ವಿಜಯಪುರ | ಭೀಕರ ಅಪಘಾತ ; ಐದು ಮಂದಿ ಸಾವು

ವಿಜಯಪುರ: ತೊಗರಿ ಕಟಾವು ಯಂತ್ರ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವಿಗೀಡಾದ ಘಟನೆ ತಾಳಿಕೋಟೆ ಬಿಳೇಬಾವಿ ಕ್ರಾಸ್ ಬಳಿ ಶುಕ್ರವಾರ(ಡಿ.6) ನಡೆದಿದೆ ಎಂದು ವರದಿಯಾಗಿದೆ.
ಮೃತರಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಇದ್ದಾರೆ. ಮೃತರನ್ನು ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪ ಪಾಟೀಲ ( 55), ಶಾಂತವ್ವ ಶಂಕರ ಪಾಟೀಲ (45),ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪುರ (45), ಹಾಗೂ ದಿಲೀಪ ಪಾಟೀಲ (50) ಎಂದು ಗುರುತಿಸಲಾಗಿದೆ.
ಕಾರು ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಿಂದ ತಾಳಿಕೋಟೆ ಮಾರ್ಗವಾಗಿ ಅಲಿಯಾಬಾದಗೆ ಆಗಮಿಸುತ್ತಿದ್ದ ವೇಳೆ ಕ್ರೂಸರ್ ಓವರ್ ಟೇಕ್ ಮಾಡುವ ಭರದಲ್ಲಿ ತೊಗರಿ ಕಟಾವು ಯಂತ್ರಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಮೃತರು ಯಾದಗಿರಿ ಜಿಲ್ಲೆಯ ಅಗ್ನಿ ಗ್ರಾಮದಲ್ಲಿ ಮದುವೆ ಹುಡುಗಿ ನೋಡಲು ಹೋಗಿದ್ದು, ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತಾಳಿಕೋಟೆ ಪೊಲೀಸರು ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement