ಕನ್ನಡ ಸಾಹಿತಿ-ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

ನವದೆಹಲಿ : 2024ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಾಲಿನ ಪ್ರಶಸ್ತಿ(Sahitya Akademi Award 2024)ಯನ್ನು ಪ್ರಕಟಿಸಲಾಗಿದ್ದು, ಕನ್ನಡದ ವಿದ್ವಾಂಸ, ಭಾಷಾ ವಿಜ್ಞಾನಿ ಮತ್ತು ವಿಮರ್ಶಕ ಮೈಸೂರಿನ ಪ್ರೊ. ಕೆ.ವಿ.ನಾರಾಯಣ (K.V.Narayana) ಅವರ ʼನುಡಿಗಳ ಅಳಿವುʼ ವಿಮರ್ಶೆ ಕೃತಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ದೇಶದ 21 ಭಾಷೆಗಳ ಲೇಖಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ವಿಮರ್ಶೆ ವಿಭಾಗದಲ್ಲಿ ಪ್ರೊ.ಕೆ.ವಿ.ನಾರಾಯಣ ಅವರ ಜೊತೆಗೆ ಮರಾಠಿಯ ಸುಧೀರ್‌ ರಾಸಲ್‌ ಮತ್ತು ತೆಲುಗಿನ ಪೆನುಗೊಂಡ ಲಕ್ಷ್ಮೀನಾರಾಯಣ ಅವರು ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಫಲಕ, 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರೊ. ಕೆ.ವಿ.ನಾರಾಯಣ ಅವರ ಬಗ್ಗೆ….
ಕೆ.ವಿ.ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ. ತಂದೆ ವೀರಣ್ಣ ಹಾಗೂ ತಾಯಿ ಕೆಂಚಮ್ಮ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ನಂತರ ಮೈಸೂರಿನ ಯುವ ರಾಜಾಸ್ ಕಾಲೇಜಿನಲ್ಲಿ ವಿಜ್ಞಾನದ ಪದವಿ ಪಡೆದರು. ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಹೈಸ್ಕೂಲ್‌ ಶಿಕ್ಷಕರಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಸಾಹಿತ್ಯದ ಗೀಳಿನಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. . ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನೇತೃತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರಿದರು. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಅಧ್ಯಯನ ಮಾಡಿ ಪಿಎಚ್. ಡಿ. ಪದವಿ ಪಡೆದರು. ಕೆ.ವಿ.ನಾರಾಯಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಆರಂಭದ ವರ್ಷಗಳಲ್ಲೇ ರಿಜಿಸ್ಟಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಗಳನ್ನು ನೋಡಿಕೊಂಡರು. ನಿವೃತ್ತಿಯಾಗುವವರೆಗೂ ಹಲವು ಕುಲಪತಿಗಳ ಅವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಪ್ರಮುಖ ಸುದ್ದಿ :-   ಚಿತ್ರದುರ್ಗ | ಬಡಿದಾಡಿಕೊಂಡ ಪಿಎಸ್‌ಐ-ಬಿಜೆಪಿ ಮುಖಂಡ ; ವೀಡಿಯೊ ವೈರಲ್‌

ಪ್ರಮುಖ ಕೃತಿಗಳು
ಕನ್ನಡ ಜಗತ್ತು:ಅರ್ಧ ಶತಮಾನ
ಬೇರು, ಕಂಡ, ಚಿಗುರು
ಭಾಷೆಯ ಸುತ್ತಮುತ್ತ
ಮತ್ತೆ ಭಾಷೆಯ ಸುತ್ತಮುತ್ತ
ನಮ್ಮೊಡನೆ ನಮ್ಮ ನುಡಿ
ಸಾಹಿತ್ಯ ತತ್ವ – ಬೇಂದ್ರೆ ದೃಷ್ಟಿ
ಕನ್ನಡದ ಉಳಿಕಂಟೆಗಳು : ಕನ್ನಡದ ಆಡುನುಡಿಯ ಸೊಲ್ಲರಿಮೆ
ಸ್ಥಳನಾಮಗಳು – ಪರಿವಾತನೆ ಮತ್ತು ಪ್ರಭಾವ
ಶೈಲಿಶಾಸ್ತ್ರ – ಸಾಹಿತ್ಯ ಪರಿಭಾಷಿಕ ಪುರುಷ
ಭಾಷೆ (ಕನ್ನಡ ವಿಶ್ವಕೋಶ)
ಧ್ವನ್ಯಾಲೋಕದ ಓದು
ತೊಂಡುಮೇವು
ಧ್ವನ್ಯಾಲೋಕ: ಒಂದು ಅಧ್ಯಯನ -ಪಿಎಚ್ಡಿ ಮಹಾ ಪ್ರಬಂಧ
ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಾಹಿತ್ಯ ವಿಮರ್ಶೆಗಾಗಿ ಜಿಎಸ್‌ಎಸ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಎಲ್ ಬಸವರಾಜು ಪ್ರಶಸ್ತಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement