ಜೈಪುರ: ರಾಜಸ್ತಾನದ ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತಗಟ್ಟೆಯ ಹೊರಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಸ್ವತಂತ್ರ ಅಭ್ಯರ್ಥಿ ನರೇಶ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗ್ರಾಮೀಣ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ರಕ್ಷಣಾ ಕವಚಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೀನಾ ಅವರನ್ನು ಬಂಧಿಸಲಾಯಿತು. ಬಂಧನಕ್ಕೆ ಕೆಲವೇ ಕ್ಷಣಗಳ ಮೊದಲು, ಮೀನಾ ತಮ್ಮ ಬೆಂಬಲಿಗರಿಗೆ “ಪೊಲೀಸರನ್ನು ಸುತ್ತುವರೆದು ಸಂಚಾರವನ್ನು ನಿರ್ಬಂಧಿಸುವಂತೆ” ಕರೆ ನೀಡಿದ್ದರು.
ಉಪಚುನಾವಣೆ ವೇಳೆ ಎಸ್‌ಡಿಎಂ ಅಮಿತ್ ಚೌಧರಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಮೀನಾ ಅವರನ್ನು ಬಂಧಿಸಲು ಯತ್ನಿಸಿದಾಗ ಬುಧವಾರ ತಡರಾತ್ರಿ ಜಿಲ್ಲೆಯಲ್ಲಿ ಹೈ ಡ್ರಾಮಾ ನಡೆದಿತ್ತು. ನಂತರ ಗುರುವಾರ ಬಂಧನವಾಗಿದೆ.
ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಘಟನೆಯ ವಿಡಿಯೋದಲ್ಲಿ ಮೀನಾ ಅವರು ಚುನಾವಣಾ ಪ್ರೋಟೋಕಾಲ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಮತಗಟ್ಟೆಯ ಹೊರಗೆ ಹಿರಿಯ ಅಧಿಕಾರಿಗೆ ಕಪಾಳಮೋಕ್ಷ ಮಾಡುವುದನ್ನು ತೋರಿಸಿದೆ. ಈ ಘಟನೆಯು ಸಾಮ್ರವಟ ಮತದಾನ ಕೇಂದ್ರದಲ್ಲಿ ನಡೆದಿದ್ದು, ಮತದಾನ ಕೇಂದ್ರದ ಕಡೆಗೆ ಹೋಗುತ್ತಿದ್ದ ಮೀನಾ ಅವರು ಅಲ್ಲಿ ಕರ್ತವ್ಯದಲ್ಲಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಮಿತ್ ಚೌಧರಿ ಅವರ ಕೆನ್ನೆಗೆ ಬಾರಿಸಿದ್ದಾರೆ, ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ಬಂದು ಮೀನಾ ಅವರನ್ನು ತಡೆದು ಅವರನು ಆಚೆ ಕಳುಹಿಸುತ್ತಿರುವುದು ಈ ವೀಡಿಯೊದಲ್ಲಿ ದಾಖಲಾಗಿದೆ
ಡಿಯೋಲಿ-ಉನಿಯಾರಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷವು ಕಸ್ತೋರ್ ಚಾಂದ್ ಮೀನಾ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿತ್ತು. ಮೀನಾ ಅವರು ಭಾರತ್ ಆದಿವಾಸಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಮೀನಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಸಮರ್ವಾಟಾ ಗ್ರಾಮದಲ್ಲಿ ಈ ನಾಟಕೀಯ ಘಟನೆ ಸಂಭವಿಸಿದ್ದು, ಮತದಾರರು ತಮ್ಮ ಪಂಚಾಯತ್ ಅನ್ನು ಡಿಯೋಲಿ ಬದಲಿಗೆ ಉನಿಯಾರಾ ಕ್ಷೇತ್ರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಉಪಚುನಾವಣೆಯನ್ನು ಬಹಿಷ್ಕರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನಾ ಅವರು ಮೂರು ಜನರಿಗೆ ಮತ ಚಲಾಯಿಸಲು ರಹಸ್ಯವಾಗಿ ಅವಕಾಶ ನೀಡುವ ಮೂಲಕ ಬಹಿಷ್ಕಾರವನ್ನು ದುರ್ಬಲಗೊಳಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಮೀನಾ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಟೋಂಕ್ ನ ಎಸ್‌ಪಿ ವಿಕಾಸ್ ಸಂಗ್ವಾನ್, ʼಇಲ್ಲಿನ ಕೆಲವರು ಪಂಚಾಯತ್ ಮತದಾನವನ್ನು ಬಹಿಷ್ಕರಿಸಿದ್ದರು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ ಅಲ್ಲಿಗೆ ತೆರಳಿ ಗ್ರಾಮಸ್ಥರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ, ಆದರೆ ಇದಕ್ಕೆ ಆಕ್ಷೇಪಿಸಿ ಸ್ವತಂತ್ರ ಅಭ್ಯರ್ಥಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕೂಡಲೇ ಎಸ್‌ಪಿ ಅವರು ಅಭ್ಯರ್ಥಿಯನ್ನು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.
.
ನಿಮ್ಮ ಕಾಮೆಂಟ್ ಬರೆಯಿರಿ