ಐಪಿಎಲ್-2025 ಮೆಗಾ ಹರಾಜಿನಲ್ಲಿ 13 ವರ್ಷದ ಕ್ರಿಕೆಟ್‌ ಆಟಗಾರ ಅತ್ಯಂತ ಕಿರಿಯ ; ಈತನ ಮೂಲ ಬೆಲೆ…

ನವದೆಹಲಿ: ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಮತ್ತು ಅರ್ಷದೀಪ್ ಸಿಂಗ್ ಅವರು 2 ಕೋಟಿ ರೂ.ಗಳ ಉನ್ನತ ಮೂಲ ಬೆಲೆಯೊಂದಿಗೆ 574 ಆಟಗಾರರ ಪಟ್ಟಿಯಲ್ಲಿ ಇರುವ ಪ್ರಮುಖರಾಗಿದ್ದಾರೆ. 574 ಆಟಗಾರರ ಪಟ್ಟಿಯಲ್ಲಿ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿರುವ ಕೇವಲ 13 ವರ್ಷದ ಬಿಹಾರದ ವೈಭವ ಸೂರ್ಯವಂಶಿ ಸಹ ಇದ್ದಾರೆ. ಇವರ ಮೂಲ ಬೆಲೆ 30 ಲಕ್ಷ ರೂ. ಬಿಸಿಸಿಐ 1574 ಆಟಗಾರರ ಆರಂಭಿಕ ಪಟ್ಟಿಯನ್ನು ಶುಕ್ರವಾರ 574 ಕ್ಕೆ ಇಳಿಸಿದ್ದು ಅದರಲ್ಲಿ 366 ಭಾರತೀಯರು ಮತ್ತು 208 ವಿದೇಶದ ಆಟಗಾರರು ಇದ್ದಾರೆ. ಪ್ರಸ್ತುತ ಭಾರತದ ಎಲ್ಲಾ ಆಟಗಾರರು ಉನ್ನತ ಮೂಲ ಬೆಲೆಯ ಬ್ರಾಕೆಟ್‌ನಲ್ಲಿದ್ದಾರೆ.

ಟಾಪ್ ಬ್ರಾಕೆಟ್‌ನಲ್ಲಿ 81 ಆಟಗಾರರಿದ್ದು, 27 ಆಟಗಾರರು 1.5 ಕೋಟಿ ರೂ.ಗಳ ವಿಭಾಗದಲ್ಲಿ , 18 ಮಂದಿ 1.25 ಕೋಟಿ ರೂ. ವಿಭಾಗದಲ್ಲಿ ಇದ್ದರೆ, 23 ಮಂದಿ 1 ಕೋಟಿ ರೂ. ವಿಭಾಗದಲ್ಲಿ ಇದ್ದಾರೆ.ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರು ದೇಶದ ಹ್ಯಾರಿ ಬ್ರೂಕ್ ಮತ್ತು ಜಾನಿ ಬೈರ್‌ಸ್ಟೋವ್ ಅವರೊಂದಿಗೆ 2 ಕೋಟಿ ರೂ.ಗಳ ಉನ್ನತ ಮೂಲ ಬೆಲೆಯನ್ನು ಹೊಂದಿದ್ದಾರೆ ಮತ್ತು ಜೇಮ್ಸ್ ಆಂಡರ್ಸನ್ 1.25 ಕೋಟಿ ರೂ ಮೂಲ ಬೆಲೆ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಕಗಿಸೊ ರಬಾಡಾ, ದಕ್ಷಿಣ ಆಫ್ರಿಕಾದ ಅನ್ರಿಚ್ ನಾರ್ಟ್ಜೆ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರು ಸಾಗರೋತ್ತರ ಟಾಪ್ ಬ್ರಾಕೆಟ್‌ನಲ್ಲಿರುವ ದೊಡ್ಡ ಹೆಸರುಗಳು. ಮಾರ್ಕೊ ಜಾನ್ಸೆನ್ ಮತ್ತು ರಚಿನ್ ರವೀಂದ್ರ ಅವರ ಬೆಲೆ 1.25 ಕೋಟಿ ರೂ.ಗಳಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ಅಲ್ಲು ಅರ್ಜುನಗೆ ಕುಟುಂಬಸ್ಥರಿಂದ ಭಾವುಕ ಸ್ವಾಗತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement