ವೀಡಿಯೊ..| ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ ; ಸಾವಿನ ದವಡೆಯಿಂದ ಕ್ಷಣಾರ್ಧದಲ್ಲಿ ಪಾರು ಮಾಡಿದ ಪೊಲೀಸರು…

ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದ ಮಹಿಳೆಯೊಬ್ಬರನ್ನು ಅಲ್ಲಿದ್ದ ರೈಲ್ವೆ ಪೊಲೀಸರು ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲಿನಿಂದ ಬಿದ್ದ ಮಹಿಳೆಯನ್ನು ತಕ್ಷಣವೇ ರೈಲ್ವೇ ಪೋಲೀಸರು ರಕ್ಷಿಸಿದ್ದರಿಂದ ಅವರು ಪ್ರಾನಾಪಾಯದಿಂದ ಪಾರಾಗಿದ್ದಾರೆ. ರೈಲು ಚಲಿಸುತ್ತಿದ್ದಾಗ ಮಹಿಳೆಯು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಬಿದ್ದಳು, ಅರೆಕ್ಷಣದಲ್ಲಿ ಅಲ್ಲಿದ್ದ ರೈಲ್ವೆ ಪೊಲೀಸರು ಮಹಿಳೆಯನ್ನು ಎಳೆದು ರಕ್ಷಿಸಿದ್ದಾರೆ.
ತನ್ನ ಮಕ್ಕಳಿಗಾಗಿ ಕಾಯುತ್ತ ರೈಲಿನ ಬಾಗಿಲ ನಿಂತಿದ್ದಾಗ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದು ವೀಡಿಯೊದಲ್ಲಿ ಕಂಡುಬಂದಿದೆ. ಮಹಿಳೆ ತನ್ನ ಕುಟುಂಬದೊಂದಿಗೆ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಶುಕ್ರವಾರ ಈ ಘಟನೆ ನಡೆದಿದೆ.

ಮಹಿಳೆ ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ರೈಲು ಹತ್ತಿದ್ದಾಳೆ.. ಆದರೆ ಆಕೆಯ ಮಕ್ಕಳು ರೈಲು ಹತ್ತಿರಲಿಲ್ಲ. ಅಷ್ಟರಲ್ಲಿಯೇ ರೈಲು ಚಲಿಸಲು ಪ್ರಾರಂಭಿಸಿತು. ಮಕ್ಕಳು ಬರಲಿಲ್ಲ ಎನ್ನುವ ಕಾರಣಕ್ಕೆ ಗಾಬರಿಯಾದ ಮಹಿಳೆ ಕೋಚ್‌ನ ಬಾಗಿಲಿನ ಹೊರಗೆ ಒರಗಿಕೊಂಡು ಸಹಾಯಕ್ಕಾಗಿ ಕೂಗಿದ್ದಾಳೆ. ಮತ್ತು ಇದನ್ನು ನೋಡಿದ ಅಲ್ಲಿದ್ದ ಪೊಲೀಸರು ಅನಾಹುತ ಸಂಭವಿಸಿದರೆ ಎಂದು ಅಂದುಕೊಂಡು ಪಕ್ಕದಲ್ಲಿಯೇ ಇಬ್ಬರು ಪೊಲೀಸರು ಓಡಿದ್ದನ್ನು ವೀಡಿಯೊ ತೋರಿಸಿದೆ.
ಇದೇವೇಳೆ ಮಹಿಳೆ ಬ್ಯಾಲೆನ್ಸ್‌ ತಪ್ಪಿ ಕೋಚ್‌ನಿಂದ ಬಿದ್ದು ಚಲಿಸುತ್ತಿದ್ದ ರೈಲು ಹಾಗೂ ಪ್ಲಾಟ್‌ಫಾರ್ಮ್‌ ಮಧ್ಯೆ ಸಿಲುಕಿದ್ದಾಳೆ. , ಆದರೆ ಕ್ಷಣಾರ್ಧದಲ್ಲಿಯೇ ಕಾನ್‌ಸ್ಟೆಬಲ್ ಅನೂಪಕುಮಾರ ಪ್ರಜಾಪತಿ ಎಂಬವರು ಮಹಿಳೆಯನ್ನು ಸುರಕ್ಷಿತವಾಗಿ ಎಳೆದು ರಕ್ಷಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಶಿವ ಸಾಗರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement