ವೀಡಿಯೊ..| ಆಂಬುಲೆನ್ಸ್ ಗೆ ದಾರಿ ಕೊಡದ ಕಾರು ಚಾಲಕನಿಗೆ ಬರೋಬ್ಬರಿ 2.5 ಲಕ್ಷ ರೂ ದಂಡ, ಡ್ರೈವಿಂಗ್‌ ಲೈಸೆನ್ಸ್ ರದ್ದು..!

ತಿರುವನಂತಪುರಂ: ರಸ್ತೆಯಲ್ಲಿ ರೋಗಿ ಒಯ್ಯುತ್ತಿದ್ದ ಆಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು ದೊಡ್ಡ ಶಾಕ್ ನೀಡಿದ್ದಾರೆ. ಆತನಿಗೆ 2.5 ಲಕ್ಷ ರೂ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಚಾಲನಾ ಪರವಾನಗಿಯನ್ನೇ ರದ್ದು ಮಾಡಿದ್ದಾರೆ.
ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದ ವರದಿಯಾಗಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿ ರೋಗಿಯನ್ನು ಒಯ್ಯುತ್ತಿದ್ದ ಆಂಬುಲೆನ್ಸ್ ಗೆ ಕಾರಿನ ಚಾಲಕ ದಾರಿ ಕೊಡದಿದ್ದಾಗ ಆಂಬುಲೆನ್ಸ್‌ ಚಾಲಕ ದಾರಿ ಕೊಡುವಂತೆ ಪದೇ ಪದೇ ಹಾರ್ನ್ ಮಾಡಿದ್ದಾರೆ.

ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ಆಂಬುಲೆನ್ಸ್ ಗೆ ದಾರಿ ಮಾಡಿಕೊಡದೆಉದ್ಧಟನ ಪ್ರದರ್ಶನ ಮಾಡಿದ್ದಾನೆ. ಪದೇ ಪದೇ ಆಂಬುಲೆನ್ಸ್ ಗೆ ಅಡ್ಡ ಬಂದು ಅದು ಮುಂದಕ್ಕೆ ಹೋಗಲು ಅಡ್ಡಿಪಡಿಸುವ ಮೂಲಕ ರೋಗಿಯ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ.ಎಷ್ಟೇ ಹಾರ್ನ್‌ ಮಾಡಿದರೂ ದಾರಿ ಕೊಡದ ಕಾರಿನ ಚಾಲಕನ ವಿರುದ್ಧ ಅಸಮಾಧಾನಗೊಂಡ ಆಂಬುಲೆನ್ಸ್‌  ಚಾಲಕ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಚಾಲಕ ಎಷ್ಟೇ ಹಾರ್ಸ್‌ ಮಾಡಿದರೂ ಕಾರು ಮಾಲೀಕ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಅಡ್ಡ ಬಂದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರ ತಿಳಿಯುತ್ತವೇ ಕೇರಳ ಟ್ರಾಫಿಕ್ ಪೊಲೀಸರು ವೀಡಿಯೊದಲ್ಲಿರುವ ಕಾರಿನ ನಂಬರ್ ಮತ್ತು ಅದರ ಮಾಲೀಕನನ್ನು ಪತ್ತೆ ಮಾಡಿದ್ದಾರೆ. ನಂತರ ಆತನ ಮನೆಗೇ ಹೋಗಿ 2.5ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ. ಅಲ್ಲದೆ, ಕಾರು ಚಾಲಕನ ಡ್ರೈವಿಂಗ್‌ ಪರವಾನಗಿಯನ್ನೇ ರದ್ದು ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಟರ್ಕಿಶ್ ಡ್ರೋನ್‌ ಸೇರಿದಂತೆ ಪಾಕಿಸ್ತಾನದ 400 ಡ್ರೋನ್ ಗಳನ್ನು ಉಡೀಸ್ ಮಾಡಿದ ಭಾರತದ ಸೇನೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement