ಬೆಂಗಳೂರಿನ ರಾಯರ ಮಠಕ್ಕೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ ಭೇಟಿ ; ವಿಶೇಷ ಪೂಜೆ

ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ದಂಪತಿ ಭಾರತ ಪ್ರವಾಸದಲ್ಲಿದ್ದು, ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಮಠಕ್ಕೆ ಮಾವ ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ, ಸುಧಾಮೂರ್ತಿ ದಂಪತಿ ಜತೆ ಅಳಿಯ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೊದಲಿಗೆ ವಿಶೇಷ ಪೂಜೆ ನೆರವೇರಿಸಿದ ಅವರು, ನಂತರ ರಾಯರ ಮಂತ್ರಾಕ್ಷತೆಯನ್ನು ಪಡೆದುಕೊಂಡರು ಹಾಗೂ ರಾಯರ ಬೃಂದಾವನಕ್ಕೆ ಪ್ರದಕ್ಷಿಣೆ ಹಾಕಿದರು.
ಬ್ರಿಟನ್ ಮಾಜಿ ಪ್ರಧಾನಿಯಾಗಿದ್ದರೂ ರಿಷಿ ಸುನಾಕ್ ಅವರು ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿ ಬಂದಿದ್ದರು. ಅತ್ತ, ನಾರಾಯಣ ಮೂರ್ತಿ ದಂಪತಿ ಹಾಗೂ ಅವರ ಪುತ್ರಿ ಸಹ ಎಂದಿನಂತೆ ಸರಳವಾಗಿಯೇ ಆಗಮಿಸಿದ್ದರು. ಎಲ್ಲರಂತೆಯೇ ಪ್ರಸಾದ ಸ್ವೀಕರಿಸಿ, ರಾಯರ ದರ್ಶನ ಪಡೆದು ಕೆಲವು ನಿಮಿಷಗಳ ನಂತರ ಅಲ್ಲಿಂದ ಹೊರಟರು.

ಪ್ರಮುಖ ಸುದ್ದಿ :-   ಬೆಂಗಳೂರು | ಟೆಕ್ಕಿ ನಂತರ ಹೆಂಡತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್...! ಡೆತ್​ನೋಟ್​ನಲ್ಲಿ ಕಿರುಕುಳದ ಆರೋಪ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement