2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ; ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರ 2025ರ ಸಾರ್ವತ್ರಿಕ (public holidays 2025) ಹಾಗೂ ಪರಿಮಿತ ರಜಾದಿನಗಳ (restricted holiday 2025) ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ.
ಎಂದಿನಂತೆ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ. ಇನ್ನು ಈ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (ಜ. 26), ಯುಗಾದಿ (ಮಾ. 30), ಮೊಹರಂನ ಕಡೆಯ ದಿನ (ಜು. 6) ಮತ್ತು ಮಹಾಲಯ ಅಮಾವಾಸ್ಯೆ (ಸೆ. 21) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ (ನ. 8)ಯನ್ನು ಉಲ್ಲೇಖಿಸಿಲ್ಲ. ಇದನ್ನು ಹೊರತುಪಡಿಸಿ ಒಟ್ಟು 19 ರಜೆಗಳಿವೆ.
14-01-2025 – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26-02-2025 – ಮಹಾ ಶಿವರಾತ್ರಿ
31-03-2025 – ರಂಜಾನ್
10-04-2025 – ಮಹಾವೀರ ಜಯಂತಿ
14-04-2025 – ಡಾ.ಬಿ.ಆರ್. ಅಂಬೇಡ್ಕರ ಜಯಂತಿ
18-04-2025 – ಗುಡ್ ಫ್ರೈಡೆ
30-04-2025 – ಬಸವ ಜಯಂತಿ, ಅಕ್ಷಯ ತೃತೀಯ
01-05-2025 – ಕಾರ್ಮಿಕ ದಿನಾಚರಣೆ
07-06-2025 – ಬಕ್ರೀದ್
15-08-2025 – ಸ್ವಾತಂತ್ರ್ಯ ದಿನಾಚರಣೆ
27-08-2025 – ವರಸಿದ್ಧಿ ವಿನಾಯಕ ವ್ರತ
05-09-2025 – ಈದ್ ಮಿಲಾದ್
01-10-2025 – ಮಹಾನವಮಿ, ಆಯುಧಪೂಜೆ, ವಿಜಯದಶಮಿ
02-10-2025 – ಗಾಂಧಿ ಜಯಂತಿ
07-10-2025 – ಮಹರ್ಷಿ ವಾಲ್ಮೀಕಿ ಜಯಂತಿ
20-10-2025 – ನರಕ ಚತುರ್ದಶಿ
22-10-2025 – ಬಲಿಪಾಡ್ಯಮಿ, ದೀಪಾವಳಿ
01-11-2025 – ಕನ್ನಡ ರಾಜ್ಯೋತ್ಸವ
25-12-2025 ಗುರುವಾರ – ಕ್ರಿಸ್ ಮಸ್

ಪ್ರಮುಖ ಸುದ್ದಿ :-   ಜಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement