ಹುಬ್ಬಳ್ಳಿ: 12 ಸಾಧಕರಿಗೆ ‘ಅವ್ವ ಪ್ರಶಸ್ತಿ’ ಪ್ರದಾನ

ಹುಬ್ಬಳ್ಳಿ: ಅವ್ವ ಸೇವಾ ಟ್ರಸ್ಟ್ ವತಿಯಿಂದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. 12 ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿ​ರಿಯ ರಾ​ಜ​ಕಾ​ರಣಿ ಎ​ಸ್‌.​ಆ​ರ್‌. ​ಪಾ​ಟೀಲ, ಪ​ತ್ರ​ಕರ್ತ ಚಂದ್ರ​ಕಾಂತ ವಡ್ಡು, ಸಿ​ತಾರ ವಾ​ದಕ ಛೋಟೆ ರ​ಹ​ಮತ್‌ ಖಾ​ನ್‌, ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ, ಬಸವ ತತ್ವ ಪ್ರಚಾರಕ ಎಸ್‌. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾ​ನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಉದ್ಯಮಿ ಮಹೇಂದ್ರ ಸಿಂಘಿ, ಸ್ಕೇ​ಟಿಂಗ್‌ ಕ್ರೀ​ಡಾ​ಪಟು ತ್ರಿಶಾ ಜಡಲಾ ಹಾಗೂ ಎಸ್ಸೆ​ಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರ ಅವರಿಗೆ ಅವ್ವ ಪ್ರಶಸ್ತಿಗೆ ಪ್ರದಾನ ಮಾಡಲಾಯಿತು. ಇದು ಸ್ಮರಣಿಕೆ ಜತೆಗೆ ₹25 ಸಾವಿರ ನಗದು ಬ​ಹು​ಮಾನ ಒಳಗೊಂಡಿದೆ.

ಇಳಕಲ್ಲನ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಉದ್ಘಾಟಿಸಿ ಮಾತನಾಡಿ, ಅವ್ವ ಪ್ರಶಸ್ತಿ ಪುರಸ್ಕೃತರಿಗೆ ಮತ್ತಷ್ಟು ಹೊಣೆಗಾರಿಕೆ ಹೆಚ್ಚಾಗಿದೆ. ಸಾಧಕರನ್ನು ಗೌರವಿಸುವ ಮೂಲಕ ಧರ್ಮ ಮಾರ್ಗದ ಕಾರ್ಯಗಳ ಮೂಲಕ ತಾಯಿಯ ಸ್ಮರಣೆ ಮಾಡುವ ಹೊರಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
8 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಇದಕ್ಕೆ ಕಾರಣ ಅವರ ಮಾಡಿದ ಸೇವೆ, ಬದ್ಧತೆ, ವ್ಯಕ್ತಿತ್ವ, ಜನಪರ ಕಾಳಜಿ ಕಾರಣ ಎಂದರು.

ಪ್ರಮುಖ ಸುದ್ದಿ :-   ಬೆಳಗಾವಿ | ಕಾರಿನ ಮೇಲೆ ಮಗುಚಿ ಬಿದ್ದ ಲಾರಿ ; ಇಬ್ಬರಿಗೆ ಗಾಯ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ 12 ಸಾಧಕರಿಗೆ ಅವ್ವ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿ ಅಕ್ಷಯಾ ಗೋಖಲೆ ಅವರು ತಾಯಿಯ ಸ್ಥಾನ, ಸಂಸ್ಕಾರದ ಮಹತ್ವ ಕುರಿತು ಮಾತನಾಡಿದರು.
ಅವ್ವ ಸೇವಾ ಟ್ರಸ್ಟ್ ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ವಸಂತ ಹೊರಟ್ಟಿ, ಭರತ ಹೊರಟ್ಟಿ, ಟ್ರಸ್ಟ್ ನ ಕಾರ್ಯದರ್ಶಿ ಶಶಿ ಸಾಲಿ, ಖಜಾಂಚಿ ರಾಜೇಂದ್ರ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement