ಗೋಣಿಚೀಲದಲ್ಲಿ ದಲಿತ ಮಹಿಳೆಯ ಶವ ಪತ್ತೆ ; ಬಿಜೆಪಿ ಬೆಂಬಲಿಸಿದ್ದಕ್ಕಾಗಿ ಆಕೆ ಕೊಲೆ : ಕುಟುಂಬದ ಆರೋಪ

ಲಕ್ನೋ: ಉತ್ತರ ಪ್ರದೇಶದ ಕರ್ಹಾಲ್‌ನ ಕಂಜಾರಾ ನದಿಯ ಸೇತುವೆಯ ಬಳಿ ದಲಿತ ಯುವತಿಯೊಬ್ಬಳ ಬೆತ್ತಲೆ ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಹಿಳೆಯ ಕುಟುಂಬವು ಪ್ರಶಾಂತ ಯಾದವ ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದು, ಅಪರಾಧದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹೇಳಿದ್ದಾರೆ. ಪ್ರಶಾಂತ ಯಾದವ್‌ ಹಾಗೂ ಮತ್ತೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೂ ಮುನ್ನ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಕರ್ಹಾಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಾಗಿ ಮಹಿಳೆ ಹೇಳಿದ್ದಳು. ಸಮಾಜವಾದಿ ಪಕ್ಷದವನಾದ ಪ್ರಶಾಂತನನ್ನು ಕೆರಳಿಸಿದೆ. ಸಮಾಜವಾದಿ ಪಕ್ಷಕ್ಕೆ ಮತ ಹಾಕದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಪ್ರಶಾಂತ ಬೆದರಿಕೆ ಹಾಕಿದ್ದ ಎಂದು ಕುಟುಂಬ ಹೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಮೃತ ಯುವತಿಯ ತಾಯಿ ಸಮಾಜವಾದಿ ಪಕ್ಷದ ಬೆಂಬಲಿಗ ಪ್ರಶಾಂತ ಹಾಗೂ ಆತನ ಸಹಚರರು ನಮ್ಮ ಪಕ್ಷಕ್ಕೆ ಮತ ಹಾಕದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಮೂರು ದಿನಗಳ ಹಿಂದೆ ಪ್ರಶಾಂತ ಯಾದವ್ ನಮ್ಮ ಮನೆಗೆ ಬಂದು ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ ಎಂದು ಕೇಳಿದ್ದರು ನಮ್ಮ ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಸಿಕ್ಕಿರುವುದರಿಂದ ನಾವು ಬಿಜೆಪಿಗೆ ಮತ ಹಾಕುವುದಾಗಿ ಮಗಳು ತಿಳಿಸಿದ್ದಳು. ಇದರಿಂದ ಕೆರಳಿದ ಪ್ರಶಾಂತ ಯಾದವ್ ಆಕೆಗೆ ಬೆದರಿಕೆ ಹಾಕಿದ್ದ. ಹಾಗೂ ಸಮಾಜವಾದಿ ಪಕ್ಷಕ್ಕೆ ಮತ ಹಾಕುವಂತೆ ತಾಕೀತು ಮಾಡಿದ್ದ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಳೆದ ರಾತ್ರಿ 23 ವರ್ಷದ ಮಹಿಳೆ ಕರ್ಹಾಲ್‌ನಿಂದ ನಾಪತ್ತೆಯಾಗಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದಕುಮಾರ ತಿಳಿಸಿದ್ದಾರೆ. “ಅವಳ ಮೃತ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಆಕೆಯ ತಂದೆ ಪ್ರಶಾಂತ ಯಾದವ ಮತ್ತು ಇನ್ನೊಬ್ಬರು ಮೋಹನ್ ಕಥೇರಿಯಾ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ; . ಇಬ್ಬರನ್ನೂ ಬಂಧಿಸಲಾಗಿದೆ” ಎಂದು ವಿನೋದಕುಮಾರ ಹೇಳಿದರು.
ರ್ಹಾಲ್ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಮತ ಹಾಕಲು ನಿರಾಕರಿಸಿದ ಕಾರಣಕ್ಕೆ ಎಸ್‌ಪಿ ಕಾರ್ಯಕರ್ತ ಪ್ರಶಾಂತ ಯಾದವ್ ಮತ್ತು ಆತನ ಸಹಚರರು ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿ ಆರೋಪಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೆರವಾದ ಸ್ಥಾನವು ಮೈನ್‌ಪುರಿ ಜಿಲ್ಲೆಗೆ ಸೇರಿರುವ ಕರ್ಹಾಲ್‌ನಲ್ಲಿ ಬುಧವಾರ ಮತದಾನ ನಡೆಯಿತು. ಇದನ್ನು 1993 ರಿಂದ ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, ಪಕ್ಷವು ಅಖಿಲೇಶಯಾದವ್ ಅವರ ಸೋದರಳಿಯ ತೇಜಪ್ರತಾಪ ಯಾದವ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಬಿಜೆಪಿಯು ತೇಜಪ್ರತಾಪ ಯಾದವ್ ಅವರ ಮಾವ ಅನುಜೇಶ ಯಾದವ್ ಅವರನ್ನು ಕಣಕ್ಕಿಳಿಸಿದೆ.
ಕ್ಷೇತ್ರದಲ್ಲಿ ಯಾದವರು ಸುಮಾರು 1.4 ಲಕ್ಷ ಮತ್ತು ದಲಿತರು ಮತ್ತು ಮುಸ್ಲಿಮರು ಕ್ರಮವಾಗಿ 40,000 ಮತ್ತು 15,000 ಮತದಾರರಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement