ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ (83) ಮಂಗಳವಾರ ನಿವೃತ್ತಿ ಸುಳಿವು ನೀಡಿದ್ದಾರೆ. ತಮ್ಮ ರಾಜ್ಯಸಭಾ ಅವಧಿಯು 18 ತಿಂಗಳ ನಂತರ ಕೊನೆಗೊಂಡ ಬಳಿಕ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಮ್ಮ ಮೊಮ್ಮಗ ಯುಗೇಂದ್ರ ಪವಾರ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಅವರು ಸಾರ್ವಜನಿಕರನುದ್ದೇಶಿಸಿ ಮಾತನಾಡಿದ್ದಾರೆ.
‘ರಾಜ್ಯಸಭಾ ಅಧಿಕಾರಾವಧಿ ಮುಗಿದ ನಂತರ ಸಂಸದೀಯ ಸ್ಥಾನದಲ್ಲಿ ಉಳಿಯಬೇಕೇ? ಬೇಡವೇ? ಎನ್ನುವುದರ ಬಗ್ಗೆ ಯೋಚಿಸುತ್ತೇನೆ’ ಎಂದರು.
‘ನಾನು ಅಧಿಕಾರದಲ್ಲಿ ಇಲ್ಲ, ರಾಜ್ಯಸಭೆಯಲ್ಲಿ ಇದ್ದೇನೆ. ರಾಜ್ಯಸಭಾ ಅಧಿಕಾರಾವಧಿ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಇದುವರೆಗೆ ನಾನು 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇನ್ನು ಎಷ್ಟು ಚುನಾವಣೆಯಲ್ಲಿ ಸ್ಪರ್ಧಿಸಬೇಕು? ಹೊಸ ಪೀಳಿಗೆಗೆ ಅವಕಾಶ ನೀಡಬೇಕಿದೆ’ ಎಂದು ಹೇಳಿದ್ದಾರೆ.
’30 ವರ್ಷಗಳ ಹಿಂದೆ ರಾಷ್ಟ್ರ ರಾಜಕಾರಣದಲ್ಲಿ ಇರಲು ನಿರ್ಧರಿಸಿ, ರಾಜ್ಯದ ಎಲ್ಲಾ ಜವಾಬ್ದಾರಿಗಳನ್ನು ಅಜಿತ್ ಪವಾರ್ ಅವರಿಗೆ ನೀಡಿದ್ದೆ. ಸುಮಾರು 25ರಿಂದ 30 ವರ್ಷಗಳ ರಾಜ್ಯದ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದರು. ಈಗ ಮುಂದಿನ 30 ವರ್ಷಕ್ಕೆ ವ್ಯವಸ್ಥೆ ಮಾಡಬೇಕಿದೆ’ ಎಂದು ಹೇಳಿದರು.
‘ಅಧಿಕಾರ ತೊರೆದರು ಜನಸೇವೆ ಮಾಡುವುದನ್ನು ನಾನು ಬಿಡುವುದಿಲ್ಲ. ಸಾಮಾಜಿಕ ಸೇವೆಗೆ ಚುನಾವಣೆಯ ಅಗತ್ಯವಿಲ್ಲ’ ಎಂದು ಹೇಳಿದರು.
1999 ರಲ್ಲಿ ಎನ್‌ಸಿಪಿ ಸ್ಥಾಪಿಸಿದ ಮತ್ತು ಮಹಾರಾಷ್ಟ್ರ ರಾಜಕೀಯದ ಅನುಭವಿ ರಾಜಕಾರಣಿ ಶರದ್ ಪವಾರ್ ರಾಜಕೀಯ ಮುತ್ಸದ್ದಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ..
ಎನ್‌ಸಿಪಿ ಮತ್ತು ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷ ಸೇರಿ ಮಹಾರಾಷ್ಟ್ರ ವಿಕಾಸ ಅಘಾಡಿ ಒಕ್ಕೂಟದ ಅಡಿಯಲ್ಲಿ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಒಟ್ಟಾಗಿ ಸ್ಪರ್ಧಿಸುತ್ತಿವೆ.
ಆ ಸಂದರ್ಭದಲ್ಲಿ, ಬಾರಾಮತಿಯಲ್ಲಿ ಶರದ್ ಪವಾರ್ ಮೊಮ್ಮಗ ಯುಗೇಂದ್ರ ಪವಾರ್ ಅವರು ಶರದ್ ಪವಾರ್ ಅಣ್ಣನ ಮಗ ಅಜಿತ್ ಪವಾರ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಅಜಿತ್ ಪವಾರ್ ಅವರು ಬಾರಾಮತಿಯಿಂದ ಐದು ಬಾರಿ ಶಾಸಕರಾಗಿದ್ದಾರೆ ಆದರೆ, ಅವರ ಹಿಂದಿನ ಪ್ರತಿಯೊಂದು ಗೆಲುವಿನಲ್ಲೂ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಪಕ್ಷದ ಬೆಂಬಲವಿತ್ತು.
“ನನಗೆ ಅವರ (ಅಜಿತ್ ಪವಾರ್) ವಿರುದ್ಧ ಯಾವುದೇ ದ್ವೇಷವಿಲ್ಲ … ಅವರು ಸುಮಾರು 30 ವರ್ಷಗಳ ಕಾಲ ನಿಮ್ಮನ್ನು ಮುನ್ನಡೆಸಿದರು … ” ಆದರೆ ನಾಯಕತ್ವದಲ್ಲಿ ಪೀಳಿಗೆಯ ಬದಲಾವಣೆಯ ಸಂದೇಶವನ್ನು ಸಹ ನೀಡುತ್ತಿದೆ. ಈಗ ನಾನು ಯುವ (ಮತ್ತು) ಕ್ರಿಯಾತ್ಮಕ ನಾಯಕತ್ವವನ್ನು ಸಿದ್ಧಪಡಿಸುವ ಸಮಯ ಬಂದಿದೆ … ಇದು ಮುಂದಿನ 30 ವರ್ಷಗಳವರೆಗೆ ಅವರು ನೇತೃತ್ವ ವಹಿಸಿಕೊಳ್ಳಬಹುದು” ಎಂದು ಪವಾರ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ