ವೀಡಿಯೊ…| ಕೈಕೋಳ ಹಾಕಿಕೊಂಡು ಹೆಲ್ಮೆಟ್‌ ಇಲ್ಲದೆ ಬೈಕ್‌ ಚಲಾಯಿಸಿದ ಕ್ರಿಮಿನಲ್ ಆರೋಪಿ ; ಹಿಂದಿನ ಸೀಟಿನಲ್ಲಿ ಕಾನ್‌ಸ್ಟೆಬಲ್…!

ಉತ್ತರ ಪ್ರದೇಶದ ಮೈನ್‌ಪುರಿಯ ಬೀದಿಗಳಲ್ಲಿ ಒಬ್ಬ ಕ್ರಿಮಿನಲ್, ಹಗ್ಗದ ಕೈಕೋಳ ಹಾಕಿಕೊಂಡು, ಹಿಂಬದಿಗೆ ಪೊಲೀಸ್ ಪೇದೆ ಕುಳ್ಳಿರಿಸಿಕೊಂಡು ಮೋಟಾರ್‌ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ಹೋಗುವವರೊಬ್ಬರು ಈ ದೃಶ್ಯವನ್ನು ರೆಕಾರ್ಡ್‌ ಮಾಡಿದ್ದಾರೆ.
ಚಿಕ್ಕ ವೀಡಿಯೊ ಕ್ಲಿಪ್ ವಾಹನ ನಿಬಿಡ ರಸ್ತೆಯಲ್ಲಿ ಸಂಚರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸವಾರನ ಕೈ ಮಣಿಕಟ್ಟಿನಿಂದ ಆತನ ಹಿಂದೆ ಕುಳಿತಿರುವ ಕಾನ್‌ಸ್ಟೆಬಲ್‌ನ ಕೈ ವರೆಗೆ ಹಗ್ಗ ನೇತಾಡುತ್ತದೆ. ವಾಹನ ಹತ್ತಿರವಾಗುತ್ತಿದ್ದಂತೆ, ಸವಾರನು ಕೈಕೋಳ ಹಾಕಿಕೊಂಡಿರುವುದು ಗೋಚರಿಸುತ್ತದೆ. ಇದು ಆತ ಬೀದಿಗಳಲ್ಲಿ ಸಂಚರಿಸಲು ಪೋಲೀಸ್‌ನಿಂದ ಒಪ್ಪಿಗೆ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಆರೋಪಿ ಹೆಲ್ಮೆಟ್ ಧರಿಸಿರಲಿಲ್ಲ, ಆದರೆ ಕಾನ್‌ಸ್ಟೆಬಲ್ ಹೆಲ್ಮೆಟ್‌ ಧರಿಸಿದ್ದರು. ತುಂಬ ಚಳಿಯ ಅನುಭವವಾಗುತ್ತಿದ್ದ ಕಾರಣ ಕಾನ್‌ಸ್ಟೆಬಲ್ ಬೈಕ್ ಚಲಾಯಿಸಲು ಆರೋಪಿಗೆ ಬೈಕ್ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
ಆರೋಪಿಯ ಗುರುತು ಮತ್ತು ಆತನ ಆಪಾದಿತ ಅಪರಾಧದ ವಿವರಗಳು ಸ್ಪಷ್ಟವಾಗಿಲ್ಲ. ಮೈನ್‌ಪುರಿ ಪೊಲೀಸರು ಘಟನೆಯನ್ನು ಒಪ್ಪಿಕೊಂಡಿದ್ದಾರೆ, ಎಕ್ಸ್‌ನಲ್ಲಿ ಹಿಂದಿಯಲ್ಲಿ “ಸಂಬಂಧಿಸಿದ ವ್ಯಕ್ತಿಯನ್ನು ತನಿಖೆ ಮಾಡಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ಪ್ರತಿಕ್ರಿಯಿಸಿದ್ದಾರೆ. ಮತ್ತು “ಇದರಲ್ಲಿ ಏನು ಸಮಸ್ಯೆ?” ಎಂದು ಹೇಳಿದ್ದಾರೆ. ತೀವ್ರ ಚಳಿಯಾದ ನಂತರ ಪೊಲೀಸರು ಆರೊಪಿಗೆ ವಾಹನ ಸವಾರಿ ಮಾಡಲು ಹೇಳುವುದು ಸರಿ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಕೈದಿಯ ಕೈಯಲ್ಲಿ ಬೈಕ್‌ ಕೊಟ್ಟು ಸವಾರಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement