ಕೈಗಾ ಅಣುಸ್ಥಾವರದಲ್ಲಿ ಗುಂಡು ಹಾರಿಸಿಕೊಂಡು ರಕ್ಷಣಾ ಸಿಬ್ಬಂದಿ ಆತ್ಮಹತ್ಯೆ

ಕಾರವಾರ: ಉತ್ತರ ಕನ್ನಡ (Uttara Kannada ) ಜಿಲ್ಲೆಯ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಸಿಐಎಸ್‌ಎಫ್ ಅಧಿಕಾರಿ ತಮ್ಮ ಪಿಸ್ತೂಲಿನಿಂದ ಶೂಟ್‌ ಮಾಡಿಕೊಂಡು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್‌ ಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿ ತನ್ನ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರಕ್ಷಣಾ ಸಿಬ್ಬಂದಿಯನ್ನು ಅರವಿಂದ ಎಂದು ಗುರುತಿಸಲಾಗಿದ್ದು, ಇವರು ಬಿಹಾರ ಮೂಲದವರು ಎಂದು ಹೇಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವುದುಯಾವ ಕಾರಣಕ್ಕಾಗಿ ಎಂಬುದು ಇನ್ನೂ ತಿಳಿದಿಲ್ಲ. ಸದ್ಯ ಯಾವುದೇ ಡೆತ್‌ ನೋಟ್‌ ದೊರೆತಿಲ್ಲ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

4.5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಾರವಾರ : ರಸ್ತೆ ಅಪಘಾತದಲ್ಲಿ ಖ್ಯಾತ ವೈದ್ಯ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement