ಬೆಳಗಾವಿಯಲ್ಲಿ ಗುಂಡಿನ ದಾಳಿ

ಬೆಳಗಾವಿ : ಬೆಳಗಾವಿಯ ಮಹಾಂತೇಶನಗರ ಕೆಎಂಎಫ್ ಡೈರಿ ಬಳಿ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಬೆಮುಲ್‌ ಡೇರಿ ಬಳಿ ನಿಂತುಕೊಂಡಿದ್ದಾಗ ಟಿಳಕವಾಡಿ ದ್ವಾರಕಾ ನಗರ ಐದನೇ ಕ್ರಾಸ್‌ ನಿವಾಸಿ ಪ್ರಣೀತಕುಮಾರ( 31) ಎಂಬ ಯುವಕನ ಮೇಲೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಇದರಿಂದ ಪ್ರಣೀತಕುಮಾರ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ತೊಡೆ ಹಾಗೂ ಗಲ್ಲದ ಬಳಿ ಗುಂಡು ತಗುಲಿದೆ ಎನ್ನಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷ ಕಾರಣಕ್ಕೆ ಈ ದಾಳಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement