ಒಂದು ಶುಭ ಮುಂಜಾನೆ ಶಾಲೆಗೆ ಹೋಗಲು ಎಬ್ಬಿಸುವ ಸಲುವಾಗಿ ಮಹಿಳೆಯೊಬ್ಬರು ತನ್ನ ಮಗನ ಮಲಗುವ ಕೋಣೆಗೆ ಹೋದಾಗ ಅದು ತನ್ನ ಸಾವಿಗೆ ಕಾರಣವಾಗಬಹುದೆಂದು ಆಕೆಗೆ ತಿಳಿದಿರಲಿಲ್ಲ. ಡಿಸೆಂಬರ್ 3 ರಂದು ಉತ್ತರ ಪ್ರದೇಶದ ಗೋರಖಪುರದ ನಿವಾಸಿಯಾದ ಆರತಿ ದೇವಿ ತನ್ನ 17 ವರ್ಷದ ಮಗ ಅಮನ್ ಎಂಬಾತನನ್ನು ಶಾಲೆಗೆ ಹೋಗಲು ಎಬ್ಬಿಸಲು ಹೋಗಿದ್ದರು. ಆದರೆ ಆತ ಏಳುವ ಮನಸ್ಥಿತಿಯಲ್ಲಿ ಇರಲಿಲ್ಲ, ಬದಲಾಗಿ, ಕೋಪಗೊಂಡ. ಸಿಟ್ಟಿನ ಭರದಲ್ಲಿ ತನ್ನ ತಾಯಿಯನ್ನು ನೆಲಕ್ಕೆ ಕೂಕಿದ್ದಾನೆ. ಇದರಿಂದ ಕೆಳಗೆ ಬಿದ್ದ ತಾಯಿತ ತಲೆಗೆ ಮಾರಣಾಂತಿಕ ಗಾಯವಾಯಿತು. ಅದು ಸಾವಿಗೆ ಕಾರಣವಾಯಿತು. ಚೆನ್ನೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿ ಆರತಿ ಅವರ ಪತಿ ರಾಮ ಮಿಲನ್ ಹಲವು ಬಾರಿ ಕರೆ ಅವರಿಗೆ ಮಾಡಲು ಪ್ರಯತ್ನಿಸಿದರು. ಆದರೆ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಪ್ರಕರಣದ ಭಯಾನಕತೆ ಇಲ್ಲಿಗೆ ಮುಗಿಯುವುದಿಲ್ಲ. ತಾಯಿಯನ್ನು ಕೊಂದ ನಂತರ ಅಮನ್ ಸಿಸಿಟಿವಿ ಕಟ್ ಮಾಡಿ, ಮನೆಗೆ ಹೊರಗಿನಿಂದ ಬೀಗ ಹಾಕಿ ನಾಲ್ಕು ದಿನ ಶವದೊಂದಿಗೆ ವಾಸವಾಗಿದ್ದ. ದೇಹ ಕೊಳೆತು ವಾಸನೆ ಬರತೊಡಗಿದಾಗ ಅಗರಬತ್ತಿಗಳನ್ನು ಹಚ್ಚಲು ಆರಂಭಿಸಿದ್ದಾನೆ.
ಐದನೇ ದಿನ, ಆತ ಮನೆಯಿಂದ ಹೊರಬಂದು ಹತ್ತಿರದ ದೇವಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದ. ಈ ಮಧ್ಯೆ ಎರಡು ಮೂರು ದಿನಗಳ ಕಾಲ ಪತ್ನಿ ಆರತಿ ತನ್ನ ಫೋನ್ ಕರೆಗಳಿಗೆ ಉತ್ತರಿಸದಿದ್ದಾಗ, ವಿಜ್ಞಾನಿ ರಾಮ ಮಿಲನ್ ತನ್ನ ಅತ್ತಿಗೆಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಲು ತಿಳಿಸಿದ್ದಾರೆ. ಅತ್ತಿಗೆ ಬಂದಾಗ ಮನೆಗೆ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂತು. ಮನೆಯಿಂದ ಬರುತ್ತಿದ್ದ ದುರ್ವಾಸನೆ ಪ್ರಬಲವಾಗಿತ್ತು. ಇದು ಅಪರಾಧ ನಡೆದ ಬಗ್ಗೆ ಅನುಮಾನ ಬರುವಂತೆ ಮಾಡಿತು. ಇದು ಪ್ರಕರಣ ಬೆಳಕಿಗೆ ಬರುವಂತೆ ಮಾಡಿತು.
“ನಾನು ಡಿಸೆಂಬರ್ 8 ರಂದು ಗೋರಖಪುರಕ್ಕೆ ಹಿಂತಿರುಗಿದೆ. ನನ್ನ ಹೆಂಡತಿಯ ದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನಾನು ನೋಡಿದೆ” ಎಂದು ರಾಮ ಮಿಲನ್ ಹೇಳಿದ್ದಾರೆ. ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಸಮೀಪದ ದೇವಸ್ಥಾನದ ಕೊಳದ ಬಳಿ ಬಾಲಕ ಕುಳಿತಿರುವುದು ಕಂಡುಬಂದಿದೆ.
ಆರಂಭದಲ್ಲಿ, ತನ್ನ ತಾಯಿ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ತಾನು ಗಾಬರಿಗೊಂಡು ಮನೆಯಿಂದ ಓಡಿಹೋಗಿ ನಾಲ್ಕು ದಿನಗಳ ಕಾಲ ಅಲೆದಾಡಿದೆ ಎಂದು ಅಮನ್ ಪೊಲೀಸರಿಗೆ ತಿಳಿಸಿದ್ದಾನೆ. ಆದಾಗ್ಯೂ, ತನಿಖೆ ಮುಂದುವರಿದಂತೆ ಪೊಲೀಸರಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ರಕ್ತದ ಕಲೆಗಳು ಪತ್ತೆಯಾಯಿತು. ಇದು ದೇಹವನ್ನು ಎಳೆದುಕೊಂಡು ಹೋಗಿರುವುದನ್ನು ಸೂಚಿಸುವಂತಿತ್ತು. ಪೊಲೀಸರು ಬಾಲಕನ ಕೊಠಡಿಯಿಂದ ನಗದು ವಶಪಡಿಸಿಕೊಂಡಿದ್ದಾರೆ.
ನೆರೆಹೊರೆಯವರ ಪ್ರಕಾರ, ಅಮನ್ ವ್ಯಸನಿಯಾಗಿದ್ದ. ಕೋಚಿಂಗ್ ಹೆಸರಿನಲ್ಲಿ ತನ್ನ ತಾಯಿಯಿಂದ ಹಣ ಪಡೆದು ಮದ್ಯ ಮತ್ತು ಮಾದಕ ವಸ್ತುಗಳಿಗೆ ಖರ್ಚು ಮಾಡುತ್ತಿದ್ದ. ವರದಿಯ ಪ್ರಕಾರ, ಶಾಲೆಯಲ್ಲಿಯೂ ಅಮನ್ ವಿರುದ್ಧವೂ ದೂರುಗಳಿತ್ತು.
“ವಿಚಾರಣೆಯ ವೇಳೆ, ಮಂಗಳವಾರ ಸಂಜೆ, ಡಿಸೆಂಬರ್ 3 ರಂದು ಬೆಳಿಗ್ಗೆ ತಾಯಿ ಶಾಲೆಗೆ ಹೋಗುವಂತೆ ಹೇಳಿದರು ಎಂದು ಹುಡುಗ ಒಪ್ಪಿಕೊಂಡಿದ್ದಾನೆ. ಆತ ನಿರಾಕರಿಸಿದಾಗ, ಹಣದ ವಿಷಯದಲ್ಲಿ ಜಗಳ ಉಂಟಾಯಿತು ಮತ್ತು ನಂತರ ತಾಯಿ ಹತಾಶೆಯಿಂದ ಆತನ ಮೇಲೆ ಹಣ ಎಸೆದರು. ಜಗಳದ ನಂತರ ಕೋಪಗೊಂಡ ಬಾಲಕ ತಾಯಿಯನ್ನು ದೂಡಿದ್ದಾನೆ. ತಾಯಿ ನೆಲಕ್ಕೆ ಬಿದ್ದರು ಎಂದು ಪೊಲೀಸ್ ಅಧೀಕ್ಷಕ (ಉತ್ತರ) ಹೇಳಿದರು. ಜಿತೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ. ಅಮನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.
ಆರತಿ ದೇವಿಯು ತನ್ನ ಮಗನೊಂದಿಗೆ ಗೋರಖಪುರದ ಪಿಪ್ರೈಚ್‌ನಲ್ಲಿರುವ ಸುಶಾಂತ ಸಿಟಿಯಲ್ಲಿ ವಾಸಿಸುತ್ತಿದ್ದರು. ಅವರ ಪತಿ ಕೆಲಸಕ್ಕಾಗಿ ಚೆನ್ನೈನಲ್ಲಿ ಉಳಿದುಕೊಂಡಿದ್ದರು ಮತ್ತು ದಂಪತಿಯ ಹಿರಿಯ ಮಗಳು ಬೇರೆ ನಗರದಲ್ಲಿ ಎಂಬಿಬಿಎಸ್ (MBBS) ಓದುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ