಕನ್ಸಲ್ಟಿಂಗ್ ಸಂಪಾದಕರಾಗಿದ್ದರು.

ಪ್ರಮುಖ ಸುದ್ದಿ :-   ವಕೀಲೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : 20 ಲಕ್ಷ ರೂ. ಕೊಡ್ತೇವೆ ಹೇಳಿ ಕೇವಲ ₹ 1 ಲಕ್ಷ ಕೊಟ್ರು ; ಪೊಲೀಸರಿಗೆ ದೂರು ನೀಡಿದ ವಕೀಲೆಯ ಕೊಲೆ ಆರೋಪಿ...!
https://twitter.com/narendramodi/status/1852220962336379198?ref_src=twsrc%5Etfw%7Ctwcamp%5Etweetembed%7Ctwterm%5E1852220962336379198%7Ctwgr%5Eb375cfbd320af34b304e937a4e9dffcf6028a19f%7Ctwcon%5Es1_&ref_url=https%3A%2F%2Fwww.ndtv.com%2Findia-news%2Fbibek-debroy-chairman-of-pms-economic-advisory-council-dies-at-69-6919418

ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮತ್ತು ಅವರನ್ನು “ಉನ್ನತ ವಿದ್ವಾಂಸ” ಎಂದು ಬಣ್ಣಿಸಿದ್ದಾರೆ.
“ಡಾ. ಬಿಬೇಕ್ ದೆಬ್ರಾಯ್ ಅವರು ಒಬ್ಬ ಉನ್ನತ ವಿದ್ವಾಂಸರಾಗಿದ್ದರು, ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮಿಕತೆ ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ಚೆನ್ನಾಗಿ ಪಾರಂಗತರಾಗಿದ್ದರು. ಅವರ ಕೃತಿಗಳ ಮೂಲಕ ಅವರು ಭಾರತದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement